ಏಷ್ಯನ್ ಪೇಂಟ್ಸ್-ಭೂಮಿ ಕೊಟ್ಟ ರೈತರ ಸಮಸ್ಯೆ ನಿವಾರಿಸುವಲ್ಲಿ ಕೈಗಾರಿಕಾ ಸಚಿವರು ವಿಫಲ: ರೈತ ಸಂಘ ಆರೋಪ
ಮೈಸೂರು

ಏಷ್ಯನ್ ಪೇಂಟ್ಸ್-ಭೂಮಿ ಕೊಟ್ಟ ರೈತರ ಸಮಸ್ಯೆ ನಿವಾರಿಸುವಲ್ಲಿ ಕೈಗಾರಿಕಾ ಸಚಿವರು ವಿಫಲ: ರೈತ ಸಂಘ ಆರೋಪ

January 12, 2021

ಮೈಸೂರು, ಜ.11(ಎಂಟಿವೈ)- ಕೇಂದ್ರ ಸರ್ಕಾರ ಕೃಷಿ ಚಟುವಟಿಕೆಗೆ ಮಾರಕವಾದ ಹಾಗೂ ರೈತರ ಹತ್ತಿಕ್ಕುವ ಹುನ್ನಾರದಿಂದ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಗಣ ರಾಜ್ಯೋತ್ಸವ ದಿನದಂದು ದೆಹಲಿ ಸೇರಿದಂತೆ ರಾಜ್ಯ ದಾದ್ಯಂತ ರೈತ ಸಂಘಟನೆಗಳ ಹೋರಾಟ ಸಮಿತಿ ವತಿಯಿಂದ ಬೃಹತ್ ಕಿಸಾನ್ ಮಜ್ದೂರ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತ, ಕಾರ್ಮಿಕ, ದಲಿತ ವಿರೋಧಿ ನೀತಿ ಖಂಡಿಸಿ ಹಾಗೂ ಕೃಷಿ ಚಟುವಟಿಕೆಗೆ ಮಾರಕವಾದ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ನವದೆಹಲಿಯಲ್ಲಿ ರೈತ ಸಂಘಟನೆಗಳ ಒಕ್ಕೂಟ ಕಳೆದ 47 ದಿನಗಳಿಂದಲೂ ಹೋರಾಟ ನಡೆಸುತ್ತಿದೆ. ಆದರೂ ಕೇಂದ್ರ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಅಕಾಲಿಕ ಮಳೆ, ಕೊರೆವ ಚಳಿ ನಡುವೆಯೂ ಛಲ ಬಿಡದೆ ರೈತರು ಕುಟುಂಬ ಸದಸ್ಯರೊಂದಿಗೆ ಹೋರಾಟ ಮುಂದುವರೆಸಿದ್ದಾರೆ. ಈಗಾಗಲೇ 60ಕ್ಕೂ ಹೆಚ್ಚು ಮಂದಿ ರೈತರು ಮೃತಪಟ್ಟಿ ದ್ದಾರೆ. ಸರ್ಕಾರಕ್ಕೆ ರೈತರ ನೋವಿನ ಕೂಗು ಕೇಳಿಸ ದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಹೋರಾಟ ವನ್ನು ಮುಂದುವರೆಸಲಾಗಿದೆ ಎಂದರು.

ದೇಶದಾದ್ಯಂತ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೂ ಕೇಂದ್ರ ಸರ್ಕಾರ ಮಾತ್ರ ಬಂಡ ವಾಳಶಾಹಿಗಳ ಹಿತ ಕಾಯಲು ಬದ್ಧವಾಗಿರುವಂತಿದೆ. ರೈತರ ಹಿತ ಸರ್ಕಾರಕ್ಕೆ ಬೇಕಾಗಿಲ್ಲ. ಬಂಡವಾಳ ಶಾಹಿಗಳು, ಮಲ್ಟಿನ್ಯಾಷನಲ್ ಕಂಪನಿಗಳ ಹಿಡಿತದಲ್ಲಿ ರುವ ಕೇಂದ್ರದ ಮೋದಿ ಸರ್ಕಾರ ರೈತರ ಹೋರಾಟಕ್ಕೆ ಕಿಂಚಿತ್ತು ಮನ್ನಣೆ ನೀಡುತ್ತಿಲ್ಲ. ಇದನ್ನು ಮನಗಂಡು ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಧಿಕ್ಕರಿಸಿ, ರೈತ ಸಂಘಟನೆ ಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಕಿಸಾನ್ ಮಜ್ದೂರ್ ಟ್ರ್ಯಾಕ್ಟರ್ ಪರೇಡ್ ನಡೆಸಲಾಗುತ್ತಿದೆ. ಈ ಪರೇಡ್‍ನಲ್ಲಿ ವಿವಿಧ ರಾಜ್ಯಗಳ ಸಾವಿರಾರು ಮಂದಿ ರೈತರು ಪಾಲ್ಗೊಳ್ಳುತ್ತಿದ್ದಾರೆ ಎಂದರು.

ರೈತರ ರ್ಯಾಲಿ ಬೆಂಗಳೂರಿನಲ್ಲಿಯೂ ನಡೆಯಲಿದೆ. ಬೆಂಗಳೂರಿನ ಕೊಂಡಜ್ಜಿ ಮೋಹನ್‍ರಾವ್ ಸಭಾಂ ಗಣದಲ್ಲಿ ಕೇಂದ್ರದ ರೈತ ವಿರೋಧಿ ಧೋರಣೆ ಕುರಿ ತಂತೆ ಬಹಿರಂಗ ಸಂವಾದ ಆಯೋಜಿಸಲಾಗುತ್ತಿದೆ. ಅದರಲ್ಲಿ ಪ್ರೊ.ಯೋಗೇಂದ್ರ ಯಾದವ್, ಯದು ವೀರ್ ಸಿಂಗ್, ಮನ್ಜಿತ್ ಸಿಂಗ್ ಇನ್ನಿತರ ರೈತ ಮುಖಂ ಡರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರೈತ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು ಈ ಸಂವಾದದಲ್ಲಿ ಪಾಲ್ಗೊಂಡು ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗುವುದು. ದಕ್ಷಿಣ ಭಾರತದಲ್ಲಿ ರೈತ ಸಂಘ ಟನೆ ಬಲಪಡಿಸುವ ಉದ್ದೇಶವೂ ಇದರದ್ದಾಗಿದೆ. ಈ ನಿಟ್ಟಿನಲ್ಲಿ ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರ ಗಳಿಂದಲೂ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ರಾಜ್ಯ ದಲ್ಲಿ ರೈತ ಸಂಘಟನೆ ಕೇಂದ್ರ ಹಾಗೂ ರಾಜ್ಯದ ರೈತ ವಿರೋಧಿ ಧೋರಣೆ ವಿರೋಧಿಸಿ ದೊಡ್ಡ ಮಟ್ಟದ ಚಳವಳಿ ನಡೆಸಲು ಸಹಾ ಈ ಕಾರ್ಯಕ್ರಮ ನೆರವಾಗ ಲಿದೆ ಎಂದರು. ಇದೇ ವೇಳೆ, ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದ ರೈತರ ಸಮಸ್ಯೆ ಬಗೆಹರಿ ಸುವಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವರು ವಿಫಲರಾಗಿದ್ದಾರೆ. ಹೀಗಾಗಿ ಚಳವಳಿ ಹೊಸ ರೂಪ ತಳೆದಿದೆ. ಕೆಲಸ ನೀಡಬೇಕು, ಇಲ್ಲವೇ ಭೂಮಿ ವಾಪಸು ನೀಡಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇಲ್ಲದಿದ್ದಲ್ಲಿ ಸಾವಿರಾರು ರೈತರು ಬೆಂಗ ಳೂರಿಗೆ ತೆರಳಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿ ಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

 

Translate »