ಜು.18ಕ್ಕೆರಾಷ್ಟ್ರಪತಿಚುನಾವಣೆ ಜು.25ಕ್ಕೆ ನೂತನರಾಷ್ಟ್ರಪತಿ ಪದಗ್ರಹಣ
News

ಜು.18ಕ್ಕೆರಾಷ್ಟ್ರಪತಿಚುನಾವಣೆ ಜು.25ಕ್ಕೆ ನೂತನರಾಷ್ಟ್ರಪತಿ ಪದಗ್ರಹಣ

June 10, 2022

ನವದೆಹಲಿ, ಜೂ.9- ರಾಷ್ಟ್ರಪತಿಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರಚುನಾವಣಾಆಯೋಗವುಗುರುವಾರ ಪ್ರಕಟಿಸಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾ ವಣೆಗೆ ಮತದಾನ ನಡೆಯಲಿದ್ದು, ಜುಲೈ 21ರಂದು ಮತಎಣಿಕೆ ನಡೆಯಲಿದೆಎಂದು ಮುಖ್ಯಚುನಾವಣಾಆಯುಕ್ತರಾಜೀವ್‍ಕುಮಾರ್ ಹೇಳಿದ್ದಾರೆ. 2022ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಒಟ್ಟು 4,809 ಮತದಾರರು ಮತಚಲಾಯಿಸುತ್ತಾರೆ. ಈ ಚುನಾವಣೆಯಲ್ಲಿರಾಜ್ಯಸಭಾ ಚುನಾವಣೆಗಳಲ್ಲಿರುವಂತೆ ಯಾವುದೇರಾಜಕೀಯ ಪಕ್ಷವುತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ ಎಂದುಅವರು ಮಾಹಿತಿ ನೀಡಿದ್ದಾರೆ. ದೇಶದ ಹಾಲಿ ರಾಷ್ಟ್ರಪತಿರಾಮ್‍ನಾಥ್‍ಕೋವಿಂದ್‍ಅವರಅವಧಿ ಜು.24ರಂದು ಮುಕ್ತಾಯವಾಗಲಿದೆ. ಕೊನೆಯಅಧ್ಯಕ್ಷೀಯಚುನಾವಣೆಯು 17 ಜುಲೈ 2017ರಂದು ನಡೆದಿತ್ತು.

2017ರ ಅಧ್ಯಕ್ಷೀಯಚುನಾವಣೆಯಲ್ಲಿ ಸುಮಾರು ಶೇ.50ರಷ್ಟು ಮತಗಳು ಎನ್‍ಡಿಎ ಪರವಾಗಿಇದ್ದವು. ಒಟ್ಟು 4,880 ಮತದಾರರಲ್ಲಿ 4,109 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಿದ್ದರು. ನೂತನರಾಷ್ಟ್ರಪತಿ ಜು.25ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

Translate »