ಕಲಾಮಂದಿರದಲ್ಲಿ ಮನಸೂರೆಗೊಂಡ ಜಾನಪದ ಸೊಗಡು
ಮೈಸೂರು

ಕಲಾಮಂದಿರದಲ್ಲಿ ಮನಸೂರೆಗೊಂಡ ಜಾನಪದ ಸೊಗಡು

December 21, 2020

ಮೈಸೂರು, ಡಿ.20(ಎಂಟಿವೈ)- `ವಿಶ್ವ ಜಾನಪದ ದಿನ’ ಆಚರಣೆ ಅಂಗವಾಗಿ ಮೈಸೂರು ಕಲಾಮಂದಿರ ದಲ್ಲಿ ಭಾನುವಾರ `ಜಾನಪದ ಸುಗ್ಗಿ’ ಕಾರ್ಯಕ್ರಮ ದಲ್ಲಿ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳು ಮೇಳೈಸಿ ನೆರೆದವರ ಮನಸೂರೆಗೊಂಡವು.

ಕೋವಿಡ್-19ನಿಂದಾಗಿ ಹಲವು ತಿಂಗಳಿಂದ ಮನ ರಂಜನಾ ಕಾರ್ಯಕ್ರಮವಿಲ್ಲದೇ ಮಂಕಾಗಿದ್ದ ಮನಸು ಗಳಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರಾಂ ತ್ಯದ ದಿನವೇ ಜಾನಪದ ವೈವಿಧ್ಯ ಉಣಬಡಿಸಿತು.

ಸುದೀರ್ಘ ಅವಧಿ ನಂತರ ಮೈಸೂರಿನಲ್ಲಿ `ಜಾನ ಪದ ಸುಗ್ಗಿ’ ಸಾಂಸ್ಕøತಿಕ ಕಾರ್ಯಕ್ರಮ ಕಲಾ ಪ್ರೇಮಿ ಗಳು, ಕಲಾ ರಸಿಕರಿಗೆ ಮುದ ನೀಡಿತು. ವಿರಳ ಸಂಖ್ಯೆ ಯಲ್ಲಿದ್ದ ಪ್ರೇಕ್ಷಕರು ಜಾನಪದ ನೃತ್ಯ ಹಾಗೂ ಗೀತ ಗಾಯನದ ವೈಭವ ಕಂಡು ಮೈಮರೆತು ಸಂಭ್ರಮಿಸಿದರು.

ಜಾನಪದ ನೃತ್ಯ ವಿಭಾಗದಲ್ಲಿ ಕುಮಾರಯ್ಯ ತಂಡ ಚಿಟ್‍ಮೇಳ, ದಿಲೀಪ್ ತಂಡ `ಊರ್ಟಿಕೋಟ್’ ಆಟ, ಲಿಂಗಯ್ಯ ತಂಡ ಕಂಸಾಳೆ, ಪರಮೇಶ್ ತಂಡ ನಗಾರಿ, ಕಿರಾಳು ಮಹೇಶ್ ತಂಡ ವೀರಗಾಸೆ, ಸುಂದ್ರೇಶ್ ತಂಡ ಪೂಜಾ ಕುಣಿತ, ಮೇಘನಾ ಎಂ. ತಂಡ ಡೊಳ್ಳು ಕುಣಿತ, ಮಂಜು ತಂಡ ತಮಟೆ ವಾದನ, ಶಿವಮಲ್ಲೇಗೌಡ ತಂಡದ ಗೊರವರ ಕುಣಿತ, ಬಂಗಾರಸ್ವಾಮಿ ತಂಡದ ಸುಗ್ಗಿ ಕುಣಿತ, ಕುಶಾಲಿನಿ ತಂಡದ ಸಂಬಾಳವಾದನ ನೃತ್ಯ ಪ್ರದರ್ಶಿಸಿದರು.

ಇದಕ್ಕೂ ಮುನ್ನ ಕಲಾಮಂದಿರ ಆವರಣದಲ್ಲಿ ನಗಾರಿ ತಂಡದ ಕಲಾವಿದರು ತಮಟೆ, ನಗಾರಿ ಸದ್ದು ಮಾಡಿ ದಾಗ ನೆರೆದಿದ್ದವರು ಕುಣಿದು ಕುಪ್ಪಳಿಸಿದರು. ವೇದಿಕೆಯಲ್ಲಿ ಜಾನಪದ ಕಲಾವಿದ ಮೈಸೂರು ಗುರು ರಾಜ್ ಮತ್ತು ತಂಡ ಮಂಟೇಸ್ವಾಮಿ ಕಥಾಪ್ರಸಂಗ ಪ್ರಸ್ತುತಪಡಿಸಿ ಹಳೆ ದಿನಗಳತ್ತ ವಾಲುವಂತೆ ಮಾಡಿತು.

`ಬಾರಯ್ಯ ಬೆಳದಿಂಗಳೆ’ ಶೀರ್ಷಿಕೆಯಡಿ ಮೈಸೂರು ಗುರುರಾಜ್, ಗೊರವರ ಮಲ್ಲಯ್ಯ, ದೇವಾನಂದ ವರಪ್ರಸಾದ್, ಎಂ.ಮಹಾಲಿಂಗ, ಕಲೆ ನಟರಾಜ್, ಲಾಸ್ಯ, ಲಕ್ಷ್ಮೀರಾಮ್, ಪೆÇ್ರ.ಮೈಸೂರು ಕೃಷ್ಣಮೂರ್ತಿ, ಕೃಷ್ಣಮೂರ್ತಿ ತಲಕಾಡು, ಶಂಭುಲಿಂಗಶೆಟ್ಟಿ, ಲತಾ ಪುಟ್ಟಸ್ವಾಮಿ, ಮೈಸೂರು ಉಮೇಶ್, ಹರದನಹಳ್ಳಿ ನಟರಾಜ್, ಮಹದೇವಯ್ಯ, ಎಸ್.ಆರ್.ಪ್ರದೀಪ್, ಅಮ್ಮ ರಾಮಚಂದ್ರ ತಂಡದವರು ಮಹದೇಶ್ವರ, ಮಂಟೇಸ್ವಾಮಿ ಮೊದಲಾದ ಜಾನಪದ ಹಾಡು ಹಾಡಿ ಸಂಗೀತದ ರಸದೌತಣ ಉಣಬಡಿಸಿದರು.

Fascinating folklore in the gallery

ಜನಪದ ಕಡೆಗಣನೆ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಲ್.ನಾಗೇಂದ್ರ, ಮೌಲ್ಯಯುತ ಜನಪದ ವನ್ನು ನಾಗರಿಕತೆ ಸೋಗಿನಲ್ಲಿ ಕಡೆಗಣಿಸಿ ಅನಾಗರಿಕ ಸಮಾಜ ಬೆಳೆಯುವಂತೆ ಮಾಡಲಾಗಿದೆ. ನಾಗರಿಕ ಪ್ರಪಂಚ ಬೆಳೆದಷ್ಟು ಸಂಸ್ಕೃತಿ, ಆಚಾರ-ವಿಚಾರಗಳು ಉಳಿಯಲಿದೆ. ಎಲ್ಲ. ಭಾಷೆ, ಜಾತಿ, ಧರ್ಮವನ್ನು ಮೀರಿದ್ದು ಜನಪದ ಕಲೆ. ತಲೆತಲಾಂತರದಿಂದ ಜನ ಪದ ಬೆಳೆದುಕೊಂಡು ಬಂದಿದೆ. ಜನಪದವು ಜೀವನದ ಅನುಭವ ಕೊಡುತ್ತದೆ, ಮನರಂಜನೆ ನೀಡುತ್ತದೆ. ಆದರ್ಶ ಸಮಾಜದ ನಿರ್ಮಾಣಕ್ಕೂ ಸಹಕಾರಿ ಎಂದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಎಂ.ಅರ್ಕಸಾಲಿ ಮಾತನಾಡಿ, ಆಧುನಿಕ ಜೀವನದ ಭರಾಟೆಯಲ್ಲಿ ಜನಪದ ಕಲೆ ಸೊರಗುತ್ತಿದೆ. ಜನಪದ, ಶಿಲ್ಪಕಲೆ ಉಳಿಯಬೇಕು. ಇವು ಮಹತ್ವ ಕಳೆದುಕೊಳ್ಳ ದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾ ಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ, ಭಕ್ತಿ, ಶ್ರದ್ಧೆ ಯಿಂದ ಕಾಯಕ ಮಾಡಿದರೆ ತಾನಾಗಿಯೇ ಎಲ್ಲವೂ ಒಲಿದು ಬರುತ್ತದೆ. ಕಲೆ, ಸಂಗೀತ ತಾನಾಗಿಯೇ ಬರಲ್ಲ. ಅದಕ್ಕೆ ಸಿದ್ಧಿ ಬೇಕು. ದೇವರು ಅವಕಾಶ ಕೊಡುತ್ತಾನೆ. ಅದನ್ನು ನಾವು ಬಳಸಿಕೊಂಡು ಮುಂದೆ ಬರಬೇಕು. ಕನ್ನಡ ಕಲಿಯಿರಿ, ಕನ್ನಡ ಶಾಲೆಗೆ ಸೇರಿಸಿ, ಕನ್ನಡ ಮಾತನಾಡಿ, ತಮ್ಮ ಮಕ್ಕಳನ್ನು ಕಲಾವಿದರನ್ನಾಗಿ ಮಾಡಿ, ರಂಗಭೂಮಿಗೆ ಸೇರಿಸಿ ಎಂದು ಸಲಹೆ ನೀಡಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಮೈಸೂರು -ಚಾಮರಾಜನಗರ ಜಿಲ್ಲೆಯಲ್ಲಿ ಜನಪದ ಕಲೆ ಹಾಸು ಹೊಕ್ಕಾಗಿದೆ. ಮಹದೇಶ್ವರಬೆಟ್ಟಕ್ಕೆ ಹೋಗುವವರಿಗೆ ನಮ್ಮ ಪರಂಪರೆ ಹೇಗಿದೆ ಎನ್ನುವುದು ಗೊತ್ತಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತಕುಮಾರ್ ಗೌಡ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಮಾತನಾ ಡಿದರು. ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತ, ಸದಸ್ಯ ಸಂಚಾಲಕ ಜಿ.ಆರ್.ಶ್ರೀವತ್ಸ ಇದ್ದರು. ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಶುಭಾಶಯ ಸಂದೇಶ ವಾಚಿಸಿದರು.

Translate »