ಮೈಸೂರು, ಮಾ. 18- ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ರಂಗ ತಂಡ (ಸಾರಂತ) ಬಳ್ಳಾರಿಯ ರಂಗತೋರಣ, ಇತ್ತೀಚೆಗೆ ನಡೆಸಿದ 13ನೆಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗ ವಹಿಸಿತ್ತು. ಕಾಲೇಜಿನ 19 ವಿದ್ಯಾರ್ಥಿ ಗಳು ಪಾಲ್ಗೊಂಡು `ಅಂಧಯುಗ’ ನಾಟಕವನ್ನು ಅಭಿನಯಿಸಿದರು.
ಧರ್ಮವೀರ್ ಭಾರತಿ ಅವರ ‘ಅಂಧ ಯುಗ್’ ಹಿಂದಿ ನಾಟಕದ ಕನ್ನಡ ಅನು ವಾದವನ್ನು ಸಿದ್ದಲಿಂಗಪಟ್ಟಣಶೆಟ್ಟಿ ಹಾಗೂ ತಿಪ್ಪೇಸ್ವಾಮಿ ಮಾಡಿದ್ದಾರೆ. ಈ ನಾಟಕವನ್ನು ನಿರ್ದೇಶಿಸಿದವರು ಶ್ರೇಯಸ್.ಪಿ ಹಾಗೂ ಸಂಗೀತ ನಿರ್ದೇಶನ ಸುಬ್ರಹ್ಮಣ್ಯ ಮೈಸೂರು.
ಈ ನಾಟಕ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಸುಚಿತ್ರ, ಸೈಯದ್ ವಾಸಿ ಅಬ್ಬಾಸ್, ಭಾರತಿ ಹೆಚ್.ಸಿ, ದೀಕ್ಷಿತ್, ದೀಪಕ್, ದಿವ್ಯಶ್ರೀ, ಮನೋಜ್, ನಿಖಿಲ್. ಪಿ, ರಾಘವೇಂದ್ರ, ಸುಬ್ರಹ್ಮಣ್ಯ ಪ್ರಜ್ವಲ್, ಮಹಾಶಾಂತೇಶ್, ವಿರೋಚನ್ ರಾಜೇ ಅರಸ್, ರಾಕೇಶ್, ವಿವೇಕ್, ಚಂದನ, ವೇಣು ಗೋಪಾಲ್, ಗಂಗಾಧರ್, ಸುಶ್ರಾವ್ಯ ಹಾಗೂ ರೇಖಾ ಭಾಗವಹಿಸಿದ್ದರು. ಈ ನಾಟಕಕ್ಕೆ ಉತ್ತಮ ನಾಟಕ (ಮೊದಲನೆ ಬಹುಮಾನ), ನಿರ್ದೇಶನ ಪ್ರಶಸ್ತಿ, ಪ್ರಸಾದನ ಪ್ರಶಸ್ತಿ ದೊರ ಕಿದೆ. ಈ ನಾಟಕದಲ್ಲಿ ಅಶ್ವತ್ಥಾಮನ ಪಾತ್ರ ನಿರ್ವಹಿಸಿದ ನಿಖಿಲ್ ಅವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿಯೂ ದೊರೆತಿದೆ.