ಹಾಸನ: ಜಿಲ್ಲೆಯಲ್ಲಿ ನಡೆದಿ ರುವ ರೈತರ ಆತ್ಮಹತ್ಯೆ ಪ್ರಕರಣಗಳ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಅಗತ್ಯ ಸೌಲಭ್ಯ ಗಳನ್ನು ಒದಗಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಧಿಕಾರಿ ಎಂ.ಎಲ್.ವೈಶಾಲಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಬುಧವಾರ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ವಿಶೇಷ ಸೌಲಭ್ಯ ಗಳನ್ನು ದೊರಕಿಸಿಕೊಡುವ ಸಲುವಾಗಿ ನಡೆದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣಗಳನ್ನು ತಿಳಿದು ಅವರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸ ಬೇಕು ಎಂದು ತಿಳಿಸಿದರು.
ಸರ್ಕಾರದಿಂದ ನೀಡುತ್ತಿರುವ ವಿವಿಧ ಆರೋಗ್ಯ ವಿಮಾ ಯೋಜನೆಗಳು ಮತ್ತು ಇನ್ನಿತರ ವೈದ್ಯಕೀಯ ಸೌಲಭ್ಯಗಳ ಬಗ್ಗೆ ರೈತ ಕುಟುಂಬಗಳಿಗೆ ತಿಳಿಸಿಕೊಡಬೇಕು. ಅವುಗಳ ಅನುಕೂಲಗಳನ್ನು ಬಳಸಿಕೊಳ್ಳು ತ್ತಿದ್ದಾರೆಯೇ ಎಂದು ಸಮೀಕ್ಷೆ ನಡೆಸ ಬೇಕು. ರೈತ ಆತ್ಮಹತ್ಯೆ ಹೊಂದಿದ ವಿಷಯ ತಿಳಿದ ತಕ್ಷಣ ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಮಾಹಿತಿ ಕಲೆಹಾಕಿ ಉಪವಿಭಾಗಾಧಿಕಾರಿ ಹಂತದ ಸಮಿತಿಗೆ ಸಲ್ಲಿಸಬೇಕು ಎಂದರು.
ರೈತ ಮರಣ ಹೊಂದಿದ 15 ದಿನಗಳೊ ಳಗಾಗಿ ರೈತ ಕುಟುಂಬಕ್ಕೆ ತಲುಪಬೇಕಾದ ಪರಿಹಾರ ಒದಗಿಸಬೇಕು. ಆ ಕುಟುಂಬದ ಸದಸ್ಯರುಗಳಿಗೆ ನೀಡುವ ಮಾಸಿಕ ಪಿಂಚಣಿ ಗಳು ಸೂಕ್ತ ಫಲಾನುಭವಿಗೆ ತಲುಪಬೇಕು. ಮಕ್ಕಳಿಗೆ ಶಾಲಾ ಶುಲ್ಕದಲ್ಲಿ ವಿಶೇಷ ಮಾನ್ಯತೆ ಒದಗಿಸುವಲ್ಲಿ ಸಂಬಂಧÀಪಟ್ಟ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲಬೇಕು. ಮೃತ ಕುಟುಂಬಗಳಿಗೆ ನೀಡುತ್ತಿರುವ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಿ ದೆಯಾ ಎಂಬುದರ ಬಗ್ಗೆ ಕೃಷಿ ಇಲಾ ಖೆಯ ಅಧಿಕಾರಿಗಳು ಸಂಪೂರ್ಣ ಮಾಹಿತಿ ಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸ ಬೇಕು ಎಂದು ತಿಳಿಸಿದರು.
ಸಂತ್ರಸ್ತ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯಗಳು ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಬಗ್ಗೆ ವರದಿ ನೀಡ ಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿ ಷ್ಠಾಧಿಕಾರಿ ನಂದಿನಿ, ಉಪ ವಿಭಾಗಾಧಿ ಕಾರಿಗಳಾದ ಡಾ.ಎಚ್.ಎಲ್.ನಾಗರಾಜ್, ಕವಿತಾರಾಜಾರಾಂ, ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಸತೀಶ್, ಕೃಷಿ ಇಲಾಖೆಯ ಉಪ ನಿರ್ದೇಶಕಿ ಕೋಕಿಲ ಹಾಗೂ ಮತ್ತಿತರರು ಹಾಜರಿದ್ದರು.