ಮೈಸೂರಲ್ಲಿ ಸಂಭ್ರಮ ಕಾಣದ `ರಕ್ಷಾ ಬಂಧನ’
ಮೈಸೂರು

ಮೈಸೂರಲ್ಲಿ ಸಂಭ್ರಮ ಕಾಣದ `ರಕ್ಷಾ ಬಂಧನ’

August 4, 2020

ಮೈಸೂರು, ಆ.3(ಆರ್‍ಕೆಬಿ)- ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಅಣ್ಣ- ತಂಗಿಯರ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ (ರಾಖಿ ಹಬ್ಬ) ಸಂಭ್ರಮ ಇಂದು ಮೈಸೂರಿನಲ್ಲಿ ಕಂಡು ಬರಲಿಲ್ಲ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಖಿ ಕಟ್ಟಲು ಯುವತಿ ಯರು, ಮಹಿಳೆಯರು ಮುಂದಾಗಲಿಲ್ಲ. ಅಲ್ಲೊಂದು, ಇಲ್ಲೊಂದು ರಾಖಿ ಕಟ್ಟಿದ್ದು ಬಿಟ್ಟರೆ ಇಂದು ರಕ್ಷಾ ಬಂಧನದ ಸಡಗರ ಹಿಂದಿನ ವರ್ಷಗಳಂತೆ ಕಂಡು ಬರಲಿಲ್ಲ.

ಪ್ರತೀ ವರ್ಷ ರಕ್ಷಾ ಬಂಧನ ವೇಳೆ ಯುವತಿಯರು, ಮಹಿಳೆಯರು ತಮ್ಮ ಒಡಹುಟ್ಟಿದ ಸಹೋದರನಿಗೆ, ಸಹೋದರ ಸಮಾನ ಯುವಕರಿಗೆ ರಾಖಿ ಕಟ್ಟುವುದು ಸಂಪ್ರದಾಯ. 10 ರೂ.ಗಳಿಂದ 300 ರೂ.ಗಳವರೆಗಿನ ರಾಖಿಗಳನ್ನು ಖರೀದಿಸಿ, ಕಟ್ಟುವುದು ವಾಡಿಕೆ. ಆದರೆ ಈ ಬಾರಿ ರಾಖಿ ಮಾರಾಟದ ಅಂಗಡಿಗಳಲ್ಲಿ ರಾಖಿ ವ್ಯಾಪಾರ ಕುಸಿದಿದೆ.

ಮಹಾರಾಣಿ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳ ಯುವತಿಯರು ರಾಖಿ ಖರೀದಿಸುತ್ತಿದ್ದರು. ಈ ವರ್ಷ ಶೇ.25 ರಷ್ಟು ವ್ಯಾಪಾರವೇ ಇಲ್ಲ. ಸಾವಿರಾರು ರೂ. ಬಂಡವಾಳ ಹಾಕಿ ನಾನಾ ಬಣ್ಣದ, ವಿವಿಧ ಮಾದರಿಯ ರಾಖಿಗಳನ್ನು ತರಿಸಿದ್ದೇವೆ. 2 ರೂ.ನಿಂದ 600 ರೂ.ವರೆಗಿನ ರಾಖಿ ಗಳು ನಮ್ಮಲ್ಲಿವೆ. ದೆಹಲಿ, ಮುಂಬೈ, ಗುಜ ರಾತ್, ಅಹಮದಾಬಾದ್ ಇನ್ನಿತರೆ ಕಡೆ ಗಳಿಂದ ಮಣಿ, ಜರಿ, ಉಲ್ಲನ್, ರೇಷ್ಮೆ ಇನ್ನಿತರ ವಿವಿಧ ಆಕರ್ಷಣೀಯ ರಾಖಿ ಗಳ ತರಿಸಿದ್ದೆವು. ಆದರೆ ಕೊಳ್ಳುವವರೇ ಬರಲಿಲ್ಲ. ಹೀಗಾಗಿ ಈ ಬಾರಿ ನಮಗೆ ತೀರಾ ನಷ್ಟವಾಗಿದೆ ಎಂದು ಮೈಸೂರಿನ ಚಿಕ್ಕಗಡಿ ಯಾರದ ಬಳಿ ಶಿವರಾಂ ಪೇಟೆ ರಸ್ತೆಯಲ್ಲಿ 8 ವರ್ಷದಿಂದ ರಾಖಿ ವ್ಯಾಪಾರ ನಡೆಸು ತ್ತಿರುವ ಶ್ರವಣ್ `ಮೈಸೂರು ಮಿತ್ರ’ ನೊಂದಿಗೆ ಬೇಸರದಿಂದ ನುಡಿದರು.

ರಕ್ಷಾ ಬಂಧನದ ಹಿಂದಿನ ದಿನ ಫ್ರೆಂಡ್ಸ್ ಶಿಪ್ ಡೇ (ಸ್ನೇಹಿತರ ದಿನ)ಗೂ ಫ್ರೆಂಡ್‍ಶಿಪ್ ದಾರ ಸಹ ಶೇ.5ರಷ್ಟು ಖರ್ಚಾಗಲಿಲ್ಲ. ಕೊರೊನಾ ಸೋಂಕು ನಮ್ಮ ವ್ಯಾಪಾರ ವನ್ನೇ ನುಂಗಿ ಹಾಕಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಅಂಗಡಿಗಳನ್ನು ಮುಚ್ಚಿದ್ದೆವು. ಲಾಕ್‍ಡೌನ್ ತೆರವಾದ ಬಳಿಕ ಶೇ.25ರಷ್ಟು ವ್ಯಾಪಾರ ಆಗುತ್ತಿಲ್ಲ.  ನೌಕರರಿಗೆ ಸಂಬಳ ನೀಡುವುದೇ ಕಷ್ಟವಾಗಿದೆ. ನಮ್ಮದು ಆಯಾ ಹಬ್ಬದ ಸಂದರ್ಭದಲ್ಲಿನ ಸೀಜನ್ ವ್ಯಾಪಾರ. ಸಂಕ್ರಾಂತಿಗೆ ಎಳು ್ಳಬೆಲ್ಲ, ಕವರ್, ಸಕ್ಕರೆ ಅಚ್ಚು, ಗೌರೀ-ಗಣೇಶ, ದಸರಾ, ಆಯುಧ ಪೂಜೆ, ದೀಪಾವಳಿ, ಕ್ರಿಸ್‍ಮಸ್ ಹಬ್ಬಗಳ ಸಂದರ್ಭದಲ್ಲಿ ಡೆಕೋರೇಷನ್ ಪದಾರ್ಥ ಗಳನ್ನು ಮಾರುತ್ತೇವೆ. ಆದರೆ ಸಂಕ್ರಾಂತಿ ನಂತರ ಬಂದ ಕೊರೊನಾ ಕಾರಣದಿಂದಾಗಿ ಎಲ್ಲ ಹಬ್ಬಗಳಲ್ಲೂ ನಷ್ಟವನ್ನೇ ನೋಡು ತ್ತಿದ್ದೇವೆ. ಮುಂದೆ ಗೌರೀ ಗಣೇಶ್, ಆಯುಧ ಪೂಜೆ, ದಸರಾ, ದೀಪಾವಳಿಗೆ ಏನಾಗು ವುದೋ ಗೊತ್ತಿಲ್ಲ ಎಂದು ಭವಾನಿ ಇಂಪೆಕ್ಸ್‍ನ ಶ್ರವಣ್, ಜುಪಿಟರ್ ಸ್ಟೋರ್ಸ್‍ನ ಮಾಲೀಕರು ಬೇಸರದಿಂದ ಹೇಳಿದರು.

 

Translate »