ಫೀ.ಮಾ. ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಿ
ಮೈಸೂರು

ಫೀ.ಮಾ. ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಿ

September 9, 2021

ಮೈಸೂರು,ಸೆ.8(ಪಿಎಂ)-ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಡುಗೆ ಏನೂ ಇಲ್ಲ. ಆದರೂ ಅವರ ಹೆಸರನ್ನು ಉದ್ಯಾ ನವನಕ್ಕೆ ನಾಮ ಕರಣ ಮಾಡಿದ್ದು, ನೆಹರು ಕುಟುಂ ಬಸ್ಥರ ಹೆಸರಿಟ್ಟು ಸೋನಿಯಾ ಗಾಂಧಿ ಮೆಚ್ಚಿಸಬೇಕಾದ ಅನಿವಾರ್ಯ ಕಾಂಗ್ರೆಸ್‍ಗೆ ಇದೆಯೇ ಹೊರತು, ನಮಗೆ ಅಂತಹ ಅನಿ ವಾರ್ಯತೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಬುಧವಾರ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದರಿ ರಾಷ್ಟ್ರೀಯ ಉದ್ಯಾನವನಕ್ಕೆ ಭಾರತೀಯ ಸೇನೆಯ ಪ್ರಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಂತಹ ಸಾಧಕರ ಹೆಸರನ್ನು ಇಡ ಬೇಕೆಂಬುದು ನಮ್ಮ ಉದ್ದೇಶ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಸದರಿ ರಾಷ್ಟ್ರೀಯ ಉದ್ಯಾನವನಕ್ಕೂ ರಾಜೀವ್ ಗಾಂಧಿಗೂ ಏನು ಸಂಬಂಧ ಇಲ್ಲ. ಅವರ ಕೊಡುಗೆಯೂ ಇದಕ್ಕಿಲ್ಲ. ಯಾವುದೇ ಸ್ಥಳ, ರಸ್ತೆಗೆ ಹೆಸರು ನಾಮಕರಣ ಮಾಡ ಬೇಕೆಂದರೆ ಅದಕ್ಕೊಂದು ಮಹತ್ವ ಇರಬೇಕು. ಸ್ಥಳೀಯರು ಮತ್ತು ಹೆಸರಿಗೆ ಭಾವನಾತ್ಮಕ ಕೊಂಡಿ ಇರಬೇಕು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ರಾಜೀವ್ ಗಾಂಧಿ ಅವರಿಗೂ ಜನ ಸಂಬಂಧ ಕಲ್ಪಿಸಿ ಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನವರು ಭಾರತದ ಸೇನಾಪಡೆಯ ಪ್ರಪ್ರಥಮ ದಂಡನಾಯಕರು. ಹಾಗೆಯೇ ಅವರು ನಿವೃತ್ತಿ ನಂತರ ಕೊಡಗಿನಲ್ಲಿ ನೆಲೆಸಿದ್ದರು. ಹಾಗಾಗಿ ಅವರ ಹೆಸರು ನಾಮಕರಣ ಮಾಡಬೇಕೆಂದು ನಾನು ಕೇಳಿಕೊಂಡಿದ್ದೇನೆ. ಮುಖ್ಯಮಂತ್ರಿಗಳು ಇದನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹೆಸರು ನಾಮಕರಣಕ್ಕೆ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಆನ್‍ಲೈನ್ ಚಳವಳಿ ಸಹ ನಡೆಯಿತು.

ಆರೋಗ್ಯ ಕ್ಷೇತ್ರಕ್ಕೇನಿದೆ ರಾಜೀವ್ ಕೊಡುಗೆ: ಉದ್ದೇಶಪೂರ್ವಕವಾಗಿ ಹೆಸರು ಬದಲಿಸಲು ಬಿಜೆಪಿಯವರು ಹೊರಟ್ಟಿ ದ್ದಾರೆ. ದೇಶದ ಹೆಸರನ್ನು ಬದಲಿಸಲಿ ಎಂದು ಕಾಂಗ್ರೆಸ್‍ನಿಂದ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಹೆಸರನ್ನು ಉದ್ದೇಶ ಪೂರ್ವಕವಾಗಿಯೇ ಇಟ್ಟಿರುವುದಲ್ಲವೇ? ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯ ಎಂದೂ ಇದೆ. ಎಲ್ಲಾ ವೈದ್ಯಕೀಯ ಕಾಲೇಜುಗಳು ಅದರಡಿ ಯಲ್ಲಿ ಬರುತ್ತವೆ. ರಾಜೀವ್ ಗಾಂಧಿ ಅವರ ಕೊಡುಗೆ ಆರೋಗ್ಯ ಕ್ಷೇತ್ರಕ್ಕೆ ಏನಿದೆ? ಎಂದು ಪ್ರಶ್ನಿಸಿದರಲ್ಲದೆ, ಏನೂ ಕೊಡುಗೆ ಇಲ್ಲದೆಯೂ ಹೆಸರು ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಯಾರಿಗೆ ಉದ್ದೇಶ ಶುದ್ಧಿಯಿಲ್ಲ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತು. ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ನಾಮಕರಣ ಮಾಡ ಬೇಕು ಎಂದುಕೊಂಡಿದ್ದೇವೆ. ಯಾವ ವ್ಯಕ್ತಿಗೆ ಯಾವ ಶ್ರೇಯಸ್ಸು ಸಲ್ಲಬೇಕು ಎಂದು ಯೋಚಿಸಿ ಹೆಸರು ಇಡುತ್ತೇವೆ. ನಮ್ಮ ಪಕ್ಷದವರ ಹೆಸರನ್ನೇ ಇಡುತ್ತಿಲ್ಲ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ದೇಶಾದ್ಯಂತ 103 ರಾಷ್ಟ್ರೀಯ ಉದ್ಯಾ ನವನಗಳು ಇವೆ. ಅವುಗಳಲ್ಲಿ ಮೂರಕ್ಕೆ ರಾಜೀವ್‍ಗಾಂಧಿ ಹೆಸರು ಇಟ್ಟಿದ್ದಾರೆ. ಅದರಲ್ಲಿ ಇತ್ತೀಚೆಗೆ ಅಸ್ಸಾಂನಲ್ಲಿ ರಾಜೀವ್ ಗಾಂಧಿ ಹೆಸರನ್ನು ಕೈಬಿಟ್ಟು, ಸ್ಥಳೀಯ ಸಮುದಾಯದ ಹೆಸರು ನಾಮಕರಣ ಮಾಡಿದ್ದಾರೆ ಎಂದರು.

Translate »