ಮತದಾರರ ಜಾಗೃತ ಸಭೆ
ಮೈಸೂರು

ಮತದಾರರ ಜಾಗೃತ ಸಭೆ

March 14, 2019

ಮೈಸೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜ ವಿಧಾನಸಭಾ ವ್ಯಾಪ್ತಿಯ ಸೂಕ್ಷ್ಮ, ಅತಿಸೂಕ್ಷ್ಮ ಬೂತ್‍ಗಳಲ್ಲಿ ಬುಧವಾರ ಮತದಾರರ ಜಾಗೃತ ಸಭೆ ನಡೆಯಿತು. ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯ ಬೂತ್‍ಗಳಾದ 204, 205, 206 ಅನ್ನು ಸೂಕ್ಷ್ಮ, ಅತಿಸೂಕ್ಷ್ಮ ಬೂತ್ ಎಂದು ಗುರುತಿಸಿದ್ದು, ಈ ವ್ಯಾಪ್ತಿಯ ಮತದಾರರಿಗೆ ಸುನ್ನಿ ಚೌಕದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರೈಮರಿ ಶಾಲೆಯಲ್ಲಿ ಸಭೆ ನಡೆಯಿತು. ಈ ಬಗ್ಗೆ ಮಾಹಿತಿ ನೀಡಿದ ನರಸಿಂಹ ರಾಜ ವ್ಯಾಪ್ತಿಯ ಎಸಿಪಿ ಧರಣೇಶ್, ಸೂಕ್ಷ್ಮ, ಅತಿಸೂಕ್ಷ್ಮ ಬೂತ್‍ಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಈ ವ್ಯಾಪ್ತಿಯ ಮತದಾರರಿಗೆ ಯಾವುದೇ ಅಂಜಿಕೆಯಿಲ್ಲದೆ, ಏಪ್ರಿಲ್ 18 ರಂದು ನಿರ್ಭಿತಿಯಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.

ಸಭೆಯಲ್ಲಿ ಮೈಸೂರು ನಗರದ ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ಮುತ್ತುರಾಜು, ನರಸಿಂಹರಾಜ ವಿಭಾಗದ ಎಸಿಪಿ ಹೆಚ್‍ಸಿ ಧರಣೇಶ್, ಚಾಮರಾಜ ಕ್ಷೇತ್ರದ ಸೆಕ್ಟರ್ ಅಧಿಕಾರಿ ಧರಣೇಂದ್ರಪ್ಪ, ಹಾಗೂ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಲ್.ಅರುಣ್ ಹಾಜರಿದ್ದರು.

Translate »