ಸಂಪುಟದ ನಿರ್ಧಾರಕ್ಕೆ ಪರ ವಿರೋಧ ಹೇಳಿಕೆ ನಿರ್ಧಾರ ಒಳ್ಳೆಯದು; ರಿಯಲ್ ಎಸ್ಟೇಟ್ ಉದ್ಯಮಿಗಳು
ಮೈಸೂರು

ಸಂಪುಟದ ನಿರ್ಧಾರಕ್ಕೆ ಪರ ವಿರೋಧ ಹೇಳಿಕೆ ನಿರ್ಧಾರ ಒಳ್ಳೆಯದು; ರಿಯಲ್ ಎಸ್ಟೇಟ್ ಉದ್ಯಮಿಗಳು

June 12, 2020

ರೈತರ ಒಕ್ಕಲೆಬ್ಬಿಸುವ ಹುನ್ನಾರ: ರೈತ ಮುಖಂಡರು
ಮೈಸೂರು, ಜೂ.11(ಆರ್‍ಕೆಬಿ)- ಕೃಷಿ ಭೂಮಿ ಯನ್ನು ಯಾರು ಬೇಕಾದರೂ ಖರೀದಿಸಲೂ ಅವಕಾಶ ಕಲ್ಪಿಸುವ ಸಚಿವ ಸಂಪುಟದ ತೀರ್ಮಾನಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ರಿಯಲ್ ಎಸ್ಟೇಲ್ ಉದ್ಯಮಿಗಳು ಸ್ವಾಗತಿಸಿದ್ದಾರೆ.

ಇದು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸುವ ರೈತ ವಿರೋಧಿ ತೀರ್ಮಾನ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ಷೇ ಪಿಸಿದ್ದಾರೆ. ಇದು ದೊಡ್ಡ ದೊಡ್ಡ ಕಂಪನಿಗಳು ರೈತರ ಭೂಮಿಯನ್ನು ರೈತರಿಗೆ ಹೆಚ್ಚಿನ ಹಣದ ಆಸೆ ತೋರಿಸಿ ಆವರ ಭೂಮಿಯನ್ನು ಖರೀದಿಸಿ, ರೈತರನ್ನು ಕೃಷಿ ಚಟು ವಟಿಕೆಯಿಂದ ದೂರ ತಳ್ಳಿದಂತಾಗುತ್ತದೆ. ಇದರಿಂದ ಕೃಷಿಗೆ ಧಕ್ಕೆ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ದೇವರಾಜ ಅರಸು ಅವರ ಭೂ ಸುಧಾರಣಾ ಕಾಯ್ದೆ ಪ್ರಕಾರ ಕೃಷಿ ಭೂಮಿ ಹೊಂದಿರುವವರು ಮಾತ್ರ ಭೂಮಿ ತೆಗೆದುಕೊಳ್ಳಲು ಅವಕಾಶವಿತ್ತು. ನಂತರ ಅದು 7 ಲಕ್ಷ ವರಮಾನ ಇರುವವರು ಕೃಷಿ ಭೂಮಿ ಖರೀದಿಸ ಬಹುದು ಎಂದಾಗಿತ್ತು. ಬಳಿಕ ಸಿದ್ದರಾಮಯ್ಯನವರು 21 ಲಕ್ಷ ವರಮಾನ ಇರುವವರು ಕೃಷಿ ಭೂಮಿಯನ್ನು ಪಡೆದು ಕೃಷಿ ಮಾಡಬಹುದು ಎಂದಾಯಿತು. ಆದರೆ ಈಗಿನ ಸರ್ಕಾರ ಕೃಷಿ ಭೂಮಿಯನ್ನೇ ದೊಡ್ಡ ದೊಡ್ಡ ಕಂಪನಿ ಗಳು ಕೃಷಿ ಭೂಮಿ ಕೊಳ್ಳಲು ಅವಕಾಶ ಮಾಡಿಕೊಡಲು ಹೊರಟಿರುವುದು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ವಾಗಿದೆ ಎಂದು ಟೀಕಿಸಿದರು. ರೈತ ಮುಖಂಡ ಅತ್ತಹಳ್ಳಿ ದೇವರಾಜ್ ಪ್ರತಿಕ್ರಿಯೆ ನೀಡಿ, ಸಂಪುಟದ ಈ ತೀರ್ಮಾನ ದಿಂದ ರೈತರು ಬೀದಿ ಪಾಲಾಗುತ್ತಾರೆ. ಸಣ್ಣ ಸಣ್ಣ ಜಮೀನು ಗಳನ್ನು ಉದ್ಯಮಿಗಳು ಖರೀದಿಸಿ, ಕಟ್ಟಡಗಳನ್ನು ನಿರ್ಮಿಸಿ ಕೊಳ್ಳುತ್ತಾರೆ. ಇದರಿಂದ ಕೃಷಿ ಭೂಮಿ ನಾಶವಾಗುತ್ತದೆ. ಇದರ ವಿರುದ್ಧ ರೈತ ಸಂಘಟನೆಗಳು ಬೀದಿಗಿಳಿದು ಬೃಹತ್ ಪ್ರತಿಭಟನೆಗೆ ಸಜ್ಜಾಗಲಿದ್ದೇವೆ ಎಂದು ಹೇಳಿದರು.

ಮೈಸೂರಿನ ಯರಗನಹಳ್ಳಿ ರಿಯಲ್ ಎಸ್ಟೇಲ್ ಉದ್ಯಮಿ ಗಣೇಶ್ ನಂಜುಂಡೇಗೌಡ ಅವರ ಪ್ರಕಾರ, ಸಚಿವ ಸಂಪುಟದ ತೀರ್ಮಾನ ಸ್ವಾಗತಾರ್ಹ. ಮೊದಲು ಆರ್‍ಟಿಸಿ ಇದ್ದವರಿಗೆ ಭೂಮಿ ಖರೀದಿಸಲು ಅವಕಾಶವಿತ್ತು. ಈಗ ಯಾರು ಬೇಕಾ ದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲು ತೀರ್ಮಾನಿಸಿರುವುದು ಒಳ್ಳೆಯ ತೀರ್ಮಾನವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ರೀತಿ ಹಲವು ರಿಯಲ್ ಎಸ್ಟೇಲ್ ಉದ್ಯಮಿಗಳು ಸಹ ಸಂಪುಟದ ತೀರ್ಮಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Translate »