ಗಿಡ-ಮರ ಕಾಪಾಡುವುದರೊಂದಿಗೆ ಪರಿಸರ ಸಂರಕ್ಷಿಸಿ
ಮೈಸೂರು

ಗಿಡ-ಮರ ಕಾಪಾಡುವುದರೊಂದಿಗೆ ಪರಿಸರ ಸಂರಕ್ಷಿಸಿ

June 6, 2022

ಮೈಸೂರು, ಜೂ. ೫(ಎಂಟಿವೈ)- ಜನರು ತಮ್ಮ ಮನೆ ಬಳಿ ಹಾಗೂ ಸುತ್ತಮುತ್ತಲಿ ರುವ ಬಡಾವಣೆಗಳಲ್ಲಿರುವ ಗಿಡ-ಮರ ರಕ್ಷಣೆಯ ಜವಾಬ್ದಾರಿ ಹೊರುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದು ರಾಜವಂಶಸ್ಥ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದ್ದಾರೆ.

ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಬೆಂಗಳೂರಿನ ವೃಕ್ಷ ಫೌಂಡೇಷನ್ ಆಯೋ ಜಿಸಿದ್ದ `ಮರಗಳ ಗಣತಿ’ ಕುರಿತ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ವಿಚಾರ ಯಾರೋ ಒಬ್ಬರಿಗೆ ಸೀಮಿತವಾದುದ್ದಲ್ಲ. ಎಲ್ಲರ ಮೇಲೂ ಪರಿಸರ ಸಂರಕ್ಷಣೆಯ ಜವಾಬ್ದಾರಿ ಇದೆ ಎಂದರು.

ಇಂದಿನ ಪ್ರಜೆಗಳು ಪ್ರಭುಗಳೆನ್ನುತ್ತಾರೆ. ಇದರಿಂದಾಗಿ ಪ್ರತಿಯೊಬ್ಬರೂ ತಮ್ಮ ಮನೆ ಬಳಿ ಹಾಗೂ ಸುತ್ತಮುತ್ತಲಿನ ಬಡಾವಣೆ ಯಲ್ಲಿರುವ ಗಿಡ-ಮರಗಳ ಜವಾಬ್ದಾರಿ ವಹಿಸಿಕೊಳ್ಳಬೇಕು. ಅವುಗಳ ರಕ್ಷಣೆಗೆ ಸ್ಥಳೀಯರೇ ಕಂಕಣಬದ್ಧರಾಗಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನಾವು ನಮ್ಮ ಸುತ್ತಲಿನ ಮರಗಿಡಗಳ ಬಗ್ಗೆ ತಿಳಿದು ಕೊಳ್ಳುವುದರೊಂದಿಗೆ ಬೇರೆಯವರಿಗೆ ಅರಿವು ಮೂಡಿಸÀಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಮೇಲೆ ದೌರ್ಜನ್ಯದಿಂದಾಗಿ ಹವಾಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ಅಕಾಲಿಕ ಮಳೆ ಹೆಚ್ಚಾಗುತ್ತಿದೆ. ಪ್ರತಿಕೂಲ ವಾತಾವರಣ ದಿಂದ ಮಳೆಗಾಲವಲ್ಲದಿದ್ದರೂ ಮಳೆ ಬೀಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಾವಿನ ಹೂವು ಕಚ್ಚುವ ಸಮಯದಲ್ಲಿ ಮಳೆ ಬಂದಿರಲೇ ಇಲ್ಲ. ಹೂವು ಕಚ್ಚಿದ ಕೆಲವೇ ಸಮಯದಲ್ಲಿ ಮಳೆ ಬಂದರೆ ಅವುಗಳು ಉದುರುವುದರಿಂದ ಫಸಲು ಕ್ಷೀಣ ಸುತ್ತದೆ. ಇದಕ್ಕೆ ಪರಿಸರ ಮಾಲಿ ನ್ಯವೇ ಕಾರಣ. ಅದನ್ನು ತಡೆಗಟ್ಟಬೇಕಾ ದರೆ ಪರಿಸರ ಸಂರಕ್ಷಣೆ ಅಗತ್ಯ. ಜನರು ಈಗ ಸಣ್ಣದಾಗಿ ಯೋಚನೆ ಮಾಡಿದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣ ದಲ್ಲಿ ಪ್ರಯೋಜನವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಾನು ಮೊದಲಿಂ ದಲೂ ಪರಿಸರದ ಮೇಲೆ ಕಾಳಜಿಯಿಟ್ಟು ಕೊಂಡಿದ್ದೇನೆ. ಅದರಲ್ಲೂ ರಾಜಮನೆದ ಜಬಾಬ್ದಾರಿ ಪಡೆದ ದಿನದಿಂದಲೂ ಎಲ್ಲೆಡೆ ಪರಿಸರ ಸಂರಕ್ಷಿಸುವAತೆ ಮೈಸೂರು ರಾಜಮನೆತನದ ಪರವಾಗಿ ಸಂದೇಶ ನೀಡುತ್ತಾ ಬಂದಿದ್ದೇನೆ. ರಾಜರ ಆಳ್ವಿಕೆ ಕಾಲ ದಲ್ಲಿ ಪ್ರತಿಯೊಂದು ರಸ್ತೆಗಳ ಎರಡೂ ಬದಿಯಲ್ಲೂ ಗಿಡ-ಮರ ಬೆಳೆಸಿದ್ದನ್ನು ಈ ಹಿಂದೆ ನೋಡಬಹುದಾಗಿತ್ತು. ರಸ್ತೆಯಲ್ಲಿ ಸಂಚರಿಸುವ ಜನರಿಗೆ ನೆರಳು ಬೀಳುವುದು ಅದರ ಉದ್ದೇಶವಾಗಿತ್ತು. ಮೈಸೂರು-ಬೆಂಗಳೂರು ಮುಖ್ಯರಸ್ತೆಯುದ್ದಕ್ಕೂ ಮರ ಗಳಿತ್ತು. ಆದರೆ ಈಗ ರಸ್ತೆ ಅಭಿವೃದ್ಧಿಗಾಗಿ ಮರ ಕಡಿಯಲಾಗಿದೆ ಎಂದು ವಿಷಾದಿಸಿದರು.

ಮೈಸೂರು ಸಂಸ್ಥಾನದ ಮೂಲಕ ಅತ್ಯು ತ್ತಮ ಕೊಡುಗೆ ನೀಡಿದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಜನ್ಮ ದಿನವನ್ನು ನಿನ್ನೆ ಆಚರಿಸಲಾಯಿತು. ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ಅವರ ಜನ್ಮದಿನ. ಮೀಸಲಾತಿ ವ್ಯವಸ್ಥೆ ಯನ್ನು ಜಾರಿಗೆ ತಂದ ಕಂಠೀರವ ನರಸಿಂಹ ರಾಜ ಒಡೆಯರ್ ಅವರನ್ನು ಸ್ಮರಿಸಬೇಕು ಎಂದರು. ಈ ವೇಳೆ ಗಣತಿಗೆ ನೆರವಾದ ಸ್ವಯಂಸೇವಕರಿಗೆ ಗಿಡ ನೀಡಲಾಯಿತು. ವೃಕ್ಷ ಫೌಂಡೇಷನ್‌ನ ಅಧ್ಯಕ್ಷ ವಿಜಯ್ ನಿಶಾಂತ್, ರವಿಕುಮಾರ್, ಷರೀಫ್, ನವೀನ್, ತೇಜಸ್ವಿ, ಭಾಗ್ಯಲಕ್ಷಿö್ಮ, ಮನೋಹರ್ ಇದ್ದರು.

Translate »