ಮೈಸೂರು, ಆ.3(ಪಿಎಂ)- ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ರೈತರು ಸೋಮವಾರ ಮೈಸೂರಲ್ಲಿ ಫಲಕ ಹಾಗೂ ಅಂಚೆ ಚಳುವಳಿ ನಡೆಸಿದರು.
ಸದರಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ಚಳುವಳಿ ನಡೆಸಲು ವಿವಿಧ ಜನ ಪರ ಹಾಗೂ ರೈತ ಸಂಘಟನೆಗಳ ಆಶ್ರಯ ದಲ್ಲಿ ಅಸ್ತಿತ್ವಕ್ಕೆ ತಂದಿರುವ `ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ’ ವೇದಿಕೆ ವತಿ ಯಿಂದ ಫಲಕ ಚಳುವಳಿ ನಡೆಸಲಾಯಿತು. ಆ ಮೂಲಕ ರಾಜ್ಯಾದ್ಯಂತ ಗ್ರಾಮಗಳ ಮುಖ್ಯ ದ್ವಾರದಲ್ಲಿ `ನಮ್ಮೂರ ಭೂಮಿ ನಮಗಿ ರಲಿ, ಅನ್ಯರಿಗಲ್ಲ’ ಫಲಕ ಅಳವಡಿಸುವ ಚಳುವಳಿಗೆ ಚಾಲನೆ ನೀಡಲಾಯಿತು.
ಮೈಸೂರಿನ ಮೈಸೂರು-ಬನ್ನೂರು ಹಾಗೂ ರಿಂಗ್ ರಸ್ತೆಯ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವೃತ್ತದಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘ-ಹಸಿರು ಸೇನೆ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಾಮೂಹಿಕ ನಾಯ ಕತ್ವದ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ, ಮೈಸೂರು-ಚಾಮರಾಜನಗರ ಜಿಲ್ಲಾ ಸುಸ್ಥಿರ ಸಾವಯವ ಕೃಷಿಕರ ಒಕ್ಕೂ ಟದ ಮುಖಂಡರು ಹಾಗೂ ಕಾರ್ಯ ಕರ್ತರು ಪ್ರತಿಭಟನೆ ನಡೆಸಿ, ವೃತ್ತದಲ್ಲಿ `ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ’ ಫಲಕ (ಬ್ಯಾನರ್) ಅಳವಡಿಸಿ ರಾಜ್ಯ ಸರ್ಕಾ ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
`ಉಳುವವರಿಗೇ ಭೂಮಿ; ಉಳ್ಳವರಿ ಗಲ್ಲ’ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿ ಸಿದ ರೈತರು, ತಿದ್ದುಪಡಿ ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ತಾವು ಬರೆದಿರುವ ಅಂಚೆ ಪತ್ರಗಳನ್ನು ಪ್ರದರ್ಶಿಸಿ, ಕಿಡಿಕಾರಿದರು.
ಚಳುವಳಿ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, 1974ರಿಂದ ಪೂರ್ವಾನ್ವಯವಾಗುವಂತೆ ಭೂ ಸುಧಾ ರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆ ಮೂಲಕ ಕೃಷಿ ಭೂಮಿ ಖರೀದಿಸಲು ಕೃಷಿ ಕರೇ ಆಗಿರಬೇಕೆಂಬ ನಿಯಮ ಕೈಬಿಡ ಲಾಗಿದೆ. ಈ ನಿಯಮ ಉಲ್ಲಂಘಿಸಿ ಭೂಮಿ ಖರೀದಿಸಿದವರಿಗೆ ಅನುಕೂಲ ಮಾಡಿ ಕೊಡಲು ಸರ್ಕಾರ ಈ ರೀತಿ ತಿದ್ದುಪಡಿ ಮಾಡಿದೆ ಎಂದು ಕಿಡಿಕಾರಿದರು.
ವಾಮ ಮಾರ್ಗದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹಣ ಹೂಡಿಕೆ ಮಾಡಿ ದವರ ಹಿತಕಾಯಲು ರೈತರಿಗೆ ಮಾರಕ ವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕೊರೊನಾ ಸಂಕಷ್ಟದಲ್ಲಿ ರೈತ ಸಮುದಾಯ ಅನೇಕ ಸಮಸ್ಯೆಗಳಲ್ಲಿ ಸಿಲುಕಿ ನಲುಗಿದೆ. ಇಂತಹ ಸಂದರ್ಭ ಬಳಸಿಕೊಂಡು ರೈತ ರಿಂದ ಕಡಿಮೆ ಬೆಲೆಗೆ ಭೂಮಿ ಕಿತ್ತುಕೊಳ್ಳುವ ಹುನ್ನಾರವಿದೆ ಎಂದು ಆರೋಪಿಸಿದರು.
ಸಚಿವರು ಚರ್ಚೆಗೆ ಬರಲಿ: ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ತಿದ್ದುಪಡಿ ವಿರುದ್ಧ ಹೋರಾಟ ಮಾಡಬೇಕಿರುವ ಅಗತ್ಯತೆ ಇದ್ದು, ಪ್ರಬಲ ಚಳುವಳಿ ನಡೆಸಲು ಸಜ್ಜಾಗಬೇಕಿದೆ. ಕೆಲ ಸಚಿವರು ಈ ತಿದ್ದುಪಡಿ ರೈತರ ಹಿತಕ್ಕಾಗಿ ಎಂದು ಹೇಳುತ್ತಿದ್ದು, ಅವರು ಬೇಕಿದ್ದರೆ ರೈತ ಮುಖಂಡರೊಂದಿಗೆ ಈ ವಿಚಾರವಾಗಿ ಚರ್ಚೆಗೆ ಬಂದರೆ ತಿದ್ದುಪಡಿಯ ಕರಾಳ ಮುಖ ಅನಾವರಣ ಮಾಡುತ್ತೇವೆ ಎಂದು ಸವಾಲು ಹಾಕಿದರು. 1ರಿಂದ 2 ಎಕರೆ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಮಧ್ಯಮ ರೈತರಿಂದ ಭೂಮಿ ಕಿತ್ತು ಕೊಳ್ಳುವ ಉದ್ದೇಶ ಇದರಲ್ಲಿ ಅಡಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ತಾವು ರೈತಪರ ಎಂದು ಹೇಳಿಕೊಂಡು ರೈತ ಸಮುದಾಯದ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯಲು ಹೊರಟಿದ್ದಾರೆ. ಉಳ್ಳವರಿಗೆ ಮಣೆ ಹಾಕುವ ಪ್ರವೃತ್ತಿಯನ್ನು ಸರ್ಕಾರ ಮುಂದುವರೆಸಿದರೆ ಅದು ತನ್ನ ಕೊನೆ ದಿನವನ್ನು ಎಣಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿವಿಧ ರೈತ ಸಂಘಟನೆ ಮುಖಂಡ ರಾದ ವಿ.ಸೋಮಶೇಖರ್, ಕೃಷ್ಣೇಗೌಡ, ಮಂಜು ಕಿರಣ್, ಗಳಗರಹುಂಡಿ ವೆಂಕ ಟೇಶ್, ಬರಡನಪುರ ನಾಗರಾಜ್, ರಾಜು, ರಾಮೇಗೌಡ, ಪ್ರಶಾಂತ್, ಜಯರಾಮ್, ನಯನ್‍ಗೌಡ ಮತ್ತಿತರರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.