ಕೆಆರ್‍ಎಸ್ ಸುತ್ತ ಸ್ಫೋಟಕ ಬಳಕೆ ನಿಷೇಧಿsಸಿ
ಮೈಸೂರು

ಕೆಆರ್‍ಎಸ್ ಸುತ್ತ ಸ್ಫೋಟಕ ಬಳಕೆ ನಿಷೇಧಿsಸಿ

July 11, 2021

ಮೈಸೂರು, ಜು.10- ಕೃಷ್ಣರಾಜ ಸಾಗರ (ಕೆಆರ್‍ಎಸ್) ಅಣೆಕಟ್ಟೆ ಸುತ್ತ ಮುತ್ತ ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕ ವಸ್ತುಗಳ ಬಳಕೆಯನ್ನು ನಿಷೇಧಿಸುವಂತೆ ಮೈಸೂರು ಇಂಜಿನಿಯರುಗಳ ಸಂಸ್ಥೆ, ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಕರ್ನಾಟಕ ರಾಜ್ಯ ಭೂಕಂಪ ಮಾಪನ ಸಂಸ್ಥೆ ವತಿಯಿಂದ ಅಧ್ಯಯನ ನಡೆಸಿ, 2018 ರಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ರುವ ವರದಿಯಲ್ಲಿರುವ ಪ್ರಮುಖ ಅಂಶ ಗಳನ್ನು ಉಲ್ಲೇಖಿಸಿ, ದೊಡ್ಡ ಪ್ರಮಾಣದ ಸ್ಫೋಟಕಗಳಿಂದ ಕೆಆರ್‍ಎಸ್ ಅಣೆಕಟ್ಟೆ ಬಿರುಕಾಗುವುದು ಖಚಿತ ಎಂದು ಅಭಿಪ್ರಾಯಿ ಸುವುದರ ಜೊತೆಗೆ ಸಂಸ್ಥೆಯ ಕೆಲ ಶಿಫಾ ರಸುಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಸರ್ಕಾರದ ಮುಖ್ಯ ಕಾರ್ಯ ದರ್ಶಿ, ಮಂಡ್ಯ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಜಲಸಂಪನ್ಮೂಲ ಇಲಾಖೆ ಮುಖ್ಯ ಇಂಜಿನಿಯರ್‍ಗೆ 2019ರ ಆಗಸ್ಟ್ 23ರಂದು ಸಲ್ಲಿಸಲಾಗಿತ್ತು.

ಶಿಫಾರಸುಗಳು: ಕೆಆರ್‍ಎಸ್ ಅಣೆಕಟ್ಟೆ ಯನ್ನು ಭೂಕಂಪನ ವಲಯದಲ್ಲಿ ನಿರ್ಮಿಸಿ ರುವುದರಿಂದ, ಯಾವುದೇ ರೀತಿಯ ಸ್ಫೋಟಕಗಳನ್ನು ಸಂಪೂರ್ಣವಾಗಿ ನಿಷೇ ಧಿಸಬೇಕು. ಸ್ಫೋಟಕಗಳಿಂದ ಡ್ಯಾಂನ ಕಟ್ಟಡ ಬಿರುಕು ಬಿಡುವ ಎಲ್ಲಾ ಸಾಧ್ಯತೆಗಳಿವೆ. ಕೆಆರ್‍ಎಸ್‍ಗೆ 90 ವರ್ಷವಾಗಿರುವು ದರಿಂದ ಕೇಂದ್ರ ಭೂವಿಜ್ಞಾನ ಇಲಾಖೆ ಯಿಂದ ಸರ್ವೆಯಾಗಬೇಕು ಹಾಗೂ ಕೂಡಲೇ ಡ್ಯಾಂ ಸುರಕ್ಷತೆ ಬಗ್ಗೆ ವರದಿ ನೀಡಬೇಕು. ಡ್ಯಾಂ ಕಟ್ಟಡದ ಆಯಸ್ಸಿನ ಬಗ್ಗೆ ತಿಳಿ ಯಲು ಡ್ಯಾಂ ಅನಾಲಿಸಿಸ್ ಆಗಬೇಕು. ಇದರಿಂದ ಡ್ಯಾಂನಲ್ಲಿ ಇನ್ನೂ ಎಷ್ಟರ ಮಟ್ಟಿಗೆ ಗಟ್ಟಿತನ ಉಳಿದಿದೆ ಎಂಬುದು ತಿಳಿಯು ತ್ತದೆ. ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅಣೆಕಟ್ಟೆ ಸುತ್ತಮುತ್ತ ಸುಮಾರು 20 ಕಿ.ಮೀವರೆಗೆ ಎಲ್ಲಾ ರೀತಿಯ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು. ನೀರಿನ ಒತ್ತಡವಿರುವ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಸ್ಫೋಟ ವಾದರೂ ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಹೀಗೆ ಹಲವು ಶಿಫಾರಸುಗಳನ್ನು ತಿಳಿಸಿ, ಗಂಭೀರವಾಗಿ ಪರಿಗಣಿಸುವಂತೆ ಮೈಸೂರು ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್, ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್‍ಕುಮಾರ್ ಹಾಗೂ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಂಚಾಲಕ ಎಂ.ಲಕ್ಷ್ಮಣ್ ಸರ್ಕಾರಕ್ಕೆ ಮನವಿ ಮಾಡಿ ದ್ದರು. ಕೆಆರ್‍ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿ ರುವುದರಿಂದ 2 ವರ್ಷಗಳ ಹಿಂದೆ ಸರ್ಕಾ ರದ ಗಮನಕ್ಕೆ ತಂದಿದ್ದಾಗಿ ಎಂ.ಲಕ್ಷ್ಮಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Translate »