ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ
ಮಂಡ್ಯ

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ

June 10, 2022

ಮಂಡ್ಯ, ಜೂ.9(ಮೋಹನ್‍ರಾಜ್)-ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ್ದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮಂಡ್ಯ ನಗರದ ವಿಮ್ಸ್‍ಆಸ್ಪತ್ರೆಆವರಣದಲ್ಲಿ ಪ್ರೀತಿ ಮಾಡಲು ನಿರಾಕರಿಸಿದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆಕೆಯ ಸಂಬಂಧಿಕಯುವಕನೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗುರುವಾರ ಸಂಜೆ ನಡೆದಿದೆ. ತಾಲೂಕಿನಗ್ರಾಮವೊಂದರ 19 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದಆಕೆಯ ಸಂಬಂಧಿ ಸಂಪತ್(20), ಇಂದು ಬೆಳಗ್ಗೆ ವಿದ್ಯಾರ್ಥಿನಿ ಕಾಲೇಜಿಗೆ ಹೋಗುವಾಗ ಆಕೆಯನ್ನುಅಡ್ಡಗಟ್ಟಿ ಸಂಜೆಯೊಳಗೆ ತನ್ನನ್ನು ಪ್ರೀತಿಸುವುದಾಗಿ ಹೇಳಬೇಕು ಎಂದುತಾಕೀತು ಮಾಡಿಗಡುವು ನೀಡಿದ್ದ. ಸಂಜೆಕಾಲೇಜಿನಿಂದ ಹೊರ ಬಂದ ಆಕೆ ಪ್ರೀತಿ ನಿರಾಕರಿಸಿದಾಗ ರಿಪೀಸ್ ಪಟ್ಟಿಯಿಂದಆಕೆಯತಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿಗಾಯಗೊಂಡಿರುವ ವಿದ್ಯಾರ್ಥಿ ನಿಗೆ ವಿಮ್ಸ್‍ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ನೀಡಿದ ನಂತರ ಹೆಚ್ಚಿನಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‍ಗೆರವಾನಿಸಲಾಗಿದೆ. ವಿದ್ಯಾರ್ಥಿನಿ ಮೇಲೆ ಯುವಕ ಹಲ್ಲೆ ನಡೆಸುತ್ತಿದ್ದಾಗಆಕೆಯ ಸಹಾಯಕ್ಕೆ ಸಹಪಾಠಿಗಳು ಆಗಮಿಸಿದರಾದರೂ, ಅಷ್ಟರಲ್ಲಿ ಮಾರಣಾಂತಿಕ ಹಲ್ಲೆ ನಡೆದು ಬಿಟ್ಟಿತ್ತು. ವಿದ್ಯಾರ್ಥಿನಿಯ ಸಹ ಪಾಠಿಗಳು ಹಾಗೂ ಸಾರ್ವಜನಿಕರುಯುವಕನ ಹಿಡಿದು, ಥಳಿಸಿ, ಆತನನ್ನು ಮಂಡ್ಯ ಪೂರ್ವಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರುಯುವಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನಗ್ರಾಮವೊಂದರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಹಿಂದೆ ಬಿದ್ದಿದ್ದಆಕೆಯ ಸಂಬಂಧಿ ಸಂಪತ್, ತನ್ನನ್ನು ಪ್ರೀತಿಸುವಂತೆದುಂಬಾಲು ಬಿದ್ದಿದ್ದ. ಈತ ಸರಿಯಾಗಿ ವಿದ್ಯಾಭ್ಯಾಸವನ್ನೂ ಮಾಡದೇ, ಯಾವುದೇ ಕೆಲಸಕ್ಕೂ ಹೊಗದೇಇದ್ದುದರಿಂದ ವಿದ್ಯಾರ್ಥಿನಿ ಆತನನ್ನು ಪ್ರೀತಿಸಲು ನಿರಾಕರಿಸಿದ್ದಳು. ಆಕೆಯನ್ನು ಮದುವೆ ಮಾಡಿಕೊಡು ವಂತೆ ಕೇಳಿದಾಗ ಮನೆಯವರೂಕೂಡ ನಿರಾಕರಿಸಿದ್ದರು ಎಂದು ಹೇಳಲಾಗಿದೆ.

ಕಳೆದ ಎರಡು ವರ್ಷದಿಂದಯುವತಿ ಹಿಂದೆ ಬಿದ್ದಿದ್ದಈತ, ಇತ್ತೀಚೆಗೆಗ್ರಾಮದಲ್ಲಿ ಹಾಗೂ ಕಾಲೇಜು ಬಳಿ ಆಕೆಯನ್ನು ಹಿಂಬಾಲಿಸಿ ಪೀಡಿಸಲಾರಂಭಿಸಿದಾಗ ಯುವತಿಯಕುಟುಂಬದವರುಗ್ರಾಮದಲ್ಲಿ ಪಂಚಾಯ್ತಿ ಸೇರಿಸಿ ಆಕೆಯತಂಟೆಗೆ ಹೋಗದಂತೆಎಚ್ಚರಿಕೆ ನೀಡಿದ್ದಾರೆ. ಆದರೂ ಸುಮ್ಮನಿರದಆತ, ಯುವತಿಯ ಸ್ನೇಹಿತೆಯರನ್ನು ಸಂಪರ್ಕಿಸಿ ತನ್ನನ್ನು ಪ್ರೀತಿಸುವಂತೆಯುವತಿಗೆ ಹೇಳಬೇಕೆಂದು ಒತ್ತಡ ಹೇರುತ್ತಿದ್ದಎನ್ನಲಾಗಿದೆ. ಎರಡು ದಿನದ ಹಿಂದೆ ವಿದ್ಯಾರ್ಥಿನಿ ಹುಟ್ಟುಹಬ್ಬವನ್ನುತನ್ನಜೊತೆಯೇ ಆಚರಿಸಿಕೊಳ್ಳಬೇಕೆಂದು ಪೀಡಿಸಿದ್ದನಂತೆ.

Translate »