ಮಹಾಜನ ಪ್ರಥಮ ದರ್ಜೆ ಕಾಲೇಜಲ್ಲಿ ಮೊದಲ ಪದವಿ ಪ್ರದಾನ ಸಮಾರಂಭ
ಮೈಸೂರು

ಮಹಾಜನ ಪ್ರಥಮ ದರ್ಜೆ ಕಾಲೇಜಲ್ಲಿ ಮೊದಲ ಪದವಿ ಪ್ರದಾನ ಸಮಾರಂಭ

June 6, 2022

ಮೈಸೂರು, ಜೂ.೫- ಮೈಸೂರಿನ ಎಸ್‌ಬಿ ಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ಕಾಲೇಜಿನ ಡಾ. ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮೊದಲ ಪದವಿ ಪ್ರದಾನ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಪೂಜಾ ಭಾಗವತ್ ಸ್ಮಾರಕ ಮಹಾ ಜನ ಸ್ನಾತಕೋತ್ತರ ಕೇಂದ್ರದ ವಿವಿಧ ವಿಷಯಗಳಲ್ಲಿ ಒಟ್ಟು ೨೭೪ ವಿದ್ಯಾರ್ಥಿಗಳು ಪದವಿ ಪಡೆದರು. ಇವರಲ್ಲಿ ೪೦ ವಿದ್ಯಾರ್ಥಿಗಳು ಉನ್ನತ ಶ್ರೇಣ ಯಲ್ಲಿ, ೨೩೨ ವಿದ್ಯಾರ್ಥಿ ಗಳು ಪ್ರಥಮ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿ ಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪದವಿ ಪ್ರದಾನ ಭಾಷಣ ಮಾಡಿದ ಆಂಧ್ರಪ್ರದೇಶ ಗುಂಟೂರಿನಲ್ಲಿರುವ ವಿಜ್ಞಾನ ಫೌಂಡೇಶನ್ ಫಾರ್ ಸೈನ್ಸ್, ಟೆಕ್ನಾಲಜಿ ಅಂಡ್ ರಿಸರ್ಚ್ (ಡೀಮ್ಡ್) ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಪಿ.ನಾಗಭೂಷಣ್ ಉನ್ನತ ಶ್ರೇಣ ಹಾಗೂ ಪದವಿ ಪಡೆದ ೧೦ ವಿದ್ಯಾರ್ಥಿ ಗಳಿಗೆ ಪೂಜಾ ಭಾಗವತ್ ಸ್ಮಾರಕ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಸಿ.ಕೆ.ರೇಣುಕಾರ್ಯ ದತ್ತಿ ಪದಕ ಹಾಗೂ ೫,೦೦೦ ರೂ.ಗಳ ನಗದು ಬಹುಮಾನ ಮತ್ತು ರಾಮಣ್ಣ ವಿ. (ದಿ. ಶ್ರೀ ಸುಕೃತ್ ಅವರ ಹೆಸರಿನಲ್ಲಿ) ಇಬ್ಬರು ವಿದ್ಯಾರ್ಥಿಗಳಿಗೆ ೧,೦೦೦ ರೂ.ಗಳ ನಗದು ಬಹಮಾನ ನೀಡಿ, ಗೌರವಿಸಿದರು.

ನಂತರ ಮಾತನಾಡಿದ ಅವರು, ಇಂದಿನ ತಾಂತ್ರಿಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾವು ಯಂತ್ರೋಪಕರಣಗಳಿಗೆ ತಲೆ ಬಾಗುತ್ತಿದ್ದೇವೆ. ಇದು ನಮ್ಮನ್ನು ಸೃಜನಶೀಲ ವ್ಯಕ್ತಿತ್ವ, ಆಲೋಜಿಸುವ ಗುಣ ಗಳನ್ನು ಕುಂಠಿತಗೊಳಿಸುತ್ತಿದೆ. ವಿದ್ಯಾರ್ಥಿಗಳು ಮಹತ್ತರವಾದ ಮಹತ್ವಾಕಾಂಕ್ಷೆಗಳನ್ನು ಉಳ್ಳವರಾಗ ಬೇಕು. ಪ್ರತಿಯೊಬ್ಬರೂ ಪರಿಶ್ರಮದಿಂದ ಯಶಸ್ಸನ್ನು ಕಾಣಬೇಕೇ ಹೊರತು, ಕೇವಲ ಮಹತ್ವಾಕಾಂಕ್ಷೆಯಿAದಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‌ಕುಮಾರ್ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಂಸ್ಥೆ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಹೆಚ್ಚಿನ ಅಂಕ ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಒಟ್ಟು ಕೋರ್ಸ್ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ವಿಶೇಷಚೇತನ, ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಮತ್ತು ಸೇನೆಯಿಂದ ನಿವೃತ್ತಿ ಹೊಂದಿರುವವರ ಮಕ್ಕಳಿಗೆ ಕೋರ್ಸ್ ಶುಲ್ಕದಲ್ಲಿ ಶೇ.೨೫ ವಿನಾಯಿತಿ. ಕ್ರೀಡೆ ಮತ್ತು ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಕೋರ್ಸ್ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದರು.

ಸAಸ್ಥೆ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯ ಲಕ್ಷಿö್ಮÃ ಮುರಳೀಧರ್, ಕಾಲೇಜಿನ ಪರೀಕ್ಷಾ ನಿಯಂ ತ್ರಣಾಧಿಕಾರಿ ಆರ್.ಮಂಜುನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರಮೇಶ್ ಹಾಗೂ ಸಂಸ್ಥೆ ಆಡಳಿತಾಧಿಕಾರಿ ಪ್ರೊ. ಪಿ.ಸರೋಜಮ್ಮ, ಖಜಾಂಚಿ ಎನ್.ವಿಜಯಕುಮಾರ್ ಹಾಗೂ ಅಡ್ವೆöÊಸರಿ ಕಮಿಟಿ ಮತ್ತು ಆಡಳಿತ ಮಂಡಳಿ ಸದಸ್ಯರು ಮತ್ತು ಶ್ರೀಮತಿ ಲಕ್ಷಿö್ಮÃಭೂಷಣ್ ಉಪಸ್ಥಿತರಿದ್ದರು. ಕಾಲೇಜಿನ ಶೈಕ್ಷ ಣ ಕ ಡೀನ್ ಡಾ. ಶ್ರೀಧರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ಅತಿಥಿಗಳನ್ನು ಪೂರ್ಣ ಕುಂಭದೊAದಿಗೆ ಸ್ವಾಗತಿಸಲಾಯಿತು. ಕು. ಅನನ್ಯ ಭುವನ್ ಮತ್ತು ತಂಡ ನಾಡಗೀತೆ ಹಾಡಿದರು. ಪೂಜಾ ಭಾಗವತ್ ಸ್ಮಾರಕ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಸ್ವಾಗತಿಸಿ ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಆರ್. ಜಯ ಕುಮಾರಿ ವಂದಿಸಿದರು. ಅಧ್ಯಾಪಕರಾದ ಶ್ರೀಮತಿ ಗೀತಾ, ಸುನೀಲ್ ಮತ್ತು ಶ್ರೀಮತಿ ರಚನಾ ಕಾರ್ಯ ಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಅಧ್ಯಾಪ ಕರು, ಅಧ್ಯಾಪಕೇತರರು, ಪೋಷಕರು, ವಿದ್ಯಾರ್ಥಿ ಗಳು, ಎನ್‌ಎಸ್‌ಎಸ್, ಎನ್‌ಸಿಸಿ ಕೆಡೆಟ್‌ಗಳು, ಕಾಲೇಜಿನ ಸ್ವಯಂಸೇವಕ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಶೇಷ ಆಹ್ವಾನಿತರು ಹಾಜರಿದ್ದರು.

 

Translate »