ಮೈಸೂರು, ಆ.3(ಆರ್‍ಕೆಬಿ)- ಇತ್ತೀಚಿನ ಚುನಾವಣೆಗಳು ಜಾತಿ ಲೆಕ್ಕಾಚಾರದಲ್ಲಿಯೇ ನಡೆಯುತ್ತಿವೆ. ಜಾತಿ ಇಲ್ಲದೇ ಚುನಾ ವಣೆಯೇ ಇಲ್ಲವೇನೋ ಎಂಬಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಒಡನಾಡಿ ಹೆಚ್.ಎಂ. ಮರಿಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. 60ರ ದಶಕದಲ್ಲಿನ ತಮ್ಮ ಕಾಂಗ್ರೆಸ್ ಸೇವೆಯನ್ನು ಸ್ಮರಿಸಿದ ಅವರು ಇತ್ತೀಚಿನ ಕಾಂಗ್ರೆಸ್ ರೀತಿ ನೀತಿಗಳ ಬಗ್ಗೆ ಹೋಲಿಕೆ ಮಾಡಿ, ಇತ್ತೀ ಚಿನ ಚುನಾವಣಾ ನೀತಿ ಅಸಹನೆ ಮೂಡಿ ಸಿದೆ ಎಂದು ಬೇಸರದಿಂದ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತ ನಾಡಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷ ಬಲವರ್ಧನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಲವಾರು ಆಂತರಿಕ ಬದಲಾವಣೆ ಗಳು ಪಕ್ಷದಲ್ಲಿ ಆಗುವುದರಿಂದ ಎಲ್ಲರೂ ಸಂಘಟಿತರಾಗಿ ಪಕ್ಷದಲ್ಲಿ ನಿಷ್ಠೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಕ್ಷದ ಎಲ್ಲಾ 17 ಮುಂಚೂಣಿ ಘಟಕ ದಲ್ಲಿರುವವರು ಸಮರ್ಥರೇ ಅಗಿದ್ದು, ಜಿಲ್ಲೆ ಯಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಿದೆ. ಎಲ್ಲಾ ಅಧ್ಯಕ್ಷರೂ, ಕಾರ್ಯಕರ್ತರು ಎಲ್ಲ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿನ ನಮ್ಮ ತಪ್ಪು ಒಪ್ಪು, ಅಡೆ ತಡೆ ಗಳನ್ನು ಮೀರಿ ಪಕ್ಷ ಸಂಘಟನೆಯಲ್ಲಿ ತೊಡಗಿ, ಪಕ್ಷದ ನಾಯಕರ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.
ಇದರೊಂದಿಗೆ `ಮರಳಿ ಕಾಂಗ್ರೆಸ್’ಗೆ ಅಭಿಯಾನದಡಿ ಕಾಂಗ್ರೆಸ್‍ನಿಂದ ಹೊರಗುಳಿ ದಿರುವ ಪಕ್ಷದ ಮುಖಂಡರು, ಕಾರ್ಯ ಕರ್ತರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ತರುವ ಕೆಲಸ ತ್ವರಿತಗತಿಯಲ್ಲಿ ಆಗಬೇಕು. ಹಾಗಾ ದರೆ ಮಾತ್ರ ಮುಂದೆ ಕಾಂಗ್ರೆಸ್ ಮತ್ತಷ್ಟು ಗಟ್ಟಿಗೊಳ್ಳುವ ಜೊತೆಗೆ ಕೇಂದ್ರ ಮತ್ತು ರಾಜ್ಯ ದಲ್ಲಿ ಆಡಳಿತ ನಡೆಸಲು ಸಾಧ್ಯವಾಗುವುದು ಎಂದರು. ವಿವಿಧ ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರು, ಎಲ್ಲಾ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪದಾ ಧಿಕಾರಿಗಳು ಭಾಗವಹಿಸಿದ್ದರು.