ನಂಜರಾಜ ಬಹದ್ದೂರ್ ಛತ್ರದಲ್ಲಿ  ಇವಿಎಂ, ವಿವಿ ಪ್ಯಾಟ್ ಸ್ಟ್ರಾಂಗ್ ರೂಂ
ಮೈಸೂರು

ನಂಜರಾಜ ಬಹದ್ದೂರ್ ಛತ್ರದಲ್ಲಿ ಇವಿಎಂ, ವಿವಿ ಪ್ಯಾಟ್ ಸ್ಟ್ರಾಂಗ್ ರೂಂ

March 14, 2019

ಮೈಸೂರು: ಲೋಕಸಭಾ ಚುನಾವಣೆಗೆ ಎಲೆಕ್ಟ್ರಾನಿಕ್ಸ್ ವೋಟಿಂಗ್ ಮೆಷಿನ್ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಮೈಸೂರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಲಾಗಿದೆ.

ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳು ಕಳೆದ ಜನವರಿ ತಿಂಗಳಿಂದಲೇ ನಂಜರಾಜ ಬಹ ದ್ದೂರ್ ಛತ್ರದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಸುರಕ್ಷಿತವಾಗಿಡಲು ಸೂಕ್ತ ವ್ಯವಸ್ಥೆ ಮಾಡಿದ್ದಾರೆ.

ಛತ್ರದ ಎರಡು ಹಾಲ್‍ಗಳಿಗೆ ಫಾಲ್ಸ್ ಸೀಲಿಂಗ್ ಮಾಡಿ ಕಿಟಕಿ ಬಾಗಿಲುಗಳಿಗೆ ಫ್ಲೈವುಡ್ ಶೀಟ್ ಗಳಿಂದ ಬಂದ್ ಮಾಡಿ, ಪ್ರಧಾನ ದ್ವಾರವನ್ನು ಹೊರತುಪಡಿಸಿ ಕಲ್ಯಾಣ ಮಂಟಪ ಕಟ್ಟಡದ ಎಲ್ಲಾ ಬಾಗಿಲುಗಳನ್ನೂ ಬಂದ್ ಮಾಡಲಾಗಿದೆ.

ಪ್ರವೇಶ ದ್ವಾರ, ಹಾಲ್‍ಗಳು, ಆವರಣ ಸೇರಿದಂತೆ ಒಟ್ಟು 12 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಸ್ಟೋರೇಜ್ ರೂಂ, ಸ್ಟ್ರಾಂಗ್ ರೂಂ, ಸಿಸಿ ಟಿವಿ ಮಾನಿಟರಿಂಗ್ ರೂಂ, ಪೊಲೀಸ್ ಕಂಟ್ರೋಲ್ ರೂಂ, ಫೆಸ್ಟ್ ಲೆವೆಲ್ ಚೆಕಿಂಗ್ ಹಾಲ್(ಈಐಅ ಊಚಿಟಟ) ಗಳನ್ನು ಸ್ಥಾಪಿಸಿದ್ದು, ಚುನಾವಣಾ ಪ್ರಕ್ರಿಯೆಗೆ ನೇಮಿಸಿ ರುವ ಅಧಿಕಾರಿಗಳ ಮೊಬೈಲ್ ಫೋನ್‍ಗಳನ್ನು ಸುರಕ್ಷಿತವಾಗಿರುವ ಸ್ಥಳವನ್ನೂ ನಿಗದಿಪಡಿಸಿ ಅಲ್ಲಿ ಓರ್ವ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಈಗಾಗಲೇ ಫೆಬ್ರವರಿ ಮಾಹೆಯಲ್ಲಿ ಬಿಇಎಲ್‍ನ 12 ಮಂದಿ ಇಂಜಿನಿಯರ್‍ಗಳು ಒಮ್ಮೆ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸುತ್ತಿರುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‍ಗಳನ್ನು ಪರಿಶೀಲಿಸಿ ಅವು ಸಮರ್ಪಕವಾಗಿ ಕೆಲಸ ಮಾಡು ತ್ತಿವೆಯೇ ಎಂಬುದನ್ನು ಪರಿಶೀಲಿಸಿ ದೃಢೀಕರಿಸಿದ್ದಾರೆ.

ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪವೀಗ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳ ಸ್ಟ್ರಾಂಗ್ ರೂಂ ಆಗಿ ಪರಿವರ್ತನೆಯಾಗಿದ್ದು, ಕಟ್ಟಡದ ಸುತ್ತ ಸಾರ್ವ ಜನಿಕರ್ಯಾರೂ ಸುಳಿಯದಂತೆ ಬ್ಯಾರಿಕೇಡ್‍ಗಳನ್ನು ಅಳ ವಡಿಸಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಅವರನ್ನು ಸ್ಟೋರೇಜ್ ರೂಂನ ನೋಡಲ್ ಅಧಿಕಾರಿಯಾಗಿ ಹಾಗೂ ಕಂದಾಯ ಇಲಾಖೆಯ ನಿಜಾಮುದ್ದೀನ್ ಅವರನ್ನು 2ನೇ ಇನ್‍ಚಾರ್ಜ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಮೊದಲ ಸುತ್ತಿನ ತಪಾಸಣೆ(ಈಐಅ ) ಯಾಗಿರುವ ಎಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ವಿವಿ ಪ್ಯಾಟ್‍ಗಳನ್ನು ನಂಬರ್ ಪ್ರಕಾರ ಕ್ರಮವಾಗಿ ಪ್ಯಾಕ್ ಮಾಡುವ ಪ್ರಕ್ರಿಯೆ ಸ್ಟೋರೇಜ್ ರೂಂನಲ್ಲಿ ಪ್ರಸ್ತುತ ನಡೆಯುತ್ತಿದೆ.

ಸಂಗ್ರಹಣಾ ಕೊಠಡಿಯಲ್ಲಿ ಮೂರು ಪಾಳಿಯಂತೆ ದಿನದ 24 ಗಂಟೆಯೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ಥಳದಲ್ಲಿ ಸಿದ್ಧಪಡಿಸಿರುವ ಪೊಲೀಸ್ ಕಂಟ್ರೋಲ್ ರೂಂ ಸಹ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ.

ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಯ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೆ.ಆರ್, ಎನ್.ಆರ್, ಚಾಮರಾಜ ಕ್ಷೇತ್ರಗಳ ಒಟ್ಟು 1813 ಮತಗಟ್ಟೆಗಳಿಗೆ ಬಳಸುವ 4000 ಬ್ಯಾಲೆಟ್ ಯೂನಿಟ್ ಗಳು, 3500 ಕಂಟ್ರೋಲ್ ಯೂನಿಟ್ ಹಾಗೂ 3000 ವಿವಿ ಪ್ಯಾಟ್‍ಗಳನ್ನು ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಲಾಗಿದೆ.

ಮುಂದೆ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳಲ್ಲಿ ಡಮ್ಮಿ ಮತದಾನ ಮಾಡಿ ಪರೀಕ್ಷಿಸಿ ಅಂತಿಮವಾಗಿ ಮಸ್ಟರಿಂಗ್ ಸ್ಥಳದಿಂದ ಮತಗಟ್ಟೆಗಳಿಗೆ ಕೊಂಡೊಯ್ಯಲಾಗುವುದು.

Translate »