ಮಡಿಕೇರಿ,ಅ.11-ಕೊಡಗು ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿಯ ಕೊಲೆ ಪ್ರಕರಣದ ಆರೋಪಿ ಸಂಪಾಜೆಯ ಸಂಪತ್‍ಕುಮಾರ್(35) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕೊಲೆಯಾದ ಸಂಪತ್ ಕುಮಾರ್ ಆಪ್ತರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಬಾಲಚಂದ್ರ ಕಳಗಿ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಂಪತ್ ಕುಮಾರ್‍ನನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿತ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಮೊದಲ ಆರೋಪಿ ಸಂಪಾಜೆ ಗ್ರಾಮದ ಕಲ್ಲುಗುಂಡಿಯ 35 ವರ್ಷದ ವ್ಯಕ್ತಿಯಾಗಿದ್ದರೆ, 2ನೇ ಆರೋಪಿ ಅದೇ ಗ್ರಾಮದ 27 ವರ್ಷದ ಯುವಕ, 3ನೇ ಆರೋಪಿ 35 ವರ್ಷದ ವ್ಯಕ್ತಿ, 4ನೇ ಆರೋಪಿ 26 ವರ್ಷದವನಾಗಿದ್ದರೆ, 5ನೇ ಆರೋಪಿ ಸುಳ್ಯ ಜಾಲ್ಸೂರು ಗ್ರಾಮದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗುರುತು ಪತ್ತೆ ಹಚ್ಚುವ ಕವಾಯತು ನಡೆಸಲು ಬಾಕಿ ಇರುವ ಹಿನ್ನೆಲೆಯಲ್ಲಿ ಆರೋಪಿಗಳ ಮುಖ ಚಹರೆಯನ್ನು ಬಹಿರಂಗ ಮಾಡುವುದನ್ನು ತಡೆ ಹಿಡಿಯಲಾಗಿದೆ ಎಂದು ಸುಳ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಳ್ಯ ಶಾಂತಿನಗರದಲ್ಲಿದ್ದ ಸಂಪತ್‍ಕುಮಾರ್ ಮನೆ ಬಳಿ ಅ.9ರಂದು ಬೆಳಗೆ 6 ಗಂಟೆಯ ಸಮಯದಲ್ಲಿ ಬಂದ 5 ಮಂದಿಯ ತಂಡ ಸಂಪತ್‍ಕುಮಾರ್ ಮೇಲೆ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಆರೋಪಿ ಗಳು ಹಸಿರು ಬಣ್ಣದ ಕ್ವಾಲೀಸ್ ವಾಹನದಲ್ಲಿ ಬಂದು ಕೃತ್ಯ ನಡೆಸಿ ಆ ವಾಹನದಲ್ಲೇ ಪರಾರಿ ಯಾಗಿದ್ದರು ಎಂಬ ಮಾಹಿತಿ ಸಾರ್ವಜನಿಕರಿಂದ ಪೊಲೀಸ ರಿಗೆ ಸಿಕ್ಕಿತ್ತು ಎನ್ನಲಾಗಿದೆ.
ಈ ವಾಹನದ ಮಾಲೀಕರ ಪತ್ತೆಯ ಸಂದರ್ಭ ವಾಹನ ಸುಳ್ಯದ ಚೊಕ್ಕಾಡಿಯ ಕೃಷಿಕ ಪದ್ಮನಾಭ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು. ಪದ್ಮನಾಭ ಅವರನ್ನು ವಿಚಾರಣೆ ನಡೆಸಿದ ಸಂದರ್ಭ ಕಲ್ಲು ಗುಂಡಿಯ ಮನು ಎಂಬಾತ ಸೆ.30ರಂದು ಫಿಲಂ ಶೂಟಿಂಗ್ ನೋಡಲು ಸ್ನೇಹಿತರೊಂ ದಿಗೆ ಹೋಗುವುದಾಗಿ ಹೇಳಿ ವಾಹನವನ್ನು ಕೊಂಡೊಯ್ದಿರುವುದಾಗಿ ಪದ್ಮನಾಭ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ನಡುವೆ ಕೃತ್ಯಕ್ಕೆ ಬಳ ಸಿದ್ದ ವಾಹನ ಅರಂ ತೋಡುವಿನ ಕುಳಬೈಲು ನಿವಾಸಿ ಮನೀಸ್ ಬಾಬುಗೌಡ ಅವರಿಗೆ ಸೇರಿದ್ದ ಅಡಿಕೆ ತೋಟದ ಒಳಗೆ ಪತ್ತೆಯಾಗಿತ್ತು. ಈ ತೋಟವನ್ನು ಮನೀಸ್‍ಗೌಡ ಗುತ್ತಿಗೆ ಆಧಾರದಲ್ಲಿ ಕಲ್ಲುಗುಂಡಿಯ ಮಧು ಎಂಬಾತನಿಗೆ ನೀಡಿದ್ದರು. ಶನಿವಾರ ಮನೀಸ್‍ಗೌಡ ಕಾರ್ಯನಿಮಿತ್ತ ಅಡಿಕೆ ತೋಟದ ಕಡೆ ತೆರಳಿದಾಗ ಹಸಿರು ಬಣ್ಣದ ವಾಹನ ಪತ್ತೆಯಾದ ಹಿನೆÀ್ನಲೆಯಲ್ಲಿ ಮಧುವಿಗೆ ಕರೆ ಮಾಡಿದ್ದರು. ಆದರೆ ಮಧುವಿನ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಹಿನೆÀ್ನಲೆಯಲ್ಲಿ ಮನೀಸ್ ಬಾಬುಗೌಡ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕ್ವಾಲೀಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.