ರೈತರಿಂದಲೇ ಗದ್ದಲ: ಸಿಎಂ ಎಚ್ಚರಿಕೆ…
ಮೈಸೂರು

ರೈತರಿಂದಲೇ ಗದ್ದಲ: ಸಿಎಂ ಎಚ್ಚರಿಕೆ…

May 31, 2018

ಬೆಂಗಳೂರು: ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಗದ್ದಲ, ಆರೋಪ, ಪ್ರತ್ಯಾ ರೋಪ, ವಾಕ್ಸಮರವೇ ನಡೆಯಿತು. ರೈತ ಮುಖಂಡರೇ ಗದ್ದಲ ಎಬ್ಬಿಸಿ ಕೆಲ ಕಾಲ ಗೊಂದಲದ ವಾತಾವರ ಣಕ್ಕೆ ಕಾರಣರಾದರು. ಇದರಿಂದ ಸಿಟ್ಟಿಗೆದ್ದ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಇಲ್ಲೇನು ಜಾತ್ರೆ ಮಾಡೋದಕ್ಕೆ ಕರೆಸಿದ್ದೀನಾ ನಿಮ್ಮನ್ನಾ? ಕಿತಾಪತಿ ಮಾಡೋಕೆ ಬಂದಿದ್ದೀರಾ, ರಾಜಕೀಯ ಮಾಡೋಕ್ಕೆ ಬಂದಿದ್ದೀರಾ, ಗದ್ದಲ ಮಾಡುವುದಾದರೆ ಕಬ್ಬನ್ ಪಾರ್ಕ್ ಮುಂದೆ ಹೋಗಿ ಕುಳಿತುಕೊಳ್ಳಿ ಎಂದು ಗದರಿಸಿದರು.

ಇದಕ್ಕೂ ಮುನ್ನ ಕೆಲವು ರೈತ ಮುಖಂಡರು ಮಾತನಾಡಿ, ರೈತರ ಸಾಲ ಮನ್ನಾ ಸಂಬಂಧ ತಮ್ಮದೇ ಆದ ವಿಚಾರಗಳನ್ನು ಮಂಡಿಸಿದರು. ಕೆಲ ವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರೆ, ಮತ್ತೆ ಕೆಲವರು ಕೆಲ ರೈತ ಮುಖಂಡರ ವಿರುದ್ಧ ತಿರುಗಿ ಬಿದ್ದರು. ಸಾಲ ಮನ್ನಾಕ್ಕೆ ಮುನ್ನವೇ ಕೋಡಿಹಳ್ಳಿ ಚಂದ್ರ ಶೇಖರ್, ರೈತರಿಂದ ಚಂದಾ ವಸೂಲಿ ಮಾಡುತ್ತಿ ದ್ದಾರೆ. ಅದನ್ನು ವಾಪಸ್ ಕೊಡಿಸಿ ಎಂದು ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.

Translate »