ಮೈಸೂರು: ಬೈಕುಗಳಲ್ಲಿ ಬಂದು ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು, ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನ ನಡೆಸಿರುವ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿ ಇಂದು ಮುಂಜಾನೆ ಸಂಭವಿಸಿದೆ. ಸಿದ್ಧಲಿಂಗಪುರ ಬಳಿಯ ಶಕ್ತಿ ಪೆಟ್ರೋಲಿಯಂ ಸರ್ವೀಸ್ ಸ್ಟೇಷನ್‍ನಲ್ಲಿ ಮುಂಜಾನೆ 4.30 ಗಂಟೆ ವೇಳೆಗೆ ಈ ಕೃತ್ಯ ನಡೆದಿದೆ. ಪೆಟ್ರೋಲ್ ಬಂಕ್‍ನಲ್ಲಿ ಮಲಗಿದ್ದ ಐವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ 6 ಮಂದಿ ಅಪರಿಚಿತರು, ಮಾರಕಾಸ್ತ್ರಗಳನ್ನು ತೋರಿಸಿ ಹಣಕೊಡುವಂತೆ ಧಮ್ಕಿ ಹಾಕಿದ್ದಾರೆ.
ಈ ಶಬ್ದದಿಂದ ಎಚ್ಚರಗೊಂಡ ಇತರರು ಕೂಗಿಕೊಂಡು ಪ್ರತಿ ರೋಧ ವ್ಯಕ್ತಪಡಿಸಿದಾಗ ದರೋಡೆಕೋರರು ಇಬ್ಬರಿಗೆ ಮಚ್ಚಿ ನಿಂದ ಹಲ್ಲೆ ನಡೆಸಿ, ವಾಹನಗಳು ಓಡಾಡುತ್ತಿದ್ದುದನ್ನು ಕಂಡು ತಾವು ಬಂದಿದ್ದ ಬೈಕುಗಳಲ್ಲಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಟಿ.ಸುನೀಲ್‍ಕುಮಾರ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಂದ ಹೇಳಿಕೆ ಪಡೆದರು. ಘಟನಾ ಸ್ಥಳಕ್ಕೆ ಎನ್.ಆರ್. ಉಪವಿಭಾಗದ ಎಸಿಪಿ ಸಿ.ಗೋಪಾಲ್, ಬೆರಳಚ್ಚು ವಿಭಾಗದ ಎಸಿಪಿ ರಾಜಶೇಖರ್, ಶ್ವಾನದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಮೇಟಗಳ್ಳಿ ಠಾಣೆ ಪೊಲೀ ಸರು, ಅಲ್ಲಿನ ಸಿಸಿ ಟಿವಿ ಫುಟೇಜ್‍ಗಳನ್ನು ಪಡೆದು ದರೋಡೆ ಗೆತ್ನಿಸಿದವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.