ಎನ್.ಆರ್.ಕ್ಷೇತ್ರದಲ್ಲಿ 30 ಸಾವಿರ ನಕಲಿ ಮತದಾರರ ಸೇರ್ಪಡೆ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ 30 ಸಾವಿರ ನಕಲಿ ಮತದಾರರ ಸೇರ್ಪಡೆ

March 14, 2019

ಮೈಸೂರು: ನರ ಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 25 ರಿಂದ 30 ಸಾವಿರ ನಕಲಿ ಮತದಾರರು ಸೇರ್ಪಡೆಗೊಂಡಿದ್ದು, ಈ ಪಟ್ಟಿಯನ್ನು ಪರಿಷ್ಕರಿಸುವಂತೆ ಬಿಜೆಪಿ ಸ್ಲಂ ಮೋರ್ಚಾ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

ಬಿಜೆಪಿ ಮುಖಂಡ ಬಿ.ಪಿ.ಮಂಜು ನಾಥ್ ಅವರು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ನಕಲಿ ಮತದಾರರ ಸೇರ್ಪಡೆ ಹೆಚ್ಚಾಗಿರು ವುದನ್ನು ಬಿಜೆಪಿ ಸಮೀಕ್ಷೆ ನಡೆಸಿ ಸಾಕ್ಷಿ ಸಹಿತ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಬೂತ್ ಸಂ.257ರಲ್ಲಿ 919 ಮತದಾರ ರಿದ್ದು, ಈ ಪೈಕಿ 224 ನಕಲಿ, ಬೂತ್ ನಂ.258ರಲ್ಲಿ 867 ಮತದಾರರ ಪೈಕಿ 628 ನಕಲಿ, ಬೂತ್ ನಂ 259ರಲ್ಲಿ 773 ಮತದಾರರಿದ್ದು ಈ ಪೈಕಿ 401 ನಕಲಿ ಮತದಾರರಿದ್ದಾರೆ. ಈ ಮೂರು ಮತಗಟ್ಟೆಗಳಲ್ಲಿ 2559 ಮತದಾರರ ಪೈಕಿ 1253 ನಕಲಿ ಮತದಾರರು ಸೇರ್ಪಡೆ ಗೊಂಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ನಕಲಿ ಮತದಾರರು ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ದೂರಿದರು.

ಈ ಹಿಂದೆ ಕೆ.ಆರ್.ಕ್ಷೇತ್ರದಲ್ಲಿಯೂ 14 ಸಾವಿರ ನಕಲಿ ಮತದಾರರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ ಬಗ್ಗೆ ಶಾಸಕ ರಾಮದಾಸ್ ಹೊರಾಟ ನಡೆಸಿ ತೆಗೆಸಿ ಹಾಕಿದ್ದರು. ಅದೇ ರೀತಿ ಎನ್.ಆರ್. ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ನಕಲಿ ಮತ ದಾರರನ್ನು ತೆಗೆದು ಹಾಕಬೇಕು. ಖಾಲಿ ನಿವೇಶನಗಳಲ್ಲಿ ಮನೆಯಿದೆ ಎಂದು 15ರಿಂದ 20 ಜನ ಹೊರಗಿನ ಮತ ದಾರರ ಹೆಸರನ್ನು ಸೇರ್ಪಡೆಗೊಳಿಸಿರುವು ದನ್ನು ತೆಗೆಸಬೇಕು ಎಂದು ಒತ್ತಾಯಿಸಿದರು.

ಮೋರ್ಚಾ ರಾಜ್ಯ ಕಾರ್ಯದರ್ಶಿ ಹೆಚ್.ಜಿ. ಗಿರಿಧರ್ ಮಾತನಾಡಿ, ಅಲ್ಪ ಸಂಖ್ಯಾತರ ಹೆಸರುಗಳೇ ಹೆಚ್ಚಾಗಿ ನಕಲಿ ಮತಪಟ್ಟಿ ಯಲ್ಲಿ ಸೇರ್ಪಡೆಗೊಂಡಿದೆ. ಹಿಂದೂ ಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾ ವಣೆಗಳಲ್ಲಿಯೂ ಅಲ್ಪಸಂಖ್ಯಾತರ ಹೆಸರಿ ನಲ್ಲಿ ಮತದಾರರನ್ನು ಸೃಷ್ಟಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಿಸಿ ಹೊಸ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಏ.2ರೊಳಗೆ ಮತದಾರರ ಪಟ್ಟಿ ಪರಿ ಷ್ಕರಿಸಿ, ನಕಲಿ ಮತದಾರರನ್ನು ತೆಗೆಯದಿ ದ್ದರೆ ಪಕ್ಷದಿಂದ ಗುರುತಿಸಲಾಗಿರುವ ನಕಲಿ ಮತದಾರರನ್ನು ಮತದಾನ ಮಾಡಲು ಅಡ್ಡಿಪಡಿಸಲಾಗುವುದು. ಈ ಸಂದರ್ಭ ದಲ್ಲಿ ಸಂಭವಿಸುವ ಘರ್ಷಣೆಗೆ ಜಿಲ್ಲಾ ಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ಶರತ್, ಪದ್ಮನಾಭ, ಮಧು ಮಹದೇವ ಪ್ರಾದ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »