ಎಚ್‍ಡಿಕೆ ವಚನಭ್ರಷ್ಟ, ಯಾವತ್ತೂ  ರೈತರ ಸಾಲ ಮನ್ನಾ ಮಾಡಲ್ಲ: ಜಗದೀಶ್ ಶೆಟ್ಟರ್
ಮೈಸೂರು

ಎಚ್‍ಡಿಕೆ ವಚನಭ್ರಷ್ಟ, ಯಾವತ್ತೂ  ರೈತರ ಸಾಲ ಮನ್ನಾ ಮಾಡಲ್ಲ: ಜಗದೀಶ್ ಶೆಟ್ಟರ್

June 16, 2018

ಹುಬ್ಬಳ್ಳಿ:  ರೈತರ ಸಾಲ ಮನ್ನಾ ವಿಚಾರ ದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ತಾವು ಒಬ್ಬ ವಚನಭ್ರಷ್ಟ ಎಂಬು ದನ್ನು ಮತ್ತೆ ಸಾಬೀತು ಪಡಿಸಲಿದ್ದಾರೆ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಶುಕ್ರವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಸಿಎಂ, ಕುಮಾರಸ್ವಾಮಿ ಒಬ್ಬ ವಚನಭ್ರಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಯಾವತ್ತೂ ರೈತರ ಸಾಲ ಮನ್ನಾ ಮಾಡಲ್ಲ. ಸಮ್ಮಿಶ್ರ ಸರ್ಕಾ ರದಲ್ಲಿ ಅವರ ಪಾತ್ರ ಅತ್ಯಂತ ಕಡಿಮೆ ಮತ್ತು ರಾಜ್ಯದ ಆರ್ಥಿಕ ಸ್ಥಿತಿ ಹಾಗೂ ಸರ್ಕಾರ ಉರುಳುವ ಸಾಧ್ಯತೆ ಇರು ವುದರಿಂದ ಸಾಲ ಮನ್ನಾ ಮಾಡಲ್ಲ ಎಂದರು. ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಜಗದೀಶ್ ಶೆಟ್ಟರ್, ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ.

ಎಲ್ಲಾ ಹಿರಿಯ ನಾಯಕರು ಸಚಿವ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಬಹಳ ದಿನ ಉಳಿಯಲ್ಲ ಎಂದರು. ಇದೇ ವೇಳೆ ಅತೃಪ್ತ ನಾಯಕರು ಬಿಜೆಪಿ ಜತೆ ಕೈಜೋಡಿಸಿದರೂ ನಾವು ಸರ್ಕಾರ ರಚಿಸಲ್ಲ. ಸದ್ಯದ ಸರ್ಕಾರ ತಾನಾ ಗಿಯೇ ಬೀಳುವವರೆಗೆ ಬಿಜೆಪಿ ಕಾದು ನೋಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Translate »