ಈ ಬಾರಿಯ ದಸರಾ ಅದ್ಧೂರಿಯಾಗಿತ್ತು…! ಹಾಗೆಯೇ ಅಧ್ವಾನದಿಂದಲೂ ಕೂಡಿತ್ತು..!!
ಮೈಸೂರು

ಈ ಬಾರಿಯ ದಸರಾ ಅದ್ಧೂರಿಯಾಗಿತ್ತು…! ಹಾಗೆಯೇ ಅಧ್ವಾನದಿಂದಲೂ ಕೂಡಿತ್ತು..!!

October 9, 2022

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತೀವ್ರ ಬೇಸರ

ಲೋಪದೋಷಗಳ ಬಗ್ಗೆ ಶ್ವೇತಪತ್ರಕ್ಕೆ ಆಗ್ರಹ

ಜನರ ಆಕರ್ಷಿಸುವ ಯಾವೊಂದು ಕಾರ್ಯಕ್ರಮವಿಲ್ಲ

ಸ್ಥಳೀಯ ನಾಯಕರ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ

ದಸರಾ ಅರ್ಥಪೂರ್ಣ ಆಚರಣೆಗೆ ಪ್ರಾಧಿಕಾರ ರಚನೆ ಆಗಬೇಕು

ದಸರಾ ಕವಿಗೋಷ್ಠಿ ಸತ್ತ ಗೋಷ್ಠಿಯಾಗಿತ್ತು!

ಮೈಸೂರು,ಅ.೮(ಎಂಟಿವೈ)- ಈ ಬಾರಿ ನಾಡ ಹಬ್ಬ ದಸರಾ ಅದ್ಧೂರಿ ಯಾಗಿಯೂ ಇತ್ತು. ಅಧ್ವಾನವೂ ಆಗಿತ್ತು. ಪೂರ್ಣ ಪ್ರಮಾಣದಲ್ಲಿ ಪುನರ್ ವಿಮರ್ಶೆಗೆ ಒಳಪಡಿಸುವುದರೊಂದಿಗೆ ಆಗಿರುವ ಲೋಪದೋಷಗಳ ಕುರಿತಂತೆಯೂ ಶ್ವೇತ ಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಅಪಾರ ಸಂಖ್ಯೆಯ ಜನರು ಜಂಬೂಸವಾರಿ ವೀಕ್ಷಿಸಿದ್ದಾರೆ. ಲಕ್ಷಾಂತರ ಜನರನ್ನು ಆಕರ್ಷಿಸಿದ್ದು, ದಸರಾದ ಯಾವುದೇ ಕಾರ್ಯಕ್ರಮವಲ್ಲ. ಎರಡು ವರ್ಷದ ನಂತರ ನಡೆದ ಜಂಬೂಸವಾರಿ ಯನ್ನು ಕಣ್ತುಂಬಿ ಕೊಳ್ಳಲು ಜನ ಸ್ವಯಂ ಪ್ರೇರಣೆಯಿಂದ ಆಗಮಿ ಸಿದ್ದಾರೆ. ಜನರನ್ನು ಆಕರ್ಷಿಸುವ ಯಾವ ಕಾರ್ಯ ಕ್ರಮವೂ ಈ ಬಾರಿ ನಡೆದಿಲ್ಲ ಎಂದು ವಿಷಾಧಿಸಿದರು.

ದಸರಾ ಲೆಕ್ಕ ಕೊಡುವುದಕ್ಕೆ ಮಾತ್ರ ಸೀಮಿತವಾಗ ಬಾರದು. ೨೦೨೨ನೇ ಸಾಲಿನ ದಸರಾ ಮಹೋ ತ್ಸವವನ್ನು ಸಂಪೂರ್ಣವಾಗಿ ಪರಾಮರ್ಶಿಸಬೇಕು. ಎಲ್ಲಿ ಲೋಪವಾಯಿತು ಎಂದು ಗುರುತಿಸಬೇಕು. ಪುನರ್ ವಿಮರ್ಶೆ ಮಾಡಿದಾಗ ಆಗಿರುವ ಲೋಪ ಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಮುಂದಿನ ದಸರಾಗಳಲ್ಲಿ ಅಂತಹ ತಪ್ಪುಗಳು ಪುನರಾವರ್ತನೆ ಯಾಗದಂತೆ ಎಚ್ಚರ ವಹಿಸಲು ಸಾಧ್ಯವಾಗಲಿದೆ. ಆಗಿರುವ ಲೋಪವನ್ನು ಮುಂದಿನ ದಿನಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಲೇಬೇಕು ಎಂದರು.

ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ: ದಸರಾ ಮಹೋ ತ್ಸವದಲ್ಲಿ ಮೈಸೂರಿನ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನಾನು ೫ ಬಾರಿ ದಸರಾ ಮಹೋತ್ಸವ ನಡೆಸಿದ್ದೇನೆ. ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್ ಸಹ ದಸರಾ ನಡೆಸಿದ್ದಾರೆ. ಆದರೆ, ಈ ಬಾರಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಶಾಸಕ ಎಸ್.ಎ.ರಾಮದಾಸ್ ದಸರಾ ಕಾರ್ಯ ಕ್ರಮದಿಂದ ದೂರವುಳಿದರು. ಸಂಸದ ಪ್ರತಾಪ ಸಿಂಹ ಒಂದೆರಡು
ಕಾರ್ಯಕ್ರಮದಲ್ಲಿ ಮಾತ್ರ ಪಾಲ್ಗೊಂಡು ಉಳಿದ ಕಾರ್ಯಕ್ರಮಗಳಿಗೆ ಗೈರಾದರು. ಈ ಎಲ್ಲವೂ ಕಡೆಗಣನೆಯನ್ನು ತೋರ್ಪಡಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನುಭವದ ಕೊರತೆ: ನಾಡಹಬ್ಬವನ್ನು ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಆಚರಿಸಬೇಕಾದರೆ ಇನ್ನಾದರೂ ದಸರಾ ಪ್ರಾಧಿಕಾರ ರಚಿಸಬೇಕು. ಸ್ಥಳೀಯರು ಜಿಲ್ಲಾ ಮಂತ್ರಿಯಾಗಿದ್ದರೆ, ದಸರಾ ಮಹೋತ್ಸವದ ಅದ್ಧೂರಿಯಾಗಿ ನಡೆಸಲು ಸಹಕಾರಿಯಾಗುತ್ತಿತ್ತು. ಜಿಲ್ಲಾ ಮಂತ್ರಿ ಎಸ್.ಟಿ.ಸೋಮಶೇಖರ್ ಅವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಅವರೂ ದಸರಾ ಯಶಸ್ಸಿಗೆ ಶ್ರಮಿಸಿದ್ದಾರೆ. ಆದರೆ, ಅಧಿಕಾರಿಗಳು ಹೇಳಿದಂತೆ ಕೇಳಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಸಾಹಿತಿಗಳು, ಸಂಘ-ಸAಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಜನ ನುಗ್ಗಿದರು: ಜಂಬೂ ಸವಾರಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಹಲವೆಡೆ ಜನರು ನುಗ್ಗಿದರು. ಅಂಬಾರಿ ಆನೆಯೇ ಕಾಣಿಸುತ್ತಿರಲಿಲ್ಲ. ಅಂಬಾರಿ ಮುಂದೆ ಜನರ ದಂಡೇ ನೆರೆದಿತ್ತು. ಈ ವೇಳೆ ಏನಾದರು ಆನಾಹುತ ಸಂಭವಿಸಿದ್ದರೆ ಯಾರು ಹೊಣೆ? ಅದೃಷ್ಟಕ್ಕೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಏನು ಆಗಲಿಲ್ಲ ಎಂದರು.

ಅನುದಾನದ ಕೊರತೆ: ಅದ್ಧೂರಿ ದಸರಾ ಆಚರಿಸಲು ಉನ್ನತ ಮಟ್ಟದ ಸಭೆಯಲ್ಲೂ ಮುಖ್ಯಮಂತ್ರಿಗಳು ೩೫ ಕೋಟಿ ರೂ. ನೀಡುವುದಾಗಿ ತಿಳಿಸಿದ್ದರು. ಆದರೆ, ದಸರಾ ಕಾರ್ಯಕ್ರಮಗಳಿಗೆ ಅನುದಾನ ಕೊರತೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಸೊರಗಿತು. ಗ್ರಾಮೀಣ ದಸರಾ ೩ ಲಕ್ಷ ರೂ. ನಿಗದಿ ಮಾಡಲಾಗಿತ್ತಾದರೂ, ಕೊನೆಗೆ ೧.೫೦ ಲಕ್ಷ ರೂ. ಕೊಟ್ಟಿದ್ದಾರೆ. ಇದರಿಂದ ಗ್ರಾಮೀಣ ದಸರಾ ಕೂಡ ವ್ಯವಸ್ಥಿತವಾಗಿ ನಡೆಯಲಿಲ್ಲ ಎಂದು ಕಿಡಿಕಾರಿದರು.

ಕ್ರೀಡಾ ದಸರಾ ಸೊರಗಿತು: ಪ್ರತಿವರ್ಷ ಸಂಭ್ರಮದಿAದ ನಡೆಯುತ್ತಿದ್ದ ಕ್ರೀಡಾ ದಸರಾ ಈ ಬಾರಿ ಉತ್ಸಾಹ ಕಳೆದುಕೊಂಡಿತು. ಆಸಕ್ತಿಯಿಂದ ಬೇರೆ ಜಿಲ್ಲೆಗಳಿಂದ ಬಂದಿದ್ದ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಮಾಡದೆ, ರಸ್ತೆ ಬದಿಯಲ್ಲೇ ವಾಸ್ತವ್ಯ ಹೂಡುವಂತೆ ಮಾಡಲಾಯಿತು. ದಸರಾ ಕ್ರೀಡಾಕೂಟದಲ್ಲಿ ಮ್ಯಾರಥಾನ್ ಮಾಡುವುದಾಗಿ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಆದರೆ, ಮ್ಯಾರಥಾನ್ ನಡೆಯಲೇ ಇಲ್ಲ. ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವವರಿಗೆ ಟಿ-ಶರ್ಟ್ ಕೊಡಲು ಹಣವಿಲ್ಲ ಎಂಬ ಸಬೂಬು ಹೇಳಿ ಆ ಓಟವನ್ನೇ ಸ್ಥಗಿತಗೊಳಿಸಲಾಗಿದೆ. ಪ್ರಾಯೋಜಕರನ್ನು ಹುಡುಕಿ ಮ್ಯಾರಥಾನ್ ನಡೆಸಬಹುದಾಗಿತ್ತು. ಹಣದ ಕೊರತೆಯಿಂದ ಸಾಕಷ್ಟು ಕ್ರೀಡಾ ಚಟುವಟಿಕೆಗಳನ್ನು ನಡೆಸಿಲ್ಲ. ಇದು ಕ್ರೀಡಾಪಟುಗಳ ಉತ್ಸಾಹದ ಉತ್ಸವ ಆಗಲಿಲ್ಲ ಎಂದು ದೂರಿದರು.

ಕವಿಗೋಷ್ಠಿ ಸತ್ತಗೋಷ್ಠಿಯಾಗಿತ್ತು: ಪ್ರತಿಷ್ಠಿತ ದಸರಾ ಕವಿಗೋಷ್ಠಿ ಈ ಬಾರಿ ಸತ್ತ ಗೋಷ್ಠಿಯಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಮರಣ ಹೊಂದಿರುವ ಕವಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಸತ್ತಿದ್ದವರ ಆತ್ಮಗಳಿಂದ ಕವಿಗೋಷ್ಠಿ ನಡೆಸಲು ಆಲೋಜಿಸಿದ್ದಂತೆ ಭಾಸವಾಗುತ್ತಿತ್ತು. ನಾನು ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿz್ದೆÃನೆ. ನನಗೆ ದಸರಾ ಮಾಡಿದ ಅನುಭವ ಇತ್ತು. ನನ್ನ ಸಲಹೆ ಕೇಳಲಿಲ್ಲ ಎಂದು ಗುಡುಗಿದರು.

ಸ್ಥಳೀಯ ಕಲಾವಿದರ ನಿರ್ಲಕ್ಷö್ಯ: ನಾನು ಸಚಿವನಾಗಿದ್ದಾಗ ಯುವ ದಸರಾ ಆರಂಭಿಸಿದ್ದೆ. ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯುವ ದಸರಾ ನಡೆಸಲಾಗುತ್ತಿತ್ತು. ಈ ಬಾರಿ ಯುವ ದಸರಾದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗಿದೆ. ಗಾಯಕ ಸೋನು ನಿಗಮ್ ಅವರಿಗೆ ೪೦ ಲಕ್ಷöರೂ. ನೀಡಲಾಗಿದೆ. ಆದರೆ, ಮೈಸೂರಿನವರೇ ಆಗಿರುವ ದರ್ಶನ್, ಯಶ್ ಅವರನ್ನು ಆಹ್ವಾನಿಸಿಲ್ಲ. ಕಾರ್ಯಕ್ರಮದ ಮೊದಲ ದಿನ ಪುನೀತ್ ನಮನ ಕಾರ್ಯಕ್ರಮಕ್ಕೆ ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಆಗಮಿಸಿದ್ದರು. ಅವರನ್ನು ನೋಡಲು ಸಾಕಷ್ಟು ಜನ ಸೇರಿದ್ದರು. ಕನ್ನಡದ ನಟರು, ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಜನ ಸೇರುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

Translate »