ಅಯೋಧ್ಯೆ ರಾಮಮಂದಿರ ನಿರ್ಮಾಣದ ಶ್ರೇಯ ಗುರುಗಳಿಗೆ ಸಲ್ಲಲಿ
ಮೈಸೂರು

ಅಯೋಧ್ಯೆ ರಾಮಮಂದಿರ ನಿರ್ಮಾಣದ ಶ್ರೇಯ ಗುರುಗಳಿಗೆ ಸಲ್ಲಲಿ

January 7, 2021

ಮೈಸೂರು, ಜ.6(ಎಂಕೆ)- ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಧರ್ಮದರ್ಶಿ ಗಳಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ಹೋಟೆಲ್ ಮಾಲೀಕರ ಧರ್ಮದತ್ತಿ ವತಿಯಿಂದ ಭಕ್ತಿಯಿಂದ ಸ್ವಾಗತಿಸಿ, ಅಭಿನಂದಿಸಲಾಯಿತು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿಗೆ ಬುಧವಾರ ಆಗಮಿ ಸಿದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ಬಳಿಕ ದಕ್ಷಿಣ ಭಾರತದಿಂದ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟಿಯಾಗಿರುವ ಶ್ರೀ ಗಳನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ನಂತರ ಆರ್ಶಿವಚನ ನೀಡಿದ ಶ್ರೀಗಳು, ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಕಟ್ಟಬೇಕು ಎಂಬುದಕ್ಕೆ ಗುರುಗಳು(ಶ್ರೀವಿಶ್ವೇಶತೀರ್ಥ ಸ್ವಾಮೀಜಿ) ಸಾಕಷ್ಟು ಶ್ರಮಿಸಿದ್ದರು. ಇಂದು ನನಗೆ ಮಾಡುತ್ತಿರುವ ಅಭಿನಂದನೆ ಗುರುಗಳಿಗೆ ಸಲ್ಲಬೇಕು. ಅವರ ಪರವಾಗಿ ನಾನಿದ್ದೇನೆ ಅಷ್ಟೆ ಎಂದರು.

ಮಹರ್ಷಿ ವಾಲ್ಮೀಕಿ ರಾಮಾಯಣ ಇಬ್ಬರು ಮಹಾನ್ ಆದರ್ಶ ಪುರುಷರನ್ನು ಪರಿಚಯಿಸಿದೆ. ಶ್ರೀರಾಮ ಮತ್ತು ರಾವಣ ರಾಮಾಯಣದ ಆದರ್ಶ ಪುರುಷರು. ರಾಮ ಎಂಬ ಶಬ್ದಕ್ಕೆ ‘ಎಲ್ಲರನ್ನು ಸಂತೋಷ ಪಡಿಸುವವನು’ ಎಂಬ ಅರ್ಥವಿದ್ದರೆ, ರಾವಣ ಶಬ್ದಕ್ಕೆ ‘ಎಲ್ಲರನ್ನೂ ಅಳುವಂತೆ ಮಾಡುವವನು’ ಎಂಬ ಅರ್ಥವಿದೆ. `ಸಮಾಜದಲ್ಲಿ ಹೇಗಿರಬೇಕು’ ಎಂಬುದಕ್ಕೆ ರಾಮ ಆದರ್ಶವಾದರೆ, `ಹೇಗಿರಬಾರದು’ ಎಂಬುದಕ್ಕೆ ರಾವಣ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಜ.15ರಿಂದ 45 ದಿನಗಳ ಕಾಲ ವಿಶೇಷ ಅಭಿಯಾನ ನಡೆಯಲಿದೆ. ದೇವಾಲಯ ನಿರ್ಮಾ ಣಕ್ಕೆ 500 ಕೋಟಿ ರೂ. ಹಾಗೂ ದೇವಾಲಯ ಸುತ್ತಲ ಪರಿಸರ ಅಭಿವೃದ್ಧಿಗೆ 1000 ಕೋಟಿ ರೂ. ಖರ್ಚಾಗ ಲಿದೆ ಎಂದು ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲರೂ ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ತೊಡಗಿಸಿಕೊಳ್ಳ ಬೇಕು. 10 ರೂ. ನೀಡಿದರೂ ಸಂತೋಷದಿಂದ ಸ್ವೀಕರಿಸಿ ಮಂಗಳ ಕಾರ್ಯ ನೆರವೇರಿಸಲಾಗುವುದು ಎಂದರು.

ಪೇಜಾವರ ಮಠದಿಂದ ನೂರಾರು ಗೋವುಗಳನ್ನು ಪೋಷಣೆ ಮಾಡಲಾಗುತ್ತಿದೆ. ತಿಂಗಳಿಗೆ 21 ಲಕ್ಷ ರೂ. ವೆಚ್ಚವಾಗುತ್ತದೆ. ಈ ಕಾರ್ಯ 16 ವರ್ಷದಿಂದ ನಿರಂತರ ನಡೆದುಕೊಂಡು ಬರುತ್ತಿರುವುದಕ್ಕೆ ಸಮಾ ಜದ ಎಲ್ಲರೂ ನೀಡುತ್ತಿರುವ ಸಹಕಾರವೇ ಕಾರಣ. ಹೋಟೆಲ್ ಮಾಲೀಕರು ತಮ್ಮ ಹೋಟೆಲ್‍ಗಳಲ್ಲಿ ‘ಗೋ ಸಂರಕ್ಷಣೆಗಾಗಿ ಹುಂಡಿ’ಗಳನ್ನು ಇಟ್ಟರೆ ಊಟ ಮಾಡಲು ಬಂದವರು ಕಾಣಿಕೆ ನೀಡುವುದರಿಂದ ಗೋ ಸಂರಕ್ಷಣೆಗೆ ಅವರೂ ಕೈಜೋಡಿಸಿದಂತೆ ಆಗುತ್ತದೆ ಎಂದು ಮಾರ್ಗದರ್ಶನ ಮಾಡಿದರು.

ಹಾಲು ಕೊಡುವ ಹಸುಗಳನ್ನು ಎಲ್ಲರೂ ಸಾಕು ತ್ತಾರೆ. ಹಾಲು ಕೊಡದ ಮತ್ತು ವಯಸ್ಸಾದ ಗೋವುಗಳನ್ನು ಸಾಕುವವರಾರು? ಅದಕ್ಕಾಗಿ ಮನೆ ಗೊಂದರಂತೆ ಗೋವುಗಳನ್ನು ದತ್ತು ಪಡೆದರೆ ಸಾಕು ಯಾವ ಗೋವೂ ಕಸಾಯಿಖಾನೆಗೆ ಹೋಗುವುದಿಲ್ಲ ಎಂದು ಹೇಳಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಹೋಟೆಲ್ ಮಾಲೀಕರ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ, ಸುಬ್ರಮಣ್ಯತಂತ್ರಿ ಮತ್ತಿತರರಿದ್ದರು.

Translate »