ಮೈಸೂರು ಪ್ರತಿಭಾವಂತರು, ಪ್ರತಿಭಾನ್ವಿತ ನಾಯಕರು, ಜನಪ್ರತಿನಿಧಿಗಳು, ಜನರು ಇರುವ ನಗರವಾಗಿದೆ. ಇದಕ್ಕೆ ತನ್ನದೇ ಆದ ಇತಿಹಾಸ ವಿದೆ. ಕರ್ನಾಟಕ ಹೆಸರಿಗೂ ಮುನ್ನ ಮೈಸೂರು ರಾಜ್ಯವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿರುವ ಅಡಿಪಾಯದಿಂದಾಗಿ ಕರ್ನಾಟಕವನ್ನು ಸುಂದರವಾಗಿ ಕಟ್ಟಲು ಸಾಧ್ಯವಾಯಿತು. ಕರ್ನಾ ಟಕ ಪ್ರಗತಿಪರ ರಾಜ್ಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ದಾವೋಸ್‍ಗೆ ತೆರಳಿದ್ದಾಗ ಅಮೆರಿಕಾದ ಪತ್ರಕರ್ತ ರೊಬ್ಬರು ಕರ್ನಾಟಕ ತಾಂತ್ರಿಕತೆಯಲ್ಲಿ ಮುಂದು ವರಿಯಲು ಕಾರಣ ಏನು
ಅಂತ ಕೇಳಿದರು. ಅದಕ್ಕೆ ನಾನು ಮಹಾರಾಜರ ಕಾಲದಲ್ಲಿ ಆರಂಭಿಸಿದ ಸಂಸ್ಥೆಗಳು, ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಕಾರಣವಾಗಿದೆ ಎಂಬ ಉತ್ತರ ನೀಡಿದೆ. ದೊಡ್ಡ ಪ್ರಮಾಣದ ಸಂಸ್ಥೆಗಳನ್ನು ಕಟ್ಟಿದ ಹಿನ್ನೆಲೆಯಲ್ಲಿ 500 ಫಾರ್ಚೂನ್ ಕಂಪನಿಗಳಲ್ಲಿ ಕರ್ನಾಟಕದಲ್ಲಿ ನಾಲ್ಕು ನೂರು ಇವೆ. ಆರ್‍ಎನ್‍ಡಿ ಸೆಂಟರ್ ಇರುವುದು ಬೆಂಗಳೂರಿನಲ್ಲಿ ಮಾತ್ರ. ಯಾವುದೇ ಇತಿಹಾಸವನ್ನು ಬರೆಯಲು ಮುಂದಾದರೆ ಮೈಸೂರು ಮತ್ತು ಇಲ್ಲಿನ ಮಹಾರಾಜರ ಕೊಡುಗೆ ಇದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮೈಸೂರು ಪ್ರಮುಖ ಪಾತ್ರ ವಹಿಸುತ್ತದೆ. ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಲು 320 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.ದೇಶದಲ್ಲೇ ಹೊಸ ಶಿಕ್ಷಣ ನೀತಿಯನ್ನು ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ರಾಜ್ಯ ಕರ್ನಾಟಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಕ್ಕಳು ಪೈಪೆÇೀಟಿ ನೀಡುವ ರೀತಿಯಲ್ಲಿ ಅವರಿಗೆ ಶಿಕ್ಷಣ ದೊರೆಯಬೇಕು. ಅದಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. 21ನೇ ಶತಮಾನ e್ಞÁನದ ಶತಮಾನವಾಗಿದೆ. ಈ ಹಿಂದೆ ಭೂಮಿ, ಬಂಡವಾಳ ಇದ್ದವರು ದೇಶವನ್ನು ಆಳುತ್ತಿದ್ದರು. ಆದರೆ ಇದೀಗ e್ಞÁನ ಇರುವವರು ದೇಶವನ್ನು ಆಳುತ್ತಾರೆ. ನಮ್ಮ ಮಕ್ಕಳನ್ನು ಜ್ಞಾನವಂತರನ್ನಾಗಿಸಲು ಹಾಗೂ ಕೌಶಲ್ಯದಿಂದ ಕೂಡಿದ ವ್ಯಕ್ತಿಗಳನ್ನಾಗಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ 7 ಸಾವಿರ ಶಾಲಾ ಕೊಠಡಿಯನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಕೊಠಡಿ ಏಕಕಾಲದಲ್ಲಿ ನಿರ್ಮಾಣವಾದ ಉದಾಹರಣೆ ಇಲ್ಲ ಎಂದರು.
ಮೈಸೂರು, ಜೂ.8 (ಎಂಟಿವೈ)- ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ನಂತರ ದೊಡ್ಡ ನಗರವಾಗಿ ಬೆಳೆಯುತ್ತಿರುವ ಮೈಸೂರು ಸೇರಿದಂತೆ ಐದು ಮಹಾನಗರಗಳಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು, ಬೆಂಗಳೂರು ನಂತರದ ಎರಡನೇ ನಗರಗಳನ್ನು ಸಮಗ್ರ ವಾಗಿ ಅಭಿವೃದ್ಧಿಪಡಿಸಲು ಐದು ಮಹಾನಗರಗಳನ್ನು ಆಯ್ಕೆ ಮಾಡಲಾಗಿದ್ದು, ಮೈಸೂರಿನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲಾ ಗುವುದು. ಬಿಯಾಂಡ್ ಬೆಂಗಳೂರು ಅನ್ವಯ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗುಲ್ಬರ್ಗಾ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೈಸೂರಿಗೆ ಕೈಗಾರಿಕೋದ್ಯಮಿಗಳ ಆಕರ್ಷಣೆಗೆ ಕೈಗಾರಿಕಾ ಟೌನ್‍ಶಿಪ್ ಮಾಡಲು ತೀರ್ಮಾನಿಸÀಲಾಗಿದೆ. ಕೈಗಾರಿಕೆಗಳ ಬೆಳವಣಿಗೆಯಲ್ಲಿ ಮೈಸೂರು ಪ್ರಮುಖ ಪಾತ್ರವಹಿಸುತ್ತದೆ. ರಾಜ್ಯದಲ್ಲಿ ಪದವಿಗಳನ್ನು ನೀಡುವ ಜತೆಗೆ ಕೌಶಲ್ಯವುಳ್ಳ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸುವ ಕೆಲಸ ಮಾಡಬೇಕಾಗಿದೆ. ಒಂದೂವರೆ ಲಕ್ಷ ಜನರಿಗೆ ಉದ್ಯಮಿಯಾಗು-ಉದ್ಯೋಗ ನೀಡು ಯೋಜನೆಯಡಿ ತರಬೇತಿ ಕೊಡಿಸುವ ಕೆಲಸ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ದೇಶದಲ್ಲಿ ಆರು ಕೋಟಿ, ಕರ್ನಾಟಕದಲ್ಲಿ 12 ಲಕ್ಷ ಜನರಿಗೆ ಉದ್ಯೋಗ ನೀಡಿ ಅನುಕೂಲ ಮಾಡಿಕೊಡಲಾಗಿದೆ. ಕೃಷಿ, ಸೇವಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪದ್ಧತಿಯನ್ನು ಬದಲಿಸಿಕೊಂಡ ಪರಿಣಾಮ ಅಭಿವೃದ್ಧಿಗೆ ಕಾರಣವಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಆತನಿಗೆ ಇಷ್ಟವಾದ ವಿಷಯಕ್ಕೆ ಬದಲಾ ಯಿಸಿಕೊಳ್ಳಲು ಅವಕಾಶವಿದೆ. ಔದ್ಯೋಗಿಕ ನೀತಿ ಮುಖ್ಯ. ಮೊದಲು ಆಸ್ತಿ, ಹಣವಿದ್ದವ ರಿಗೆ ಬೆಲೆ ಇರುತ್ತಿತ್ತು. ಈಗ ಜ್ಞಾನ ಹೊಂದಿದವರಿಗೆ ಮಾತ್ರ ಬೆಲೆ ಸಿಗುತ್ತಿದೆ. ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ಮಹಿಳಾ ಕ್ಷೇತ್ರಕ್ಕೆ ಒತ್ತು ನೀಡಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಚಿವರಾದ ಎಸ್.ಟಿ.ಸೋಮ ಶೇಖರ್, ಸಿ.ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಮೈಸೂರು ನಗರ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಕರ್ನಾಟಕ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮಹಾಪೌರರಾದ ಸುನಂದ ಪಾಲನೇತ್ರ, ಕರ್ನಾಟಕ ವಚನ ಬಾಲಮಂದಿರ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು, ಮೈಸೂರು ಗ್ರಾಮಾಂತರ ಉಸ್ತುವಾರಿ ಅಶ್ವಥ್ ನಾರಾಯಣ್, ಮೈಸೂರು ನಗರ ಉಸ್ತುವಾರಿ ಹಿರೇಂದ್ರ ಷಾ,ನಗರ ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ವಿ.ಸೋಮಸುಂದರ್, ಹೆಚ್.ಜಿ.ಗಿರಿಧರ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಮಾಜಿ ಅಧ್ಯಕ್ಷ ಆರ್.ರಘು ಕೌಟಿಲ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಇನ್ನಿತರರು ಉಪಸ್ಥಿತರಿದ್ದರು.