ಮೈಸೂರಿನ ರಸ್ತೆ ಕಾಮಗಾರಿ ೩ ದಿನದಲ್ಲಿ ಆರಂಭ
ಮೈಸೂರು

ಮೈಸೂರಿನ ರಸ್ತೆ ಕಾಮಗಾರಿ ೩ ದಿನದಲ್ಲಿ ಆರಂಭ

October 9, 2022

ದಸರಾ ಸಂದರ್ಭ ೧೫ ಕೋಟಿ ರೂ. ಕೆಲಸ ಮುಗಿದಿದೆ; ಉಳಿದ ೨೫೦ ಕೋಟಿ ಕಾಮಗಾರಿಗಳ ೨ ತಿಂಗಳೊಳಗೆ ಪೂರ್ಣಗೊಳಿಸುವ ಉದ್ದೇಶಮಳೆ ಮತ್ತು ದಸರಾ ಮಹೋತ್ಸವದಿಂದಾಗಿ ರಸ್ತೆ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಉಳಿದ ಎಲ್ಲಾ ರಸ್ತೆಗಳಿಗೂ ಡಾಂಬರ್ ಹಾಕುವ ಕೆಲಸವನ್ನು ಶೀಘ್ರ ಮತ್ತೆ ಆರಂಭಿಸುತ್ತೇವೆ. ಸೋಮವಾರ ಆಯುಕ್ತರ ಜೊತೆ ಪರಿಶೀಲನೆ ನಡೆಸಿ ಯಾವ ಯಾವ ರಸ್ತೆ ಗಳನ್ನು ಕೈಗೆತ್ತಿಕೊಳ್ಳ ಬೇಕೆಂಬುದನ್ನು ಗುರ್ತಿ ಸುತ್ತೇವೆ. ಕೆಲವೆಡೆ ಮಳೆ ನೀರು, ಚರಂಡಿ, ಉದ್ಯಾನ ವನಗಳ ಅಭಿವೃದ್ಧಿ ಕಾಮಗಾರಿ ಗಳಿಗೂ ಟೆಂಡರ್ ಮಾಡಲಾ ಗಿದೆ. ಒಟ್ಟಾರೆ ಇನ್ನೆರಡು ತಿಂಗ ಳೊಳಗಾಗಿ ಮೈಸೂರಿನ ಎಲ್ಲಾ ರಸ್ತೆಗಳನ್ನು ಡಾಂಬರೀ ಕರಣ ಮಾಡುತ್ತೇವೆ.
-ಶಿವಕುಮಾರ್, ಮೇಯರ್

ಮೈಸೂರು, ಅ.೮(ಆರ್‌ಕೆ)-ಮೈಸೂರಿನ ರಸ್ತೆಗಳ ಗುಂಡಿ ಮುಚ್ಚಿ, ಡಾಂಬರೀಕರಣ ಮಾಡುವ ೨೫೦ ಕೋಟಿ ರೂ.ಗಳ ಕಾಮಗಾರಿಗೆ ಮರು ಚಾಲನೆ ನೀಡಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ದಸರಾ ಮಹೋತ್ಸವಕ್ಕೆ ಪ್ರಮುಖ ರಸ್ತೆ ಸೇರಿದಂತೆ ಮೈಸೂರಿನ ಎಲ್ಲಾ ವಾರ್ಡ್ಗಳ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಟೆಂಡರ್ ಮಾಡಲಾಗಿತ್ತಾದರೂ, ಮಳೆಯಿಂದಾಗಿ ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳನ್ನಷ್ಟೇ ಡಾಂಬರಿಕರಣ ಮಾಡಲು ಸಾಧ್ಯವಾಗಿತ್ತು. ಇದೀಗ ದಸರಾ ಮಹೋತ್ಸವ ಮುಗಿದಿದ್ದು, ಮಳೆಯೂ ಬಿಡುವು ನೀಡಿರುವುದರಿಂದ ೩ ದಿನದೊಳಗಾಗಿ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಸೂಪರಿಂಟೆAಡಿAಗ್ ಇಂಜಿನಿಯರ್ ಮಹೇಶ್ ತಿಳಿಸಿದ್ದಾರೆ. ದಸರಾ ವೇಳೆ ನಾರಾಯಣ ಶಾಸ್ತಿç ರಸ್ತೆ, ಕುವೆಂಪು ನಗರದ ಉದಯ ರವಿ ರಸ್ತೆ, ಪಂಚಮAತ್ರ ರಸ್ತೆ, ಕಾಂತರಾಜ ಅರಸ್ ರಸ್ತೆ, ಸಬರ್ಬನ್ ಬಸ್ ನಿಲ್ದಾಣದ ಎದುರಿನ ಬಿ.ಎನ್.ರಸ್ತೆ, ರಾಮಾನುಜ ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳ ಡಾಂಬರೀಕರಣ ಕಾಮಗಾರಿಯನ್ನು ೧೫ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಸುಮಾರು ೨೦೦ ಕೋಟಿ ರೂ., ಕೆ.ಆರ್.ಕ್ಷೇತ್ರದ ಶಾಸಕಎಸ್.ಎ.ರಾಮದಾಸ್ ಅವರು ಸುಮಾರು ೧೫೦ ಕೋಟಿ ರೂ. ಹಾಗೂ ಮೇಯರ್ ಆಗಿದ್ದ ಸುನಂದಾ ಪಾಲನೇತ್ರ ಅವರು ೨೫ ಕೋಟಿ ರೂ. ಅನುದಾನವನ್ನು ರಸ್ತೆ, ಚರಂಡಿ, ಪಾರ್ಕ್ಗಳ ಅಭಿವೃದ್ಧಿಗಾಗಿ ತಂದಿದ್ದರು. ಜೊತೆಗೆ ಪಾಲಿಕೆಯ ೧೦ ಕೋಟಿ ರೂ. ಹಾಗೂ ೧೫ನೇ ಹಣಕಾಸು ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸುಮಾರು ೨೫೦ ಕೋಟಿ ರೂ. ವೆಚ್ಚದ ರಸ್ತೆಗೆ ಡಾಂಬರ್ ಹಾಕಲು ಖರ್ಚು ಮಾಡುತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮೂರು ದಿನದೊಳಗಾಗಿ ಉಳಿದ ರಸ್ತೆ ಕಾಮಗಾರಿ ಆರಂಭಿಸುವAತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಎರಡು ತಿಂಗಳೊಳಗಾಗಿ ಮೈಸೂರಿನ ಬಹುತೇಕ ಎಲ್ಲಾ ರಸ್ತೆಗಳಿಗೂ ಡಾಂಬರ್ ಹಾಕಲಾಗುವುದು. ಮೈಸೂರು ಮಹಾನಗರ ಪಾಲಿಕೆ, ಮುಡಾ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಏಕ ಕಾಲದಲ್ಲಿ ರಸ್ತೆ ಕಾಮಗಾರಿಗಳು ನಡೆಯಲಿದ್ದು, ೨ ತಿಂಗಳೊಳಗಾಗಿ ಎಲ್ಲಾ ರಸ್ತೆಗಳಿಗೂ ಡಾಂಬರ್ ಹಾಕುವ ಕೆಲಸ ಪೂರ್ಣಗೊಳಿಸಲು ಉದ್ದೇಶಿಸಲಾ ಗಿದೆ ಎಂದು ಮಹೇಶ್ ಅವರು ತಿಳಿಸಿದರು.

Translate »