ಮೈಸೂರು ಜಿಲ್ಲಾ ಕಚೇರಿಗಳ ಸಮುಚ್ಛಯಕ್ಕೆ ಆರು ವಿವಿಧ ಇಲಾಖಾ ಕಚೇರಿ ಸ್ಥಳಾಂತರ
ಮೈಸೂರು

ಮೈಸೂರು ಜಿಲ್ಲಾ ಕಚೇರಿಗಳ ಸಮುಚ್ಛಯಕ್ಕೆ ಆರು ವಿವಿಧ ಇಲಾಖಾ ಕಚೇರಿ ಸ್ಥಳಾಂತರ

June 12, 2020

ಮೈಸೂರು,ಜೂ.11(ಆರ್‍ಕೆ)-ಮೈಸೂರಿನ ಬನ್ನೂರು ರಸ್ತೆಯಲ್ಲಿ ಸಿದ್ದಾರ್ಥನಗರ ಬಳಿ ನಿರ್ಮಿಸಿರುವ ನೂತನ ಜಿಲ್ಲಾ ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ಆರು ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು, ಕಾರ್ಯನಿರ್ವಹಿಸುತ್ತಿವೆ.

ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ (ಡಿಡಿಎಲ್‍ಆರ್), ಜಿಲ್ಲಾ ನಗರ ಅಭಿವೃದ್ಧಿ ಕೋಶ (ಡಿಯುಡಿಸಿ), ಜಿಲ್ಲಾ ಸಾಂಖ್ಯಿಕ ಅಧಿಕಾರಿ (ಡಿಸ್ಟ್ರಿಕ್ಟ್ ಸ್ಟಾಟಿಸ್ಟಿಕಲ್ ಆಫೀಸರ್), ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ (ಬಿಸಿಎಂ) ಜಿಲ್ಲಾ ಅಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಹಾಗೂ ಮುಜರಾಯಿ ಇಲಾಖೆ ತಹಸೀಲ್ದಾರ್ ಕಚೇರಿಗಳು ಜಿಲ್ಲಾ ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಪೂರ್ಣ ಪ್ರಮಾಣದ ಸಿಬ್ಬಂದಿಗಳೊಂದಿಗೆ ಕಾರ್ಯ ಆರಂಭಿಸಿವೆ.

ಈ ಕಚೇರಿಗಳಲ್ಲಿ ಪೀಠೋಪಕರಣ, ಕಡತಗಳ ಸಂರಕ್ಷಿಸಲು ಕಬೋರ್ಡ್, ರ್ಯಾಕ್‍ಗಳು, ಕಂಪ್ಯೂಟರ್ ಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲೆಕ್ಟ್ರಿಕ್ ಸಂಪರ್ಕ, ಫ್ಯಾನ್, ಶೌಚಾಲಯ ಮತ್ತು ಕುಡಿಯುವ ನೀರು ಸೇರಿದಂತೆ ಅಗತ್ಯ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ಮಾಡಲು ಸುಸಜ್ಜಿತ ಸಭಾಂಗಣ, ಸಭೆ ಸಮಾರಂಭಕ್ಕಾಗಿ ದೊಡ್ಡ ಹಾಲ್, ಪೀಠೋಪಕರಣ, ಎಸಿ ವ್ಯವಸ್ಥೆ, ಕೋರ್ಟ್ ಹಾಲ್‍ಗಳನ್ನೂ ಸಜ್ಜುಗೊಳಿಸಲಾಗಿದ್ದು, ಲೋಕೋಪ ಯೋಗಿ ಇಲಾಖೆಯು ಹೊಸ ಜಿಲ್ಲಾ ಮಟ್ಟದ ಕಚೇರಿ ಗಳ ಕಟ್ಟಡ ಸಂಕೀರ್ಣದಲ್ಲಿರುವ ಎಲ್ಲಾ ಕೊಠಡಿ ಗಳನ್ನು ನಿರ್ವಹಿಸುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ: ಈ ಮಧ್ಯೆ ಕಟ್ಟಡದ ಮೊದಲ ಮಹಡಿಯ ಒಂದು ಕೊಠಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಆರಂಭವಾಗಿದ್ದು, ಅದನ್ನು ಇತ್ತೀಚೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಿದ್ದರು.

ಅಲ್ಲಿ ಮಿನಿ ಸಭಾಂಗಣವಿದ್ದು, ಸಚಿವರ ಕರ್ತವ್ಯಾ ಧಿಕಾರಿ ಹಾಗೂ ಮೂವರು ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಸಾರ್ವಜನಿಕರು ಕಚೇರಿ ಕೆಲಸದ ವೇಳೆ ಅಹವಾಲು ಸಲ್ಲಿಸಬಹುದಾಗಿದ್ದು, ಜನರು ಕುಳಿತು ಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಮಾಡಲಾಗಿದೆ.

ಶೀಘ್ರ ಡಿಸಿ ಆಫೀಸ್ ಶಿಫ್ಟ್: ಆರು ವಿವಿಧ ಇಲಾಖೆ ಗಳು ಸ್ಥಳಾಂತರಗೊಂಡಿವೆಯಾದರೂ ಜಿಲ್ಲಾಧಿಕಾರಿ ಗಳ ಕಚೇರಿ ಇನ್ನೂ ಹಳೇ ಪಾರಂಪರಿಕ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ಹೊಸ ಜಿಲ್ಲಾ ಮಟ್ಟದ ಕಚೇರಿ ಸಂಕೀರ್ಣದಲ್ಲಿ ಇನ್ನೂ ಎಲೆಕ್ಟ್ರಿಕಲ್ ಹಾಗೂ ಆನ್‍ಲೈನ್ ನೆಟ್ ವರ್ಕಿಂಗ್ ವ್ಯವಸ್ಥೆ ಸಂಪೂರ್ಣ ವಾಗಿ ಆಗಿಲ್ಲ. ಹಾಗೆಯೇ ಕಚೇರಿಯಲ್ಲಿ ವಿಭಾಗೀಯ ಕೆಲಸ ಬಾಕಿ ಇರುವ ಕಾರಣ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿಲ್ಲ.

ಹಾಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಡಿಸಿ ಚೇಂಬರ್, ಆಂಟಿ ಚೇಂಬರ್, ನ್ಯಾಯಾಲಯ ಸಭಾಂಗಣ, ಜಿಲ್ಲಾ ಸಹಾಯವಾಣಿ ಕೇಂದ್ರ, ವೀಡಿಯೋ ಕಾನ್ಫರೆನ್ಸ್ ರೂಂ, ಉಪ ವಿಭಾಗಾಧಿ ಕಾರಿ ಕಚೇರಿ, ಜಿಲ್ಲಾ ಖಜಾನೆ, ಸ್ಪಂದನಾ ಕೇಂದ್ರ ಗಳನ್ನು ಹೊಸ ಕಟ್ಟಡ ಸಂಕೀರ್ಣಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಜಾನ್‍ಸನ್ ತಿಳಿಸಿದರು.

ಮುಂಜಾಗ್ರತೆ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹೊಸ ಜಿಲ್ಲಾ ಮಟ್ಟದ ಕಚೇರಿಗಳ ಸಮುಚ್ಛಯ ಕಚೇ ರಿಗೆ ಬರುವ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನಿಂದ ಕೈ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

Translate »