ಐವರು ಕುಖ್ಯಾತ ಸರಗಳ್ಳರ ಸೆರೆ
ಮೈಸೂರು

ಐವರು ಕುಖ್ಯಾತ ಸರಗಳ್ಳರ ಸೆರೆ

June 17, 2022

ಮೈಸೂರು, ಜೂ. ೧೬ (ಆರ್‌ಕೆ)- ಐವರು ಕುಖ್ಯಾತ ಸರಗಳ್ಳರನ್ನು ಬಂಧಿಸಿ ರುವ ಮೈಸೂರಿನ ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ೧೩,೫೦,೦೦೦ ರೂ. ಬೆಲೆ ಬಾಳುವ ೩೦೦ ಗ್ರಾಂ ತೂಕದ ೭ ಚಿನ್ನದ ಸರ ಗಳು, ಕೃತ್ಯಕ್ಕೆ ಬಳಸಿದ್ದ ೩ ದ್ವಿಚಕ್ರ ವಾಹನ ಮತ್ತು ೫ ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ದಿವಾನ್ಸ್ ರಸ್ತೆ ನಿವಾಸಿ ಕೃಷ್ಣ (೨೫), ಕೆ.ಆರ್. ಪೇಟೆ ತಾಲೂಕು ಹೆಚ್.ಕೋಡಳ್ಳಿ ಗ್ರಾಮದ ನಿವಾಸಿ ರಾಜು (೩೨), ಹೆಚ್.ಡಿ. ಕೋಟೆ ತಾಲೂಕಿನ ಅಭಿ ಷೇಕ್ (೨೬), ಮೈಸೂರಿನ ಜೆ.ಪಿ. ನಗರ ಬಳಿಯ ಮಹದೇವಪುರ ನಿವಾಸಿಗಳಾದ ಯೋಗೇಶ್ (೨೮) ಮತ್ತು ಪ್ರಜ್ವಲ್ (೨೬) ಬಂಧಿತ ಸರ ಅಪಹರಣಕಾರರು.

ಜೂನ್ ೫ರಂದು ಶ್ರೀರಾಂಪುರ ಬಳಿ ರಿಂಗ್ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಬೈಕಿನಲ್ಲಿ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅವರು ಈ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳ ತನ ಮಾಡಿದ್ದಾರೆ ಎಂಬುದು ತಿಳಿಯು ತ್ತದೆ. ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಕೊಂಡು ಮೈಸೂರು ನಗರದ ವಿವಿಧೆಡೆ ಪ್ರತ್ಯೇಕ ಸರ ಅಪಹರಣ ಮಾಡಿದ್ದಾರೆಂಬ ವಿಷಯ ತಿಳಿದ ಹಿನ್ನೆಲೆಯಲ್ಲಿ ಸುಳಿವಿನ ಜಾಡು ಹಿಡಿದು ಜೂ.೧೨ರಂದು ಪೊಲೀ ಸರು ಮತ್ತಿಬ್ಬರನ್ನೂ ಬಂಧಿಸಿದ್ದಾರೆ.
ಮೈಸೂರಲ್ಲಿ ನಡೆದಿದ್ದ ೭ ಸರ ಅಪ ಹರಣ ಪ್ರಕರಣಗಳಿಗೆ ಸಂಬAಧಿಸಿದAತೆ ೧೩,೫೦,೦೦೦ ರೂ. ಮೌಲ್ಯದ ೩೦೦ ಗ್ರಾಂ ತೂಕದ ೭ ಚಿನ್ನದ ಸರಗಳು, ಕೃತ್ಯಕ್ಕೆ ಬಳ ಸಿದ್ದ ೩ ದ್ವಿಚಕ್ರ ವಾಹನಗಳು ಹಾಗೂ ೫ ಮೊಬೈಲ್ ಫೋನ್‌ಗಳನ್ನು ವಶಪಡಿಸಿ ಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿ ದ್ದಾರೆ. ಆರೋಪಿಗಳ ಬಂಧನದಿAದಾಗಿ ವಿದ್ಯಾರಣ್ಯಪುರಂ ೨, ಕುವೆಂಪುನಗರ ೨, ಲಕ್ಷಿö್ಮಪುರಂನ ೧, ವಿಜಯನಗರದ ೧ ಸರಗಳ್ಳ ತನ ಪ್ರಕರಣಗಳು ಪತ್ತೆಯಾದಂತಾಗಿದೆ.

ಬAಧಿತ ಆರೋಪಿ ರಾಜು ಈ ಹಿಂದೆ ವಿದ್ಯಾರಣ್ಯಪುರಂ, ಹೆಬ್ಬಾಳು, ಎನ್.ಆರ್., ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮತ್ತು ವಂಚನೆ ಪ್ರಕರಣ ಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಒಂದು ಬೈಕಿನಲ್ಲಿ ಬಂದು ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿ ಯಾಗುವ ಅವರು, ಸ್ವಲ್ಪ ದೂರ ಹೋಗು ತ್ತಿದ್ದಂತೆಯೇ ಬೈಕ್ ಅನ್ನು ಬದಲಿಸಿ ಕೊಂಡು ಪರಾರಿಯಾಗುತ್ತಿದ್ದರು.ಡಿಸಿಪಿ ಎಂ.ಎಸ್. ಗೀತಾ ಪ್ರಸನ್ನ ಅವರ ಮಾರ್ಗದರ್ಶನದಂತೆ ಕೆ.ಆರ್.ಉಪ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರ ಮೇಲ್ವಿಚಾರಣೆಯಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ವಿದ್ಯಾರಣ್ಯಪುರಂ ಠಾಣೆ ಇನ್ಸ್ಪೆಕ್ಟರ್ ಜಿ.ಸಿ.ರಾಜು, ಸಬ್ ಇನ್ಸ್ಪೆಕ್ಟರ್‌ಗಳಾದ ಎನ್.ವಿ.ರಂಗಸ್ವಾಮಿ, ಸಿದ್ದಬಾಯಿ, ಮಮದಪುರ, ಎಎಸ್‌ಐ ಮರಿಸ್ವಾಮಿ, ಸಿಬ್ಬಂದಿಗಳಾದ ರಮೇಶ್, ಮಹೇಶ್ವರ, ನಟರಾಜು, ಕೆ.ಶ್ರೀಧರ ಮೂರ್ತಿ, ಎಸ್.ರವಿ, ಸುನಿಲ್‌ಕುಮಾರ್, ರಾಜೇಶ್, ರಂಜಿತ್‌ಕುಮಾರ್, ನವೀನ್, ಧನಂಜಯ, ನಾರಾಯಣ ಶೆಟ್ಟಿ, ಶ್ರೀನಿ ವಾಸ, ವೆಂಕಟೇಶ್, ಸುರೇಶ್, ಮೇಘ ನಾಯಕ, ಸೋಮಶೇಖರ ನಾಯಕ ಅವರುಗಳು ಪಾಲ್ಗೊಂಡಿದ್ದರು.

Translate »