`ಜಾತ್ಯತೀತ’ ಜಂಗೀಕುಸ್ತಿ
News

`ಜಾತ್ಯತೀತ’ ಜಂಗೀಕುಸ್ತಿ

June 10, 2022

ಬೆಂಗಳೂರು, ಜೂ.9 (ಕೆಎಂಶಿ)-ವಿಧಾನಸಭೆ ಯಿಂದರಾಜ್ಯಸಭೆಯ 4ನೇ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್‍ಒಬ್ಬರನ್ನೊಬ್ಬರು ನಿಂದಿಸಿಕೊಂಡು ಬಿಜೆಪಿ ಅಭ್ಯರ್ಥಿಗೆ ಸುಗಮ ದಾರಿ ಮಾಡಿಕೊಟ್ಟಂತಿದೆ.

ರಾಜ್ಯಸಭೆಯ 4 ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯುತ್ತಿದ್ದು, ಪೂರ್ವದಿನವಾದಇಂದುಕಾಂಗ್ರೆಸ್ ಮತ್ತುಜೆಡಿಎಸ್ ನಾಯಕರುತಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆಒಬ್ಬರನ್ನೊಬ್ಬರುಕೋರಿಕೊಂಡರೇ ಹೊರತು, ಇದರಿಂದಇಬ್ಬರಿಗೂ ಪ್ರಯೋಜನವಾಗಿಲ್ಲ. ಇವೆರಡೂ ಪಕ್ಷಗಳ ಕಿತ್ತಾಟವನ್ನುರಾಜಕೀಯ ಲಾಭ ವಾಗಿ ಪಡೆದುಕೊಳ್ಳಲು ಬಿಜೆಪಿ ಮುಂದಾಗಿದ್ದು, ತಮ್ಮಇಬ್ಬರು ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಿ, ಮೂರನೇಅಭ್ಯರ್ಥಿಯನ್ನುಗೆಲ್ಲಿಸಲು 32 ಮೊದಲ ಪ್ರಾಶಸ್ತ್ಯ ಮತಗಳ ಜೊತೆಗೆ ಉಳಿದ 91 ಮತಗಳ ಎರಡನೇ ಪ್ರಾಶಸ್ತ್ಯವನ್ನು ಮೂರನೇಅಭ್ಯರ್ಥಿ ಲೆಹರ್‍ಸಿಂಗ್‍ಗೆ ನೀಡಿ, ಗೆಲ್ಲಿಸಿ ಕೊಳ್ಳಲು ರಣತಂತ್ರ ರೂಪಿಸಿದೆ.

ತಮ್ಮ ಮತಗಳು ಎಲ್ಲಿಯೂದೋಷಪೂರಿತವಾಗಬಾರದೆಂದು ಬಿಜೆಪಿ ಶಾಸಕರಿಗೆ ಕಳೆದ 2 ದಿನಗಳಿಂದ ಆ ಪಕ್ಷದ ನಾಯಕರು ಪಾಠ ಹೇಳಿದ್ದಾರೆ. ಇಂದೂಕೂಡಾಯಾವರೀತಿ ಮತಚಲಾವಣೆ ಮಾಡಬೇಕುಎಂದು ಹಿರಿಯ ನಾಯಕರು ಶಾಸಕರಿಗೆ ಮಾರ್ಗದರ್ಶನ ಮಾಡಿದರು. ಯಾರೂಯಾರಿಗೆ ಮತ ಹಾಕಬೇಕು ಎಂಬುದನ್ನು ಬಿಜೆಪಿ ಗೌಪ್ಯವಾಗಿಟ್ಟಿದ್ದು, ಮತದಾನಕ್ಕೂ ಮುನ್ನತಮ್ಮ ಪಕ್ಷದ ಶಾಸಕರಿಗೆಚೀಟಿ ನೀಡಲಿದೆ.

ಚುನಾವಣೆಯಲ್ಲಿತಮ್ಮಅಭ್ಯರ್ಥಿಯನ್ನು ಬೆಂಬಲಿಸುವಂತೆಜೆಡಿಎಸ್ ನಾಯಕರುಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಿದ್ದರೆ, ತಮ್ಮಅಭ್ಯರ್ಥಿಯನ್ನುಗೆಲ್ಲಿಸಲು ಬೆಂಬಲ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಶಾಸಕರ ಮೊರೆ ಹೋಗಿದ್ದಾರೆ. ಆದರೆಇದರಿಂದಯಾವುದೇ ಪ್ರಯೋಜನಕಂಡು ಬಂದಿಲ್ಲ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ತಮ್ಮಅಭ್ಯರ್ಥಿಕುಪೇಂದ್ರರೆಡ್ಡಿಅವರನ್ನು ಬೆಂಬಲಿಸಬೇಕು ಎಂದುರಾಜ್ಯಕಾಂಗ್ರೆಸ್‍ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾಅವರಿಗೆಕುಮಾರಸ್ವಾಮಿಇಂದು ಮನವಿ ಮಾಡಿಕೊಂಡಿದ್ದಾರೆ. ಮೂವತ್ತೆರಡು ಮತಗಳನ್ನು ಹೊಂದಿರುವಜೆಡಿಎಸ್‍ಅಭ್ಯರ್ಥಿಕುಪೇಂದ್ರರೆಡ್ಡಿಅವರು ಸಾಮಾಜಿಕ ಸೇವೆ ಮಾಡುತ್ತಿದ್ದಾರೆ, ಉದ್ಯಮಿಯಾಗಿದ್ದಾರೆ. ಅಪಾರಅನುಭವ ಹೊಂದಿ ರುವಅವರಿಗೆ ಬೆಂಬಲ ನೀಡುವ ಅನಿವಾರ್ಯತೆಯೇನುಎಂಬುದನ್ನುರಣದೀಪ್ ಸಿಂಗ್ ಸುರ್ಜೇವಾಲಾಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರುವುದಾಗಿ ಕುಮಾರಸ್ವಾಮಿಟ್ವೀಟ್‍ನಲ್ಲಿ ಹೇಳಿದ್ದಾರೆ. ಕೋಮುವಾದ ಮತ್ತುಜಾತ್ಯಾತೀತತೆಯ ನಡುವೆ ಸಂಘರ್ಷ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ಮನ್ಸೂರ್ ಅಲಿ ಖಾನ್‍ಅವರನ್ನು 2ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಹೀಗಾಗಿ ಅವರ ಗೆಲುವಿಗೆ ಬೇಕಾದ ಬೆಂಬಲ ನೀಡಲು ಸಿದ್ಧರಾಮಯ್ಯ ಅವರುಜೆಡಿಎಸ್ ಶಾಸಕರಿಗೆ ಪತ್ರಮುಖೇನ ಮನವಿ ಮಾಡಿದ್ದಾರೆ. ಈ ಬಾರಿಯ ಚುನಾವಣೆಯನ್ನು ಇತಿಹಾಸ ನೆನಪಿನಲ್ಲಿಟ್ಟಿರುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರೆ, ಕೋಮುವಾದದಿಂದ ದೇಶ ಎದುರಿಸುತ್ತಿರುವ ಆತಂಕಕ್ಕೆ  ಪ್ರತಿಯಾಗಿ ಉತ್ತರ ನೀಡಲು ಮುಂದಾಗಿಎಂದು ಸಿದ್ಧರಾಮಯ್ಯ ಜೆಡಿಎಸ್ ಶಾಸಕರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಯಾವತ್ತೂ ಜಾತ್ಯತೀತ ನೀತಿಗೆ ಬದ್ಧವೆಂಬುದುಇತಿಹಾಸ.ಈ ಹಿಂದೆದೇವೇಗೌಡರನ್ನುದೇಶದ ಪ್ರಧಾನಿ ಮಾಡಿದ್ದುಕಾಂಗ್ರೆಸ್ ಪಕ್ಷ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 37 ಶಾಸಕರನ್ನು ಹೊಂದಿದ್ದರೂ ಎಂಭತ್ತರಷ್ಟು ಶಾಸಕ ಬಲವಿದ್ದ ಕಾಂಗ್ರೆಸ್ ಪಕ್ಷವೇ ಮುಂದಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತು. ಇತ್ತೀಚೆಗೆ ನಡೆದರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ಸ್ವಯಂಬಲವಿಲ್ಲದೆಇದ್ದರೂಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೇವೇಗೌಡರುರಾಜ್ಯಸಭೆ ಪ್ರವೇಶಿಸಲು ನೆರವುನೀಡಿತು.ಈ ಹಿನ್ನೆಲೆಯಲ್ಲಿಜೆಡಿಎಸ್ ಪಕ್ಷಕೂಡಾರಾಜ್ಯಸಭೆಚುನಾವಣೆಯಲ್ಲಿಕಾಂಗ್ರೆಸ್‍ಅಭ್ಯರ್ಥಿ ಮನ್ಸೂರ್ ಅಲಿ ಖಾನ್‍ಅವರನ್ನು ಬೆಂಬಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. ನಾವು ಜಾತ್ಯಾತೀತ ಶಕ್ತಿಗಳ ಗೆಲುವಿ ಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್‍ಅವರನ್ನು ಕಣಕ್ಕಿಳಿಸಿದೆವು ಮತ್ತುಜೆಡಿಎಸ್ ಪಕ್ಷಕೂಡಾಅವರ ಗೆಲುವಿಗೆ ಸಹಕಾರ ನೀಡುತ್ತದೆಎಂದಿದ್ದಾರೆ. ಹೀಗೆ ಪರಸ್ಪರರ ಗೆಲುವಿಗಾಗಿ ಎರಡೂ ಪಕ್ಷಗಳು ಪರಸ್ಪರರ ಮೇಲೆ ಒತ್ತಡ ಹೇರುತ್ತಿದ್ದಾರೆಯೇ ಹೊರತುಯಾವುದೇ ಪ್ರಯೋಜನವಾಗಿಲ್ಲ. ನಾಳೆ ರಾಜ್ಯಸಭಾಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತುಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗಳು ಇಂದು ಸಂಜೆ ನಡೆದಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆಚಾಮುಂಡೇ ಶ್ವರಿಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಕೋಲಾರ ಶಾಸಕ ಶ್ರೀನಿವಾಸಗೌಡಗೈರಾಗಿದ್ದು, ಈ ನಾಲ್ವರೂಕಾಂಗ್ರೆಸ್‍ಅಭ್ಯರ್ಥಿಗೆ ಮತ ಚಲಾಯಿಸಿದರೆ, ಮೊದಲ ಹಂತದಲ್ಲೇಜೆಡಿಎಸ್‍ಅಭ್ಯರ್ಥಿ ಎಲಿಮಿನೇಟ್‍ಆಗಲಿದ್ದು, ಎರಡನೇ ಪ್ರಾಶಸ್ತ್ಯದ ಮತಕ್ಕಾಗಿ ಬಿಜೆಪಿಯ ಲೆಹರ್ ಸಿಂಗ್ ಮತ್ತುಕಾಂಗ್ರೆಸ್‍ನ ಮನ್ಸೂರ್ ಅಲಿ ಖಾನ್ ನಡುವೆ ಹಣಾಹಣಿ ನಡೆಯಲಿದೆ.

Translate »