ಕೋಲ್ಡ್ ಫ್ರಿಡ್ಜ್‍ನ ಸ್ವೀಟ್ಸ್, ತಂಪು ಪಾನೀಯಕ್ಕೂ ಕೊರೊನಾ ಕಾಟ!
ಮೈಸೂರು

ಕೋಲ್ಡ್ ಫ್ರಿಡ್ಜ್‍ನ ಸ್ವೀಟ್ಸ್, ತಂಪು ಪಾನೀಯಕ್ಕೂ ಕೊರೊನಾ ಕಾಟ!

March 19, 2020

ಮೈಸೂರು, ಮಾ.18(ಪಿಎಂ)- ಬೇಸಿಗೆ ತಾಪ ತಾಳ ಲಾರದೇ ಯಾವುದಾದರೂ ಹೋಟೆಲ್‍ನಲ್ಲಿ ತಣ್ಣನೆಯ ತಂಪು ಪಾನೀಯ ಸೇರಿದಂತೆ ಕೋಲ್ಡ್ ಫ್ರಿಡ್ಜ್‍ನಲ್ಲಿ ಶೇಖರಿಸಿ ಮಾರಾಟ ಮಾಡುವ ಸ್ವೀಟ್ಸ್ ತಿನ್ನಲು ಬಯಕೆಯಾದರೆ ಅದಕ್ಕೂ ಕೊರೊನಾ ವೈರಾಣು ಅಡ್ಡಿಯಾಗಲಿದೆ!

ಹೌದು, ಏರ್ ಕಂಡೀಷನರ್‍ಗಳಿಂದಲೂ ಕೊರೊನಾ ಹರಡುತ್ತದೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ತಣ್ಣನೆಯ ಪಾನೀಯ ಹಾಗೂ ಕೋಲ್ಡ್ ಫ್ರಿಡ್ಜ್‍ನಲ್ಲಿಡುವ ಸಿಹಿ ತಿನಿಸು ಗಳ ಮೂಲಕವೂ ವೈರಸ್ ಹರಡುವ ಭೀತಿ ಎದುರಾ ಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಕಾರ್ಯಕಾರಿ ಸಮಿತಿಯು ಬುಧವಾರ ತುರ್ತು ಸಭೆ ನಡೆಸಿ, ಸಿಹಿ ತಿಂಡಿಗಳ (ಸ್ವೀಟ್ಸ್) ತಯಾರಿಕೆ ಮತ್ತು ಮಾರಾಟ ಮಾಡುವವರು ಕೋಲ್ಡ್ ಫ್ರಿಡ್ಜ್‍ನಲ್ಲಿ ಶೇಖರಿಸಿ ಮಾರಾಟ ಮಾಡುವ ತಿನಿಸುಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಳಿಸಲು ತನ್ನ ಸದಸ್ಯರಿಗೆ ನಿರ್ದೇಶನ ನೀಡಿದೆ. ಇದರೊಂದಿಗೆ ಕೊರೊನಾ ಹರಡುವಿಕೆ ತಡೆ ಹಿಡಿಯಲು ಅನೇಕ ನಿರ್ಣಯ ಕೈಗೊಳ್ಳಲಾಗಿದೆ.

ಮೈಸೂರು ಜಿಲ್ಲೆಯ ಸ್ಟಾರ್ ಹೋಟೆಲ್‍ಗಳಿಂದ ಹಿಡಿದು ಬೇಕರಿ, ಫಾಸ್ಟ್‍ಫುಡ್ ಮಾಲೀಕರವರೆಗೂ ಹೋಟೆಲ್ ಮಾಲೀಕರ ಸಂಘದಲ್ಲಿ ಸದಸ್ಯತ್ವ ಹೊಂದಿದ್ದು, ಹೀಗಾಗಿ ಇಡೀ ಜಿಲ್ಲೆಯ ಹೋಟೆಲ್ ಹಾಗೂ ಬೇಕರಿಗಳಲ್ಲಿ ಕೋಲ್ಡ್ ಫ್ರಿಡ್ಜ್‍ನಲ್ಲಿ ಶೇಖರಿಸಿ ಮಾರಾಟ ಮಾಡುವ ಸ್ವೀಟ್ಸ್ ದೊರೆ ಯುವುದಿಲ್ಲ. ಕೋಲ್ಡ್ ಫ್ರಿಡ್ಜ್‍ನಲ್ಲಿಡುವ ಬಂಗಾಳಿ ಸ್ವೀಟ್ಸ್ ಹಾಗೂ ಹಾಲಿನ ಉತ್ಪನ್ನಗಳ ಮಾರಾಟವನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಜ್ಯೂಸ್ ಮಾರಾಟ ಮಾಡುವವರು ತುಂಬ ಕೋಲ್ಡ್ ಪಾನೀಯಗಳನ್ನು ನೀಡಬಾರದು. ಪಾನಿಪುರಿ (ಚಾಟ್ಸ್) ಮಾರಾಟ ಮಾಡುವವರು ಮಿನರಲ್ ವಾಟರ್ ಮೂಲಕ ಪಾನಿ ತಯಾರಿಸಬೇಕು. ಅಲ್ಲದೆ, ಹವಾನಿಯಂತ್ರಿತ (ಎಸಿ) ರೆಸ್ಟೋರೆಂಟ್‍ಗಳನ್ನು ಯಾವುದೇ ಕಾರಣಕ್ಕೂ ಸಾರ್ವ ಜನಿಕರ ಉಪಯೋಗಕ್ಕೆ ನೀಡಬಾರದೆಂದು ತೀರ್ಮಾ ನಿಸಲಾಗಿದೆ. ಬೇಕರಿ ಪದಾರ್ಥಗಳನ್ನು ತಯಾರು ಮಾಡುವ ವೇಳೆ ಸ್ವಚ್ಛತೆ ಕಾಪಾಡಿಕೊಂಡು ಕೆಲವು ಹಿಟ್ಟಿನ ಪದಾರ್ಥ ಗಳನ್ನು ನೇರವಾಗಿ ಕೈಗಳಿಂದ ಮಿಶ್ರಣ ಮಾಡದೇ ಸಲ ಕರಣೆ ಬಳಸಿಕೊಳ್ಳಲು ಹೆಚ್ಚಿನ ನಿಗಾ ವಹಿಸಬೇಕು. ಒಟ್ಟಾರೆ ಯಾಗಿ ಹೋಟೆಲ್, ಉಪಹಾರ ಗೃಹಗಳು (ಸಸ್ಯಾಹಾರಿ /ಮಾಂಸಾಹಾರಿ), ಬೇಕರಿ, ಸ್ವೀಟ್ಸ್, ಫಾಸ್ಟ್ ಫುಡ್, ಟಿಫಾ ನೀಸ್, ಜ್ಯೂಸ್ ಅಂಗಡಿಗಳು ಸೇರಿದಂತೆ ಎಲ್ಲಾ ಉದ್ಯಮ ಬಂಧುಗಳು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡುವ ಮೂಲಕ ಉತ್ತಮ ಸೇವೆ ನೀಡ ಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾಡಳಿತ ಹಾಗೂ ಸರ್ಕಾರ ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಅತಿ ಎಚ್ಚರಿಕೆ ಕ್ರಮ ಕೈಗೊಂಡಿದೆ. ನಮ್ಮ ಉದ್ಯಮಿಗಳು ಮತ್ತು ಸಿಬ್ಬಂದಿ ಈ ಸೂಕ್ಷ್ಮತೆ ಅರಿತು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲು ನಿರ್ಧರಿಸಲಾಯಿತು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಸಂಘದ ಟ್ರಸ್ಟ್ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಸುರೇಶ್, ಸಂಘದ ಸೊಸೈಟಿ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ, ವಿವಿಧ ಹೋಟೆಲ್‍ಗಳ ಪ್ರತಿ ನಿಧಿಗಳಾದ ಗೋಪಿನಾಥ್ ಗುಪ್ತ, ಮಹೇಶ್ ಕಾಮತ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »