ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ 27-85 ಅಗಲೀಕರಣಕ್ಕೆ ಮೊದಲ ಹೆಜ್ಜೆ
ಹಾಸನ

ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ 27-85 ಅಗಲೀಕರಣಕ್ಕೆ ಮೊದಲ ಹೆಜ್ಜೆ

June 13, 2019

* 3 ತಾಲೂಕುಗಳಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾದ ಲೋಕೋಪಯೋಗಿ ಇಲಾಖೆ
* ಅರಕಲಗೂಡು, ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ
ಹಾಸನ: ಜಿಲ್ಲೆಯ ವ್ಯಾಪ್ತಿಯ ರಾಜ್ಯ ಹೆದ್ದಾರಿ 27 ಮತ್ತು 85ರಲ್ಲಿ ರಸ್ತೆ ಅಗಲೀಕರಣದ ದಶಕಗಳ ಹಿಂದಿನ ಯೋಜನೆ ಕೊನೆಗೂ ಕಾರ್ಯರೂಪ ಕ್ಕಿಳಿಯುವ ಸೂಚನೆ ಹೊರಬಿದ್ದಿದೆ.

ಎರಡೂ ರಾಜ್ಯ ಹೆದ್ದಾರಿಗಳನ್ನು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ 111 ಕಿ.ಮೀ.ಗಳಷ್ಟು ದೂರ ಅಭಿವೃದ್ಧಿಪಡಿಸಲಿರುವ ರಾಜ್ಯ ಲೋಕೋಪಯೋಗಿ ಇಲಾಖೆಯು ಅರಕಲಗೂಡು, ಬೇಲೂರು ಮತ್ತು ಸಕಲೇಶಪುರ ತಾಲೂಕಿನ ವಿವಿಧೆಡೆ ಭೂಸ್ವಾಧೀನಕ್ಕೆ ಮುಂದಾಗಿದೆ. ಈ ಸಂಬಂಧ ಎರಡೂ ಮಾರ್ಗಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಸ್ಟೇಟ್ ಹೈವೇ ಆಕ್ಟ್-1964ರಡಿ ಬುಧವಾರ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು- ಜಾಲ್ಸೂರು ಮಾರ್ಗದ ರಾಜ್ಯ ಹೆದ್ದಾರಿ (ಎಸ್‍ಹೆಚ್-87), ವಿರಾಜ ಪೇಟೆ-ಬೈಂದೂರು ಮಾರ್ಗದ ರಾಜ್ಯ ಹೆದ್ದಾರಿಯನ್ನು (ಎಸ್‍ಹೆಚ್ 27) ಜಿಲ್ಲೆ ಯಲ್ಲೂ ಅಭಿವೃದ್ಧಿಪಡಿಸಬೇಕಿದ್ದು, ಲೋಕೋ ಪಯೋಗಿ ಇಲಾಖೆಯ ಹಾಸನ ವಿಭಾಗ ಕಾರ್ಯೋನ್ಮುಖವಾಗಲಿದೆ.

ಬೆಂಗಳೂರು-ಜಾಲ್ಸೂರು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ (ಎಸ್‍ಹೆಚ್-87) 194ನೇ ಕಿ.ಮೀ.ನಿಂದ 226 ಕಿ.ಮೀ. ನಡುವೆ ಬರುವ (32 ಕಿ.ಮೀ. ದೂರ) ಅರಕಲಗೂಡು ತಾಲೂಕಿನ ದೊರಂ ಬಳ್ಳಿ, ಕೇರಳಾಪುರ, ಹೊನ್ನೇನಹಳ್ಳಿ, ಕಾಳೇನಹಳ್ಳಿ, ಕಾನನಕೊಪ್ಪಲು, ಬಸವಾ ಪಟ್ಟಣ, ಬಸವಾಪಟ್ಟಣ ಹಂತ, ಮೂಲೆ ಹೊಸಹಳ್ಳಿ, ಗರುಡನ ಹಳ್ಳಿ, ಸಿರದನಹಳ್ಳಿ, ರಾಮನಾಥಪುರ, ರಘುಪತಿಕೊಪ್ಪಲು, ಕೊತವಾಳು, ಕಾಡಲೂರು, ವಡವನ ಹೊಸಳ್ಳಿ, ಕೊಣನೂರು, ಉಲ್ಲೇನಹಳ್ಳಿ, ಸರಗೂರು, ಸಿದ್ದಾಪುರ, ಬೀರನಹಳ್ಳಿ ಕಾವಲು, ಕುರುಬರ ಅಬ್ಬೂರು, ಬಣ್ಣೂರು, ಹೊಡೆನೂರು, ಬೆಟ್ಟಗಳಲೆ ಹಾಗೂ 254ನೇ ಕಿ.ಮೀ.ನಿಂದ 293ನೇ ಕಿ.ಮೀ. ನಡುವೆ ಬರುವ (39 ಕಿ.ಮೀ) ಸಕಲೇಶ ಪುರ ತಾಲೂಕಿನ ಓಡಳ್ಳಿ, ತಂಬಲಗೆರೆ, ಗೊದ್ದು, ಕೊಂಗನಹಳ್ಳಿ, ಬ್ಯಾಗಡಹಳ್ಳಿ, ವಣಗೂರು, ಮಂಕನಹಳ್ಳಿ, ಅರಣಿ ಫಾರೆಸ್ಟ್, ಅರಣಿಯಲ್ಲಿ ಭೂ ಸ್ವಾಧೀನ ಸಂಬಂಧ ಮೊದಲ ಹಂತದ ಪ್ರಕ್ರಿಯೆ ಆರಂಭಿಸಿದೆ.

ಇದೇ ವೇಳೆ, ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಯಲ್ಲಿ(ಎಸ್‍ಹೆಚ್ 27) 106ನೇ ಕಿ.ಮೀ.ನಿಂದ 146 ಕಿ.ಮೀ. ನಡುವೆ ಬರುವ (40 ಕಿ.ಮೀ.) ಸಕಲೇಶಪುರ ತಾಲೂಕಿನ ಕೆರೋಡಿ, ಮಗಲು, ಕುಂಬಾರ ಹಳ್ಳಿ, ಹೆನ್ನಲಿ, ನಿಡಿಗೆರೆ, ಈಚಲ ಪುರ, ಬೆಳ್ಳೂರು, ಯಡವರಹಳ್ಳಿ, ಕುರುಬತ್ತೂರು, ಕಾಮೇನಹಳ್ಳಿ, ಹರಗನಹಳ್ಳಿ, ಅರೆಕೆರೆ, ಹಲ್ಲಹಳ್ಳಿ, ಕ್ಯಾನಹಳ್ಳಿ, ಹುಲ್ಲಹಳ್ಳಿ ಎಸ್ಟೇಟ್, ಕೆಸಗನಹಳ್ಳಿ, ದೋನಹಳ್ಳಿ, ದೇವಿಹಳ್ಳಿ, ಕಲ್ಲಗುಣಿ, ಹಳ್ಳಬೈಲು, ಸಕಲೇಶಪುರ, ಮಳಲಿ, ಬಸವನಹಳ್ಳಿ, ಅಚಂಗಿ, ಜನ್ನಾಪುರ, ಮಾಗಡಿ, ಬೈಕೆರೆ, ಕಡಬನಹಳ್ಳಿ, ಕೆಲಗಳಲೆ ಹಾಗೂ ಬೇಲೂರು ತಾಲೂಕಿನ ಬೈದಾನೆ, ಉದಯ ವಾರ, ವಾಟೆಹೊಳೆ, ಬಾಲಗುಳಿ, ಕಸಬ ಅರೇಹಳ್ಳಿ, ಗುರ್ಗಿಹಳ್ಳಿ, ಮಲ್ಸವರ, ಮಡೇನ ಹಳ್ಳಿ, ಶಿರಗೂರು, ಕುಂಬರಹಳ್ಳಿ, ಚೀಕನ ಹಳ್ಳಿ, ಹುನುಗನ ಹಳ್ಳಿ, ಮಾಲೂರು, ತಲಗೋಡು ಗ್ರಾಮಗಳ ಸರ್ವೆ ನಂಬರ್ ಗಳಿಗೆ ಸಂಬಂಧಿಸಿ ಭೂಸ್ವಾಧೀನ ಸೂಚನೆ ಯನ್ನು ಇಲಾಖೆ ಹೊರಡಿಸಿದೆ.

Translate »