ಸಾರ್ವಜನಿಕರ ಸುಲಿಗೆ ಮಾಡುವ ಓಲಾ, ಊಬರ್ ವಾಹನ ಸೀಜ್
ಮೈಸೂರು

ಸಾರ್ವಜನಿಕರ ಸುಲಿಗೆ ಮಾಡುವ ಓಲಾ, ಊಬರ್ ವಾಹನ ಸೀಜ್

October 9, 2022

ಸಾರಿಗೆ ಸಚಿವ ಶ್ರೀರಾಮುಲು ಸೂಚನೆ ಷರತ್ತು ಉಲ್ಲಂಘನೆ ಸಹಿಸಲಾಗದು
ಬೆಂಗಳೂರು,ಅ.೮(ಕೆಎAಶಿ)-ಲೈಸೆನ್ಸ್ ನೀಡುವಾಗ ಸಾರಿಗೆ ಇಲಾಖೆ ವಿಧಿಸಿರುವ ಷರತ್ತು ಉಲ್ಲಂಘಿಸಿ ಪ್ರಯಾಣಿಕರಿಂದ ದುಬಾರಿ ದರ ಪಡೆಯುವ ಓಲಾ, ಊಬರ್ ವಾಹನಗಳನ್ನು ಸೀಜ್ ಮಾಡಲು ಆದೇಶ ನೀಡಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ನಿಯಮ ಉಲ್ಲಂಘಿಸಿರುವ ವಾಹಗಳನ್ನು ಸೀಜ್ ಮಾಡಿ, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ದುಬಾರಿ ದರ ಪಡೆಯುತ್ತಿರುವ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಆ ಸಂಸ್ಥೆಗಳಿAದ ಉತ್ತರ ಪಡೆದು ಒಂದೆರಡು ದಿನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗ ದಂತೆ ಸೇವೆ ಒದಗಿಸಲು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಲೈಸೆನ್ಸ್ ನೀಡಲಾಗಿತ್ತು. ಲೈಸೆನ್ಸ್ ನೀಡುವಾಗ ಇಲಾಖೆ ನಿಯಮ ಗಳು ಉಲ್ಲಂಘನೆಯಾಗಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆದರೂ ಸಂಸ್ಥೆಗಳು ನಿಯಮ ಉಲ್ಲಂಘಿಸುವ ಬಗ್ಗೆ ದೂರುಗಳು ಬರುತ್ತಿವೆ. ನೋಟಿಸ್‌ಗೆ ಆ ಸಂಸ್ಥೆಗಳು ನೀಡುವ ಉತ್ತರ ಪರಿಶೀಲಿ ಸಿದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಮೀಸಲಾತಿ ಹೆಚ್ಚಳದಿಂದ ಸಮಸ್ಯೆ ಇಲ್ಲ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಯಾವುದೇ ರೀತಿಯ ತೊಡಕಾಗುವುದಿಲ್ಲ. ಹಾಗೆಯೇ ಯಾವುದೇ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಶೇ.೧ರಷ್ಟು ಕಡಿಮೆ ಮಾಡುವುದಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಾಗ ಒಪ್ಪಿಗೆ ದೊರೆಯುವ ವಿಶ್ವಾಸ ವಿದೆ. ಎಸ್ಸಿ-ಎಸ್ಟಿ ವಿಚಾರದಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಹಿಂದಿನ ಸಾಕಷ್ಟು ನಿದರ್ಶನಗಳಿವೆ. ಹೀಗಾಗಿ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ತಮಿಳುನಾಡಿನಲ್ಲಿ ಶೇ.೬೯, ಮಹಾರಾಷ್ಟçದಲ್ಲಿ ಶೇ.೬೮, ಮಧ್ಯಪ್ರದೇಶದಲ್ಲಿ ಶೇ.೭೩, ರಾಜಸ್ಥಾನದಲ್ಲಿ ಶೇ.೬೪, ಜಾರ್ಖಂಡ್ ನಲ್ಲಿ ಶೇ.೭೦, ಉತ್ತರಪ್ರದೇಶದಲ್ಲಿ ಶೇ.೬೦ರಷ್ಟು ಮೀಸಲಾತಿ ಪ್ರಮಾಣವಿದ್ದು, ತೆಲಂಗಾಣ ಸರ್ಕಾರವೂ ಶೇ.೧೦ರಷ್ಟು ಮೀಸ ಲಾತಿ ಪ್ರಮಾಣ ಹೆಚ್ಚಿಸಿದೆ. ಹೀಗಾಗಿ ರಾಜ್ಯದಲ್ಲಿ ಮೀಸಲಾತಿ ಶೇ.೫೦ರ ಗಡಿ ದಾಟುವುದರಿಂದ ಕಾನೂನಿನ ತೊಡಕಾಗಲಿದೆ ಎಂಬ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

೬ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ: ಬೆಂಗಳೂರು ಕೇಂದ್ರ ವಿಭಾಗದ ಎಲ್.ಮುನಿಸ್ವಾಮಿ(ಸಾಮಾಜಿಕ ಕ್ಷೇತ್ರ), ಬೆಂಗಳೂರು ವಿಭಾಗ ಎನ್.ನಾಗಪ್ಪ, ಬೆಳಗಾವಿ ವಿಭಾಗದ ನಾಗಪ್ಪ ಎಚ್.ಕೋನಿ(ಇತರೆ ಕ್ಷೇತ್ರ), ಕಲ್ಬುರ್ಗಿ ವಿಭಾಗದ ಪದ್ಮಾ(ಕಲೆ), ಮೈಸೂರು ವಿಭಾಗ ಸುಭಾಷ್ (ಸಾಮಾಜಿಕ) ಹಾಗೂ ಕಲಬುರಗಿ ವಿಭಾಗದ ಉಷಾರಾಣಿ (ಕಲಾ ಮತ್ತು ಸಾಮಾಜಿಕ ಕ್ಷೇತ್ರ) ಈ ಆರು ಗಣ್ಯರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪುರಸ್ಕೃತ ರಿಗೆ ಪ್ರಶಸ್ತಿ ಫಲಕ, ೨೦ ಗ್ರಾಂ ಚಿನ್ನದ ಪದಕ ಹಾಗೂ ೫ ಲಕ್ಷ ನಗದು ನೀಡಿ ಗೌರವಿಸಲಾಗುವುದು ಎಂದರು. ವಿಶ್ರಾಂತ ಪ್ರಾಧ್ಯಾ ಪಕ ಡಾ.ಕಟ್ಲಬಾಳ ಪನ್ನಂಗಧರ ಅವರ ನೇತೃತ್ವದ ಸಮಿತಿ ೨೦೨೨ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ ಎಂದರು.

Translate »