ಚಾಮುಂಡಿಬೆಟ್ಟದ ನಂದಿ ವಿಗ್ರಹ  ಸುತ್ತಮುತ್ತ ಸಸ್ಯ ಸಂಕುಲ ಅಗ್ನಿಗಾಹುತಿ
ಮೈಸೂರು

ಚಾಮುಂಡಿಬೆಟ್ಟದ ನಂದಿ ವಿಗ್ರಹ ಸುತ್ತಮುತ್ತ ಸಸ್ಯ ಸಂಕುಲ ಅಗ್ನಿಗಾಹುತಿ

March 14, 2019

ಮೈಸೂರು: ಚಾಮುಂಡಿಬೆಟ್ಟದ ನಂದಿ ವಿಗ್ರಹದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಕಾಣಿಸಿ ಕೊಂಡ ಬೆಂಕಿಯಿಂದ ಒಣ ಹುಲ್ಲು ಸೇರಿದಂತೆ ಇನ್ನಿತರ ಗಿಡ-ಮರಗಳು ಸುಟ್ಟು ಕರಕಲಾಗಿವೆ.

ಧೂಮಪಾನ ಮಾಡಿದ ಕಿಡಿ ಗೇಡಿಗಳು ಸಿಗರೇಟ್ ತುಂಡನ್ನು ನಂದಿ ಸದೇ ಕಾಡಿಗೆ ಎಸೆದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದ್ದು, 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಇಂದು ಮಧ್ಯಾಹ್ನದ ವೇಳೆಯಲ್ಲಿ ಕಿಡಿಗೇಡಿಗಳು ಹುರಿಯು ತ್ತಿದ್ದ ಸಿಗರೇಟ್ ತುಂಡನ್ನು ಹಾಗೆಯೇ ಎಸೆದು ಹೋಗಿದ್ದು, ಒಣ ಹುಲ್ಲು ಹಾಗೂ ಗಿಡ-ಗಂಟಿಗಳಿಗೆ ಸಣ್ಣಗೆ ವ್ಯಾಪಿಸಿದ ಬೆಂಕಿ ಕೆಲವೇ ಸಮಯದಲ್ಲಿ ದಟ್ಟ ಹೊಗೆಯೊಂದಿಗೆ ಭಾರೀ ಪ್ರಮಾಣದಲ್ಲಿ ಹೊತ್ತಿ ಉರಿಯಲಾರಂಭಿಸಿದೆ. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸಲು ಮುಂದಾದರು.

ಮೋಟಾರು ಚಾಲಿತ ವಾಟರ್ ಸ್ಪ್ರೇಯರ್ ಮೂಲಕ ಬೆಂಕಿ ವ್ಯಾಪಿಸಿದ ಸ್ಥಳಕ್ಕೆ ನೀರು ಸಿಂಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳದಲ್ಲಿದ್ದ ಸಾರ್ವ ಜನಿಕರು ನೆರವಾದರು. ಸುಮಾರು 2ರಿಂದ 3 ಗುಂಟೆಯಷ್ಟು ಪ್ರದೇಶ ಬೆಂಕಿಗಾಹುತಿ ಯಾಗಿದ್ದು, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಹಾಗೂ ಆರ್‍ಎಫ್‍ಓ ಗೋವಿಂದರಾಜು ನೇತೃತ್ವ ದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಮಾ.8ರಂದು ಸಹ ಚಾಮುಂಡಿಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿ 25 ಎಕರೆಗೂ ಹೆಚ್ಚಿನ ಪ್ರದೇಶ ಬೆಂಕಿಗಾಹುತಿಯಾಗಿತ್ತು.

Translate »