ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ದಂಪತಿಗೆ ಸನ್ಮಾನ
ಮೈಸೂರು

ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ದಂಪತಿಗೆ ಸನ್ಮಾನ

June 6, 2022

ಮೈಸೂರು, ಜೂ.೫(ಆರ್‌ಕೆಬಿ)- ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ `ಬ್ರಾಹ್ಮಣ ದಂಪತಿಗೆ ಗೌರವ- ಅಭಿನಂದನೆ’ ಕಾರ್ಯಕ್ರಮದಲ್ಲಿ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ಮಹಾರಾಣ ಕಾಲೇಜು ಕಂಪ್ಯೂಟರ್ ಉಪನ್ಯಾಸಕಿ ಟಿ.ಎಸ್.ಕುಸುಮಾ ಅವರನ್ನು ಸನ್ಮಾನಿಸಲಾಯಿತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಅವರು ಸುಬ್ರಹ್ಮಣ್ಯ ದಂಪತಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ವಲಯ ಅಧ್ಯಕ್ಷ ನಟರಾಜ್ ಜೋಯಿಸ್, ಹಿರಿಯ ಸಲಹೆಗಾರ ಹಿರಿಯಣ್ಣ ಸ್ವಾಮಿ, ಧರ್ಮಪ್ರವರ್ತಕ ಡಾ.ಭಾನುಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

Translate »