ಮೈಸೂರು ಜಿಲ್ಲೆಯಲ್ಲಿ 22 ಮಂದಿಗೆ ಸೋಂಕು, 37 ಮಂದಿ ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 22 ಮಂದಿಗೆ ಸೋಂಕು, 37 ಮಂದಿ ಗುಣಮುಖ

January 7, 2021

ಮೈಸೂರು, ಜ.6(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಬುಧವಾರ 22 ಮಂದಿಗೆ ಸೋಂಕು ತಗುಲಿದೆ. 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 52,640ಕ್ಕೆ ಏರಿಕೆಯಾದರೆ, ಈವರೆಗೆ 51,305 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,017 ಮಂದಿ ಸಾವನ್ನಪ್ಪಿದ್ದಾರೆ. 318 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಇಂದು 784 ಮಂದಿಗೆ ಸೋಂಕು ತಗುಲಿದ್ದು, 1,238 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,24,137ಕ್ಕೆ ಏರಿಕೆಯಾಗಿದ್ದು, 9,02,817 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿ ಯಾಗದೆ ಇಂದು 6 ಮಂದಿ ಸಾವನ್ನಪ್ಪಿದ್ದು, ಈವರೆಗೆ 12,124 ಮಂದಿ ಮೃತಪಟ್ಟಿ ದ್ದಾರೆ. 9,177 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಬಾಗಲಕೋಟೆ 4, ಬಳ್ಳಾರಿ 10, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 437, ಬೀದರ್ 4, ಚಾಮರಾಜನಗರ 8, ಚಿಕ್ಕಬಳ್ಳಾಪುರ 30, ಚಿಕ್ಕಮಗಳೂರು 5, ಚಿತ್ರದುರ್ಗ 11, ದಕ್ಷಿಣಕನ್ನಡ 42, ದಾವಣಗೆರೆ 10, ಧಾರವಾಡ 14, ಗದಗ 2, ಹಾಸನ 24, ಕಲಬುರಗಿ 20, ಕೊಡಗು 12, ಕೋಲಾರ 24, ಕೊಪ್ಪಳ 1, ಮಂಡ್ಯ 13, ಮೈಸೂರು 22, ರಾಯಚೂರು 5, ರಾಮನಗರ 1, ಶಿವಮೊಗ್ಗ 4, ತುಮಕೂರು 11, ಉಡುಪಿ 10, ಉತ್ತರಕನ್ನಡ 9, ವಿಜಯಪುರ 7, ಯಾದಗಿರಿ 7 ಪ್ರಕರಣಗಳು ವರದಿಯಾಗಿವೆ.

Translate »