ತಂದೆಗೆ ಮುದ್ದು ಮಕ್ಕಳ ಮುಖ ನೋಡಲು ಬಿಡದ ಕೊರೊನಾ…!
ಮೈಸೂರು

ತಂದೆಗೆ ಮುದ್ದು ಮಕ್ಕಳ ಮುಖ ನೋಡಲು ಬಿಡದ ಕೊರೊನಾ…!

May 3, 2021

ಮೈಸೂರು, ಮೇ 2(ಎಂಕೆ)- ತಂದೆಗೆ ತನ್ನ ಮುದ್ದು ಮಕ್ಕಳ ಮುಖ ನೋಡಲು ಬಿಡದ ಕೊರೊನಾ…, ನೂರಾರು ಕನಸು ಗಳ ಕಟ್ಟಿಕೊಂಡಿದ್ದ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ…

ಮೈಸೂರಿನ ಮಂಚೇಗೌಡನ ಕೊಪ್ಪಲು ನಿವಾಸಿ ಚೇತನ್(35) ಕೊರೊನಾ ಸೋಂಕಿಗೆ ಏ.18ರಂದು ಬಲಿಯಾದರು. ಅವರ ಗರ್ಭಿಣಿ ಪತ್ನಿಗೆ ಪತಿ ಕಳೆದುಕೊಂಡ 11ನೇ ದಿನವೇ ಇಬ್ಬರು ಅವಳಿ ಪುತ್ರರು ಜನಿಸಿದ್ದು, ಮುದ್ದು ಮಕ್ಕಳು ಅಪ್ಪ ಇಲ್ಲದೇ ಅನಾಥವಾಗಿದ್ದಾರೆ.

ಖಾಸಗಿ ಕಾರ್ಖಾನೆ ಕೆಲಸಗಾರ ಚೇತನ್, 7 ವರ್ಷಗಳ ಹಿಂದೆ ಮದುವೆ ಯಾಗಿದ್ದರು. ತಂದೆ-ತಾಯಿ, ಅಣ್ಣಂದಿರ ಜೊತೆಗೆ ಅವರ ಬದುಕು ಸಂತೋಷ ದಿಂದ ಕೂಡಿತ್ತು. ಆದರೆ, ಕೊರೊನಾ ಕುಟುಂಬ ಆಧಾರಸ್ತಂಭವನ್ನೇ ಕೆಡವಿ, ಕ್ರೂರತೆ ಮೆರೆದಿದೆ. 6 ವರ್ಷಗಳಿಂದ ಮಕ್ಕಳಿಗಾಗಿ ಹಂಬಲಿಸುತ್ತಿರುವಾಗಲೇ ಕಡೆಗೂ ಪತ್ನಿ ಗರ್ಭಿಣಿಯಾದರು. ಮಕ್ಕಳು ಭೂಮಿಗೆ ಬರುವುದಕ್ಕೂ ಮೊದಲೇ ಭುಜದ ಮೇಲೆ ಹೊತ್ತು ಬೆಳೆಸುವ ಅಪ್ಪನನ್ನು ಕಳೆದುಕೊಂಡಿರುವುದು ಮನ ಕಲಕುತ್ತದೆ. ಪತಿ ಕಳೆದುಕೊಂಡ ದುಃಖದಲ್ಲಿರುವ ಪತ್ನಿಯ ನೋವು ಹೇಳತೀರದು.

ನಾವೇ ನೋಡಿಕೊಳ್ಳುತ್ತೇವೆ: ಮನೆಯಲ್ಲಿ ಯಾರಿಗೂ ಸೋಂಕಿರಲಿಲ್ಲ. ಚೇತನ್ ತುಂಬಾ ಆರೋಗ್ಯವಾಗಿದ್ದ. ಸೋಂಕು ಹೇಗೆ ತಗು ಲಿತು ಎಂಬುದೇ ಗೊತ್ತಿಲ್ಲ. ಚೇತನ್ ನಮ್ಮಿಂದ ದೂರವಾಗಿದ್ದರೂ ಅವನ ಸಂಸಾರವನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಚೇತನ್ ಅಣ್ಣ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕೊರೊನಾ ಸೋಂಕು ದೃಢವಾಗುತ್ತಿ ದ್ದಂತೆ ಮಂಡಕಳ್ಳಿಯ ಕೋವಿಡ್ ಕೇರ್ ಸೆಂಟರ್‍ಗೆ ಕರೆದುಕೊಂಡ ಹೋಗ ಲಾಯಿತು. ಅಲ್ಲಿ ಸರಿಯಾದ ಬೆಡ್ ವ್ಯವಸ್ಥೆ ದೊರಕದೆ ಬಳಿಕ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿಯೂ ಸರಿಯಾದ ಸ್ಪಂದನೆ ಇರಲಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ಹೋಗಬೇಕಾಯಿತು. ಅಲ್ಲಿ ಚಿಕಿತ್ಸೆ ಆರಂಭ ಗೊಂಡ ಬಳಿಕ ಚೆನ್ನಾಗಿಯೇ ಇದ್ದ, ಗುಣ ಮುಖನಾಗುತ್ತಿದ್ದ. ಇನ್ನೇನು ಡಿಸ್ಚಾರ್ಜ್ ಆಗಬಹುದು ಎಂದುಕೊಳ್ಳುವಷ್ಟರಲ್ಲಿಯೇ ಆಸ್ಪತ್ರೆಯಿಂದ ಕರೆಬಂತು, `ಚೇತನ್ ಇನ್ನಿಲ್ಲ’ ಎಂದರÀು ಎಂದು ಮನದಾಳದ ನೋವು ಬಿಚ್ಚಿಟ್ಟರು.

Translate »