ಪರ್ಯಾಯವಾಗಿ ಕುರಿಮಾಂಸ ಪೂರೈಕೆ; ಮೊಟ್ಟೆಗೆ ಬದಲು ಪೌಷ್ಠಿಕಾಂಶ ಆಹಾರ
ಮೈಸೂರು,ಮಾ.18(ಎಂಟಿವೈ)- ಹಕ್ಕಿಜ್ವರ(ಹೆಚ್5ಎನ್1) ಸೋಂಕು ಮೈಸೂರಲ್ಲಿ ಪತ್ತೆಯಾಗಿರುವುದರಿಂದ ಸೋಂಕು ಹರಡುವುದನ್ನು ತಡೆಯಲು ಮೈಸೂರು ಮೃಗಾ ಲಯದ ಕೆಲ ಮಾಂಸಾಹಾರಿ ಪ್ರಾಣಿಗಳಿಗೆ ನೀಡುತ್ತಿದ್ದ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಬದಲಾಗಿ ನಿಯಮಿತವಾಗಿ ಕುರಿ ಮಾಂಸ ನೀಡಲಾಗುತ್ತಿದೆ.
ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಮಾ.9ರಂದು ಮೃತಪಟ್ಟ ಕೋಳಿಗಳಲ್ಲಿ ಹಾಗೂ ಹೆಬ್ಬಾಳು ಕೆರೆ ಬಳಿ ಸಾವಿಗೀಡಾದ ಪಕ್ಷಿಗಳಲ್ಲಿ ಹೆಚ್5ಎನ್1 ಪತ್ತೆಯಾಗಿದ್ದರಿಂದ ಮೈಸೂರು ಸುತ್ತಮುತ್ತ ಕೋಳಿ, ಸಾಕು ಪಕ್ಷಿಗಳನ್ನು ಸಾಮೂ ಹಿಕವಾಗಿ ಸಾಯಿಸಲಾಗುತ್ತಿದೆ. ಇದೇ ವೇಳೆ ಮೃಗಾಲಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಮೃಗಾಲಯದ ಹುಲಿ, ಸಿಂಹ, ಚಿರತೆ, ತೋಳ, ಕತ್ತೆಕಿರುಬ ಮೊದಲಾದ ಮಾಂಸಹಾರಿ ಪ್ರಾಣಿಗಳಿಗೆ ನೀಡುತ್ತಿದ್ದ ಕೋಳಿ ಮಾಂಸ ಸ್ಥಗಿತಗೊಳಿಸಿ ಕುರಿಮಾಂಸ ನೀಡಲಾಗುತ್ತಿದೆ. ಕೆಲವು ಪ್ರಾಣಿಗಳಿಗೆ ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ. ಬದಲಾಗಿ ಪ್ರೋಟಿನ್‍ಯುಕ್ತ ಆಹಾರ ಪದಾರ್ಥ ನೀಡಲಾಗುತ್ತಿದೆ.