ಕೊರೊನಾ ಸೋಂಕಿಗೆ ಬಲಿಯಾದ  ನಾಲ್ವರ ಮೃತದೇಹ ಸಾಗಿಸಿದ ಪಾಲಿಕೆ ಅಧಿಕಾರಿ
ಮೈಸೂರು

ಕೊರೊನಾ ಸೋಂಕಿಗೆ ಬಲಿಯಾದ ನಾಲ್ವರ ಮೃತದೇಹ ಸಾಗಿಸಿದ ಪಾಲಿಕೆ ಅಧಿಕಾರಿ

May 3, 2021

ಮೈಸೂರು, ಮೇ 2(ಎಂಟಿವೈ)- ಕೊರೊನಾ ಸೋಂಕಿನಿಂದ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಮುಕ್ತಿಧಾಮಕ್ಕೆ ಪಾಲಿಕೆಯ ಅಧಿಕಾರಿಯೊಬ್ಬರು ತಾವೇ ಸಾಗಿಸುವ ಮೂಲಕ ಸೇವಾ ದಕ್ಷತೆಯೊಂ ದಿಗೆ ಮಾನವೀಯತೆ ಪ್ರದರ್ಶಿಸಿರುವ ಘಟನೆ ತಡವಾಗಿ ವರದಿಯಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿಯೂ ಹಾಗೂ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿ ರುವ ಅನಿಲ್ ಕ್ರಿಸ್ಟಿ ಎಂಬುವರೇ ಅಧಿಕಾರಿ ಎಂಬ ಅಹಂ ಇಲ್ಲದೇ ಸಾಮಾನ್ಯ ಚಾಲಕನಂತೆ ಪಾಲಿಕೆಯ ಶವ ಸಾಗಿಸುವ ವಾಹನ ಚಾಲನೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೊರೊನಾ ಸೋಂಕಿಗೆ ಮೃತಪಟ್ಟ 13 ಮಂದಿಯ ಮೃತದೇಹಗಳನ್ನು ಬುಧವಾರ ಪಾಲಿಕೆಯ ಶವ ಸಾಗಿಸುವ ವಾಹನದಲ್ಲಿ ಮುಕ್ತಿಧಾಮಕ್ಕೆ ಸಾಗಿಸುವ ಪ್ರಕ್ರಿಯೆ ನಡೆ ಯುತ್ತಿತ್ತು. 7 ಮೃತದೇಹಗಳನ್ನು ಮುಕ್ತಿಧಾಮಕ್ಕೆ ಸಾಗಿಸಿದ ಬಳಿಕ ಶವ ಸಾಗಿ ಸುವ ವಾಹನದ ಚಾಲಕ ದಿಢೀರನೆ ಅಸ್ವಸ್ಥ ಗೊಂಡಿದ್ದಾರೆ. ಕೂಡಲೇ ಆ ಚಾಲಕನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಿದ ನೋಡಲ್ ಅಧಿಕಾರಿ ಅನಿಲ್ ಕ್ರಿಸ್ಟಿ, ಉಳಿದ ನಾಲ್ಕು ಶವವನ್ನು ಆಸ್ಪತ್ರೆಯಿಂದ ಮುಕ್ತಿ ಧಾಮಕ್ಕೆ ಸಾಗಿಸಲು ತಾವೇ ವಾಹನವನ್ನು ಚಲಾಯಿಸಿದ್ದಾರೆ. ಸೋಂಕಿಗೆ ಬಲಿಯಾದ ನಾಲ್ವರ ಮೃತದೇಹವನ್ನು ಗೌರವಯುತ ವಾಗಿ ಮುಕ್ತಿಧಾಮಕ್ಕೆ ಕೊಂಡೊಯ್ದು, ಅಂತ್ಯಕ್ರಿಯೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಾನವೀಯತೆ ಮುಖ್ಯ: `ಮೈಸೂರು ಮಿತ್ರ’ನೊಂದಿಗೆ ನೋಡಲ್ ಅಧಿಕಾರಿ ಅನಿಲ್ ಕ್ರಿಸ್ಟಿ ಮಾತನಾಡಿ, ಬುಧವಾರ ಸೋಂಕಿಗೆ ತುತ್ತಾದವರಲ್ಲಿ ನಮ್ಮ ವಾಹ ನದ ಚಾಲಕ 7 ಮೃತದೇಹವನ್ನು ಮುಕ್ತಿ ಧಾಮಕ್ಕೆ ಸಾಗಿಸಿದ್ದರು. ಮಧ್ಯಾಹ್ನ 2 ಗಂಟೆ ವೇಳೆಗೆ ವಾಹನದ ಚಾಲಕ ಅನಾ ರೋಗ್ಯಕ್ಕೀಡಾದರು. ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಉಳಿದ ನಾಲ್ಕು ಮೃತ ದೇಹ ಮುಕ್ತಿಧಾಮಕ್ಕೆ ಕಳುಹಿಸಬೇಕಾಗಿತ್ತು. ಮೈಸೂರು ತಾಲೂಕಿನ ವಿವಿಧ ಗ್ರಾಮ ಗಳಿಂದ ಸೋಂಕಿತರ ಪೋಷಕರು ಆಗಮಿಸಿ ದುಃಖತಪ್ತರಾಗಿ ಶವಾಗಾರದ ಬಳಿ ಇದ್ದರು. ಅವರನ್ನು ಮನೆಗೆ ವಾಪಸ್ಸು ಕಳುಹಿಸಲು ಮನಸ್ಸು ಒಪ್ಪಲಿಲ್ಲ. ದುಃಖ ತಪ್ತರ ಸಂಕಷ್ಟವನ್ನು ಅರಿತು ನಾನು ಶವ ಸಾಗಿಸುವ ವಾಹನವನ್ನು ಚಾಲನೆ ಮಾಡಿ ಕೊಂಡು ಸೋಂಕಿಗೆ ತುತ್ತಾದ ನಾಲ್ವರ ಮೃತದೇಹ ಸಾಗಿಸಿದ್ದೇನೆ. ಇಲ್ಲಿ ಅಧಿ ಕಾರಕ್ಕಿಂತ ಮಾನವೀಯತೆ ಮುಖ್ಯ ಎನಿಸಿತು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

Translate »