ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕುರುಬ ಸಮುದಾಯ ಎಸ್‍ಟಿ ಸೇರ್ಪಡೆಗೆ ಹೋರಾಟ
ಮೈಸೂರು

ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕುರುಬ ಸಮುದಾಯ ಎಸ್‍ಟಿ ಸೇರ್ಪಡೆಗೆ ಹೋರಾಟ

January 7, 2021

ಮೈಸೂರು, ಜ.6(ಪಿಎಂ)- ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆಗೊಳಿಸುವ ಹೋರಾಟವನ್ನು ಸಮುದಾಯದ ಮುಖಂಡರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಕೊಂಡೊಯ್ಯಲಾಗುವುದು ಎಂದು ಸಂಘದ ಪ್ರಭಾರ ಅಧ್ಯಕ್ಷ ಬಿ. ಸುಬ್ರಹ್ಮಣ್ಯ (ಸುಬ್ಬಣ್ಣ) ತಿಳಿಸಿದರು.

ಮೈಸೂರಿನ ಮೈಸೂರಿನ ದೇವರಾಜ ಮೊಹಲ್ಲಾದ ಬಿಕೆ ಸ್ಟ್ರೀಟ್‍ನಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಮೈಸೂರು ಜಿಲ್ಲಾ ನಿರ್ದೇಶಕರ ವತಿಯಿಂದ ಹಮ್ಮಿ ಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾಧ್ಯಮಕ್ಕೆ ಅವರು ಪ್ರತಿಕ್ರಿಯೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರು ಸಂಘದ ನಿರ್ದೇಶಕರ ಸಭೆ ನಡೆಸಿ, ಎಸ್‍ಟಿ ಹೋರಾಟ ಕೈಬಿಡಿ ಎಂಬ ಸಲಹೆ ನೀಡಿ ರುವ ಮಾಹಿತಿ ಇದೆ. ಇಂತಹ ಸಂದರ್ಭ ದಲ್ಲಿ ಸಂಘ ಯಾವ ನಿಲುವು ತಾಳುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿ ಕ್ರಿಯಿಸಿ, ಅವರು ಹೋರಾಟ ಕೈಬಿಡಿ ಎಂದು ಎಲ್ಲಿಯೂ ಹೇಳಿಲ್ಲ. ಹೋರಾಟ ಮುಂದುವರೆಸಿ. ಆದರೆ ಸಂಘದ ನೇತೃತ್ವದಲ್ಲಿ ಹೋರಾಟ ಮುಂದು ವರೆಸಲು ಸಲಹೆ ನೀಡಿದ್ದಾರೆ. ಅವರ ಸಲಹೆ ಯಂತೆ ಕಾಗಿನೆಲೆ ಕನಕ ಗುರು ಪೀಠದ ಸ್ವಾಮೀಜಿಗಳು ಮಾರ್ಗ ದರ್ಶನ ಹಾಗೂ ಸಂಘದ ನೇತೃತ್ವದಲ್ಲಿ ಹೋರಾಟ ಮುಂದುರೆಯಲಿದೆ ಎಂದು ಹೇಳಿದರು.

ಸಮುದಾಯದ ಸರ್ವಾಂಗೀಣ ಏಳಿಗೆಗೆ ಬದ್ಧ: ಸಭಾ ಕಾರ್ಯಕ್ರಮದಲ್ಲಿ ಸಮು ದಾಯ ಹಾಗೂ ಸಂಘದ ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿ ಸಿದ ಬಿ.ಸುಬ್ರಹ್ಮಣ್ಯ ಬಳಿಕ ಮಾತನಾಡಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕುರುಬ ಸಮುದಾಯ ಎಸ್‍ಟಿಗೆ ಸೇರ್ಪಡೆ ಯಾಗಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ ಎಸ್‍ಟಿಗೆ ಸೇರ್ಪಡೆಗೊಳಿ ಸುವ ಹಿನ್ನೆಲೆಯಲ್ಲಿ ಕುಲಶಾಸ್ತ್ರೀಯ ಅಧ್ಯ ಯನಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಹೋರಾಟದಲ್ಲಿ ನಮ್ಮ ಬೆನ್ನಿಗೆ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.

ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿ ಗಳು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ, ಎ.ಹೆಚ್.ವಿಶ್ವನಾಥ್ ಎಲ್ಲರನ್ನೂ ಭೇಟಿಯಾಗಿ, ಒಗ್ಗೂಡಿಸಿ ಈ ಹೋರಾಟ ಮುಂದುವರೆಸುತ್ತೇನೆ. ಸಮುದಾಯದ ಸರ್ವಾಂಗೀಣ ಏಳಿಗೆಗೆ ನಾನು ಬದ್ಧ. ಜನಾಂ ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಸಮುದಾಯದಲ್ಲಿ ಅನೇಕ ಯುವ ಜನರು ಉನ್ನತ ಅಧಿಕಾರಿ ಗಳ ಸ್ಥಾನಕ್ಕೇರಲು ಪೆÇ್ರೀತ್ಸಾಹಿಸುವ ನಿಟ್ಟಿ ನಲ್ಲಿ ದುಡಿಯುತ್ತೇನೆ ಎಂದು ಹೇಳಿದರು.

ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ ಮಾತನಾಡಿ, ರಾಜ್ಯದಲ್ಲಿ ಕುರುಬ ಸಮುದಾಯ ಪ್ರಬಲ ಜನಾಂಗ. ಇಂತಹ ಜನಾಂಗ ಪ್ರತಿ ನಿಧಿಸುವ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸುಬ್ರಹ್ಮಣ್ಯ ಸಮಾಜದ ಏಳಿಗೆಗೆ ಶ್ರಮಿಸಲಿ ದ್ದಾರೆ. ಸುಬ್ರಹ್ಮಣ್ಯ ವಿದ್ಯಾರ್ಥಿದೆಸೆಯಿಂ ದಲೂ ಸಂಘಟನೆಯಲ್ಲಿ ಬಹಳ ಮುಂಚೂಣಿ ಯಲ್ಲಿದ್ದಾರೆ. ನನ್ನ ರಾಜಕೀಯ ಬೆಳವಣಿಗೆ ಯಲ್ಲಿ ಅವರ ಪಾತ್ರ ಪ್ರಧಾನವಾಗಿದೆ. ನನ್ನ ಎಲ್ಲಾ ಚುನಾ ವಣೆಯಲ್ಲಿ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್.ರಂಗರಾಜು ಮಾತನಾಡಿ, ಸುಬ್ರಹ್ಮಣ್ಯ ಯುವಕರಿಂದಲೂ ನಾಯಕತ್ವ ಗುಣ ಮೈಗೂಡಿಸಿಕೊಂಡು ಬಂದವರು. ಮಿತಭಾಷಿ, ನಿಷ್ಠೂರವಾದಿ, ಸದಾ ಕ್ರಿಯಾಶೀಲರು. ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಮೇಲೆ ತ್ತುವ ನಿಟ್ಟಿನಲ್ಲಿ ಅವರು ತೊಡಗಿಸಿಕೊಳ್ಳಲಿ ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕರಾದ ಜೆ.ಗೋಪಿ, ನಾಗರಾಜು, ಅಭಿಲಾಷ್, ಮಾದೇಗೌಡ, ಮಹ ದೇವು, ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ, ಸಮು ದಾಯದ ಮುಖಂಡರಾದ ಬ್ಯಾಂಕ್ ಪುಟ್ಟ ಸ್ವಾಮಿ, ರಾಜಣ್ಣ, ವಿ.ಸಿ.ಬಸವಣ್ಣ, ರೇವಣ್ಣ, ಆಲಹಳ್ಳಿ ಬಸವಣ್ಣ, ಆಲಹಳ್ಳಿ ನಂಜೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ, ಉದ್ಯಮಿ ಬಸವೇಗೌಡ, ಶ್ರೀನಿವಾಸ, ಪಾಲಿಕೆ ಸದಸ್ಯ ಗೋಪಿ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಸೇರಿದಂತೆ ವಿವಿಧ ತಾಲ್ಲೂಕಿನ ಕುರುಬ ಸಂಘದ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳು ಹಾಗೂ ಸಮು ದಾಯದವರು ಪಾಲ್ಗೊಂಡಿದ್ದರು.

 

\

Translate »