ಅರಮನೆ ಆವರಣದಲ್ಲಿ ಮೊದಲ ಹಂತದ ಯೋಗ ಪೂರ್ವಾಭ್ಯಾಸ
ಮೈಸೂರು

ಅರಮನೆ ಆವರಣದಲ್ಲಿ ಮೊದಲ ಹಂತದ ಯೋಗ ಪೂರ್ವಾಭ್ಯಾಸ

June 6, 2022

ಮೈಸೂರು, ಜೂ.೫(ಆರ್‌ಕೆಬಿ)- ಅಂತಾರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಜೂ.೨೧ರಂದು ಮೈಸೂರಿನಲ್ಲಿ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿ ರುವ ಯೋಗ ದಿನೋತ್ಸವಕ್ಕೆ ಇನ್ನೂ ೨ ವಾರ ಬಾಕಿ ಇದ್ದು, ಪ್ರೋಟೋಕಾಲ್ ಆಧಾರಿತ ಮೊದಲ ಯೋಗ ಪೂರ್ವಾ ಭ್ಯಾಸ ಭಾನುವಾರ ಮೈಸೂರಿನ ಅರಮನೆ ಆವರಣದಲ್ಲಿ ನಡೆಯಿತು.

ಅರಮನೆಯ ಸುಂದರ ವಿಹಂಗಮ ನೋಟದ ಹಿನ್ನೆಲೆಯಲ್ಲಿ ೧೦,೦೦೦ಕ್ಕೂ ಹೆಚ್ಚು ಉತ್ಸಾಹಿ ಯೋಗಪಟುಗಳು ಭಾಗವಹಿಸಿ ಯೋಗ ಪ್ರದರ್ಶಿಸಿದರು. ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ ಮೊದಲ ಹಂತದ ಯೋಗ ಪೂರ್ವಾಭ್ಯಾಸಕ್ಕೆ ಚಾಲನೆ ನೀಡಿದರು. ಬಳಿಕ ಅವರು ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿಯೂ ಗಿಡಗಳಿಗೆ ನೀರೆರೆದರು. ಅರಮನೆ ಆವರಣದ ಎಲ್ಲಾ ಜಾಗಗಳಲ್ಲೂ ಸಾವಿರಾರು ಯೋಗಪಟುಗಳು ಸಮವಸ್ತçದೊಂದಿಗೆ ಭಾಗವಹಿಸಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೂಡ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಒಟ್ಟು ೯೦ ನಿಮಿಷಗಳ ಪೂರ್ವಾಭ್ಯಾಸವು ಪ್ರಾರ್ಥನೆ, ಚಲನ ಕ್ರಿಯೆ, ಸಮಸ್ಥಿತಿ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಭದ್ರಾಸನ, ವಜ್ರಾಸನ, ಮಕರಾಸನ, ಅರ್ಧ ಹಲಾಸನ, ಶವಾಸನ ಇತ್ಯಾದಿ ಆಸನಗಳನ್ನು ಒಳಗೊಂಡಿತ್ತು, ಕಪಾಲಭಾತಿ, ಪ್ರಾಣಾಯಾಮ, ಧ್ಯಾನ, ಸಂಕಲ್ಪ ಮತ್ತು ಶಾಂತಿ ಮಂತ್ರದೊAದಿಗೆ ಮುಕ್ತಾಯಗೊಂಡಿತು.

ಈಗಾಗಲೇ ಮೇ ೨೨ರಂದು ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಮೊದಲ ಯೋಗ ತಾಲೀಮು ನಡೆದು, ಬಳಿಕ ಮೇ ೨೯ರಂದು ಸುತ್ತೂರು ಶಾಖಾ ಮಠದಲ್ಲಿ ೨ನೇ ತಾಲೀಮು ನಡೆದಿತ್ತು. ಮೈಸೂರು ಜಿಲ್ಲಾ ಸಚಿವ ಎಸ್.ಟಿ. ಸೋಮಮಶೇಖರ್, ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರ ಹ್ಮಣ್ಯ, ಯೋಗನರಸಿಂಹಸ್ವಾಮಿ ದೇವಸ್ಥಾನದ ಶ್ರೀನಿವಾಸ್ ಗುರೂಜಿ, ಯೋಗಾಚಾರ್ಯ ಡಾ.ಸತ್ಯನಾರಾಯಣ ಜೋಯಿಸ್ ದಂಪತಿ, ಯೋಗ ಫೆಡರೇಶನ್ ಆಫ್ ಮೈಸೂರು ಅಧ್ಯಕ್ಷ ಹಾಗೂ ಜಿಎಸ್‌ಎಸ್ ಪ್ರತಿಷ್ಠಾನದ ಮುಖ್ಯಸ್ಥ ಡಿ.ಶ್ರೀಹರಿ, ಉಪಾಧ್ಯಕ್ಷ ಡಾ.ಸತ್ಯನಾರಾ ಯಣ, ಖಜಾಂಚಿ ಬಿ.ಪಿ.ಮೂರ್ತಿ, ಕಾರ್ಯದರ್ಶಿ ಡಾ.ಪಿ.ಎನ್.ಗಣೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಎಸ್.ಶಶಿಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »