ನಾಳೆ ನೂತನ ಶಿಕ್ಷಣ ನೀತಿ-2020ರ   ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ 
ಮೈಸೂರು

ನಾಳೆ ನೂತನ ಶಿಕ್ಷಣ ನೀತಿ-2020ರ  ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ 

January 8, 2021

ಮೈಸೂರು,ಜ.7(ಪಿಎಂ)-ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್‍ಎಂಎಸ್‍ಎಸ್) ವತಿಯಿಂದ ಜ.9ರಂದು `ಕರ್ನಾಟಕದಲ್ಲಿ ನೂತನ ಶಿಕ್ಷಣ ನೀತಿ-2020ರ (ಎನ್‍ಇಪಿ) ಅನುಷ್ಠಾನ ; ಅವಕಾಶಗಳು ಮತ್ತು ಮುಂದಿನ ದಾರಿ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕೆಆರ್‍ಎಂ ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿ ಜಿ.ಸಿ.ರಾಜಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿವಿ, ಮುಕ್ತ ವಿವಿ, ಬೆಂಗಳೂರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೆಂದ್ರದ ಸಹಯೋಗದಲ್ಲಿ ಮೈಸೂರು ವಿವಿ ಮಾನಸಗಂಗೋತ್ರಿ ಆವರಣದ ವಿಜ್ಞಾನ ಭವನ ದಲ್ಲಿ ಅಂದು ಬೆಳಗ್ಗೆ 10ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಉಪಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ ವಿಚಾರ ಸಂಕಿರಣ ಉದ್ಘಾಟಿಸುವರು ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕೆಆರ್‍ಎಂಎಸ್‍ಎಸ್‍ನ ಅಧ್ಯಕ್ಷ ಡಾ.ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಎನ್‍ಇಪಿ-2020ರ ಕರಡು ಸಮಿತಿ ಹಾಗೂ ಯುಜಿಸಿ ಸದಸ್ಯ ಡಾ.ಎಂ.ಕೆ. ಶ್ರೀಧರ್ ಮುಖ್ಯ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಅಖಿಲ ಭಾರತ ರಾಷ್ಟ್ರೀಯ ಶಿಕ್ಷಕ ಸಂಘದ (ಎಬಿಆರ್‍ಎಸ್‍ಎಂ) ಕಾರ್ಯದರ್ಶಿ ಶಿವಾನಂದ ಸಿಂಧನಕೇರ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್, ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನ ಕಾರ್ಯ ನಿರ್ವಾ ಹಕ ಡಾ.ಗೋಪಾಲಕೃಷ್ಣ ಜೋಶಿ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮುಕ್ತ ವಿವಿ ಕುಲಸಚಿವ ಡಾ.ಲಿಂಗರಾಜ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಬಳಿಕ ಬೆಳಗ್ಗೆ 11.45ಕ್ಕೆ ಎನ್‍ಇಪಿ-2020ರ ಅನುಷ್ಠಾನ ಕುರಿತ ವಿಚಾರ ಗೋಷ್ಠಿ ನಡೆಯಲಿದ್ದು, `ಉನ್ನತ ಶಿಕ್ಷಣದ ಆಡಳಿತ ನಿಯಮಗಳು’ ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ಡಾ.ಗೋಪಾಲಕೃಷ್ಣ ಜೋಶಿ ಹಾಗೂ `ಉನ್ನತ ಶಿಕ್ಷಣದ ಪಠ್ಯಕ್ರಮ’ ಕುರಿತು ಬೆಂಗಳೂರು ರಾಮಯ್ಯ, ಸಾರ್ವಜನಿಕ ನೀತಿ ಕೇಂದ್ರದ ಉಪನಿರ್ದೇಶಕ ಡಾ.ಆರ್.ಚೇತನ್‍ಸಿಂಗ್ ವಿಷಯ ಮಂಡಿಸಲಿದ್ದಾರೆ. ಈ ಗೋಷ್ಠಿಯ ಅತಿಥಿಗಳಾಗಿ ಮೈಸೂರು ವಿವಿ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿ, ಕೆಆರ್‍ಎಂಎಸ್‍ಎಸ್‍ನ ಸಂಚಾಲಕ ಬಿ.ನಿರಂ ಜನಮೂರ್ತಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2.30ಕ್ಕೆ ತಾಂತ್ರಿಕ ಗೋಷ್ಠಿ ಹಾಗೂ ಸಂವಾದ ನಡೆಯಲಿದೆ. ಸಂಜೆ 4ಕ್ಕೆ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯ ಲಿದೆ ಎಂದು ತಿಳಿಸಿದರು. ಕೆಆರ್‍ಎಂಎಸ್‍ಎಸ್‍ನ ಮೈಸೂರು ವಿಭಾಗದ ಅಧ್ಯಕ್ಷ ಡಾ.ಕೆ.ವಿ.ಸುರೇಶ, ಕಾರ್ಯದರ್ಶಿ ಡಾ. ಕುಮಾರ್ ಬೆಳಲೆ, ವಿಚಾರ ಸಂಕಿರಣದ ಸಂಚಾಲಕ ಹಾಗೂ ಸಹಾಯಕ ಪ್ರಾಧ್ಯಾಪಕ ಪ್ರವೀಣ್‍ಕುಮಾರ್ ಮೆಳ್ಳಳ್ಳಿ, ಪ್ರಾಧ್ಯಾಪಕ ಡಾ.ಸಿದ್ದರಾಜು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

 

Translate »