ಮೈಸೂರು,ಮಾ.18- ಮೈಸೂರಿನ ಅರ್ಲಿ ಚೈಲ್ಡ್‍ಹುಡ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಕೆಸರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ `ಪೂರ್ವ ಪ್ರಾಥಮಿಕ ಶಿಕ್ಷಕರ ಪಾತ್ರ’ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಯಿತು. ಆರೋಗ್ಯ, ನೈರ್ಮಲ್ಯ, ಸುರಕ್ಷತೆ, ನಡವಳಿಕೆ ನಿರ್ವಹಣೆ ಮತ್ತು ಬಾಲ್ಯದ ಅತ್ಯುತ್ತಮ ಅಭ್ಯಾಸಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾ ಯಿತು. ಕಾರ್ಯಾಗಾರವನ್ನು ಅರ್ಲಿ ಚೈಲ್ಡ್ ಹುಡ್ ಅಸೋಸಿಯೇಷನ್, ಮೈಸೂರು ಪ್ರಾಂತ್ಯದ ಮುಖ್ಯಸ್ಥರು ಮತ್ತು ಪೆÇೀದಾರ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಹಾಗೂ ಬನ್ನಿಮಂಟಪದ ಪೆÇೀದಾರ್ ಜಂಬೊ ಕಿಡ್ಸ್ ಫ್ರಾಂಚೈಸಿಗಳಾದ ಶಬಾನಾ ಎನ್ ನಡೆಸಿಕೊಟ್ಟರು.