ದಕ್ಷಿಣ ಪದವೀಧರ ಕ್ಷೇತ್ರ: ಮೊದಲ ಪ್ರಾಶಸ್ತö್ಯ ಮತ ಎಣ ಕೆ ಪೂರ್ಣ ಕಾಂಗ್ರೆಸ್‌ನ ಮಧು ಮುನ್ನಡೆ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರ: ಮೊದಲ ಪ್ರಾಶಸ್ತö್ಯ ಮತ ಎಣ ಕೆ ಪೂರ್ಣ ಕಾಂಗ್ರೆಸ್‌ನ ಮಧು ಮುನ್ನಡೆ

June 16, 2022

ಮೊದಲ ಪ್ರಾಶಸ್ತö್ಯ ಮತ ಎಣ ಕೆ ಅಂತ್ಯಗೊAಡಾಗ ೫೯೦೫ ಅಧಿಕ ಮತ

ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ದ್ವಿತೀಯ, ಜೆಡಿಎಸ್‌ನ ಹೆಚ್.ಕೆ.ರಾಮುಗೆ ತೃತೀಯ ಸ್ಥಾನ

ಮೈಸೂರು,ಜೂ.೧೫(ಎಂಕೆ/ಆರ್‌ಕೆ/ಎAಟಿವೈ)-ರಾಜ್ಯ ರಾಜ ಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣ ಕೆ ಕಾರ್ಯ ಬುಧವಾರ ಆರಂಭವಾಗಿದ್ದು, ಮಧ್ಯರಾತ್ರಿ ೧ ಗಂಟೆ ಸುಮಾರಿನಲ್ಲಿ ಪ್ರಥಮ ಪ್ರಾಶಸ್ತö್ಯದ ಮತದ ಎಣ ಕೆ ಅಂತ್ಯಗೊAಡಿದೆ. ಗೆಲುವಿಗೆ ೪೬,೦೮೩ ಮತಗಳನ್ನು ನಿಗದಿಪಡಿಸಲಾಗಿದೆ. ಪ್ರಾಥಮಿಕ ಪ್ರಾಶಸ್ತö್ಯದ ಮತ ಎಣ ಕೆ ಅಂತ್ಯಗೊAಡಾಗ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗಿಂತ ೫,೯೦೫ ಮತಗಳಿಂದ ಮುನ್ನಡೆದಿದ್ದಾರೆ.

ಮಧು ಜಿ.ಮಾದೇಗೌಡ ೩೨,೫೯೨, ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ.ರವಿಶಂಕರ್ ೨೬,೬೮೭ ಮತ ಪಡೆದರೆ, ಜೆಡಿಎಸ್‌ನ ಹೆಚ್.ಕೆ. ರಾಮು ೧೭,೦೭೨, ರೈತ ಸಂಘ, ದಸಂಸ ಬೆಂಬಲಿತ ಪ್ರಸನ್ನ ವಿ.ಗೌಡ ೬,೬೦೯, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹಿಂದಿನ ಆಪ್ತ ಸಹಾಯಕ ವಿನಯ್ ೩,೪೭೨ ಮತ ಪಡೆದರೆ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕೇವಲ ೪೮೦ ಮತ ಪಡೆದರು. ವಿದ್ಯಾವಂತ ಪದವೀಧರರು ಚಲಾಯಿಸಿದ ಮತಗಳಲ್ಲಿ ೭,೩೦೭ ಕುಲಗೆಟ್ಟಿದ್ದವು. ಮಧು ಮಾದೇಗೌಡ ಗೆಲುವಿಗೆ ೧೩೪೯೧ ಮತಗಳು ಕೊರತೆ ಇದ್ದರೆ, ಮೈ.ವಿ.ರವಿಶಂಕರ್ ಗೆಲ್ಲಲು ೧೯೩೯೬ ಮತಗಳ ಅಗತ್ಯವಿದೆ. ಪ್ರಥಮ ಪ್ರಾಶಸ್ತö್ಯದ ಮತ ಎಣ ಕೆಯಲ್ಲಿ ಫಲಿತಾಂಶ ಹೊರ ಬೀಳದ ಕಾರಣ ರಾತ್ರಿ ೧.೪೫ರ ಸುಮಾರಿನಲ್ಲಿ ೨ನೇ ಪ್ರಾಶಸ್ತö್ಯದ ಮತ ಎಣ ಕೆ ಕಾರ್ಯ ಆರಂಭವಾಗಿತ್ತು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈವರೆವಿಗೂ ಬಿಜೆಪಿ ಮತ್ತು ಜೆಡಿಎಸ್ ಮಾತ್ರ ಪ್ರಾಬಲ್ಯ ಮೆರೆದಿದ್ದು, ಕಾಂಗ್ರೆಸ್ `ಆಟಕ್ಕುಂಟು-ಲೆಕ್ಕಕ್ಕಿಲ್ಲ’ ಎಂಬAತಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತö್ಯ ಮತದಲ್ಲಿ ಮುನ್ನಡೆ ಸಾಧಿಸುವ ಮೂಲಕ ಮಧು ಮಾದೇಗೌಡ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂಚೆ ಮತದಲ್ಲೇ ಶುಭಾರಂಭ: ಇಂದು ಮೊದಲು ಅಂಚೆ ಮತಗಳ ಎಣ ಕೆ ನಡೆಸಲಾಯಿತು. ದಕ್ಷಿಣ ಪದವೀಧರ ಕ್ಷೇತ್ರ ವ್ಯಾಪ್ತಿಯ ೪ ಜಿಲ್ಲೆಗಳಿಂದ ೨೪೫ ಮಂದಿ ಹೆಸರು ನೋಂದಾಯಿಸಿ ಬ್ಯಾಲೆಟ್ ಪೇಪರ್ ಪಡೆದಿದ್ದರು.ಅದರಲ್ಲಿ ೧೭೮ ಮಂದಿ ಚುನಾವಣಾಧಿಕಾರಿಗಳಿಗೆ ಮತ ಪತ್ರವನ್ನು ಅಂಚೆ ಮೂಲಕ ಹಿಂದಿರುಗಿಸಿದ್ದರು. ಆದರೆ, ಓರ್ವ ಖಾಲಿ ಬ್ಯಾಲೆಟ್ ಪೇಪರ್ ರವಾನಿಸಿದ್ದರೆ, ಮತ್ತೊಬ್ಬರದ್ದು ತಿರಸ್ಕೃತವಾಯಿತು. ಉಳಿದ ೧೭೬ ಕ್ರಮಬದ್ಧ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ೬೩ ಮತ ಪಡೆದು ಶುಭಾರಂಭ ಮಾಡಿದರು. ಇನ್ನು ಬಿಜೆಪಿಯ ಮೈ.ವಿ.ರವಿಶಂಕರ್ ಅವರಿಗೆ ೬೦ ಮತ್ತು ಜೆಡಿಎಸ್‌ನ ಹೆಚ್.ಕೆ. ರಾಮುಗೆ ೪೩ ಮತ ಲಭಿಸಿದರೆ, ೧೦ ಮತಗಳು ಪಕ್ಷೇತರರ ಪಾಲಾಯಿತು.

ಪ್ರಥಮ ಪ್ರಾಶಸ್ತçದ ಮತ ಎಣ ಕಾ ಪ್ರಕ್ರಿಯೆ ಆರಂಭವಾದಾಗಿನಿAದಲೂ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಎರಡನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿಗಿಂತ ಸ್ವಲ್ಪ ಕಡಿಮೆ ಮತ ಪಡೆಯುವ ಮೂಲಕ ಸ್ಪರ್ಧೆಯೊಡ್ಡುತ್ತಲೇ ಬಂದರು. ೧೦ ಸಾವಿರ ಮತ ಎಣ ಕೆಯಾಗಿದ್ದಾಗ ೧೬೦೦ ಮತಗಳ ಮುನ್ನಡೆ ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ, ೨೦ ಸಾವಿರ ಮತ ಎಣ ಕೆ ನಂತರ ೨೨೦೦ರ ಮುನ್ನಡೆ ಹೆಚ್ಚಿಸಿಕೊಂಡರು. ಸಂಜೆ ೪ ಗಂಟೆಗೆ ೩೦ ಸಾವಿರ ಮತ ಎಣ ಕೆ ಮುಗಿದಾಗ ಮುನ್ನಡೆಯ ಅಂತರ ೩೦೨ಕ್ಕೆ ಕುಸಿಯಿತಾದರೂ, ಸಂಜೆ ೫ ಗಂಟೆ ವೇಳೆಗೆ ೪೦ ಸಾವಿರ ಮತ ಎಣ ಕೆ ಪೂರ್ಣಗೊಂಡಾಗ ಮಧು ಜಿ.ಮಾದೇಗೌಡರು ಚೇತರಿಸಿಕೊಂಡಿದ್ದು, ೨೬೦೧ ಮತಗಳ ಮುನ್ನಡೆ ಸಾಧಿಸಿದರು. ಸಂಜೆ ೬.೩೦ರ ವೇಳೆಗೆ ೪೯,೫೦೦ ಸಾವಿರ ಮತ ಎಣ ಕೆ ನಡೆದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ೨೬೫೮ ಮತಗಳ ಮುನ್ನಡೆ ಕಾಯ್ದುಕೊಂಡರು.

ಯಾರಿಗೂ ಒಲಿಯದ ಪ್ರಥಮ ಪ್ರಾಶಸ್ತçದ ಗೆಲುವು: ಚುನಾವಣೆಯ ಪ್ರಚಾರದ ವೇಳೆ ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರಥಮ ಪ್ರಾಶಸ್ತö್ಯದ ಮತಗಳಿಂದಲೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಇಂದು ಮತ ಎಣ ಕೆ ವೇಳೆ ಕಣದಲ್ಲಿದ್ದ ೧೯ ಅಭ್ಯರ್ಥಿಗಳಲ್ಲಿ ಯಾರೊಬ್ಬರಿಗೂ ಪ್ರಥಮ ಪ್ರಾಶಸ್ತö್ಯದ ಮತಗಳ ಗೆಲುವು ಸಾಧ್ಯವಿಲ್ಲ ಎಂಬುದು ಮನದಟ್ಟಾಯಿತು. ಪ್ರಥಮ ಪ್ರಾಶಸ್ತö್ಯದ ಗೆಲುವಿಗಾಗಿ ಚಲಾವಣೆಯಾದ ಕ್ರಮಬದ್ಧ ಮತದಲ್ಲಿ ಅರ್ಧಕ್ಕಿಂತ ಹೆಚ್ಚುವರಿ ಒಂದು ಮತ ಪಡೆಯಬೇಕಾಗಿದ್ದು, ಆದರೆ ಯಾರಿಗೂ ಈ ಪ್ರಮಾಣದ ಮತ ಲಭಿಸದ ಹಿನ್ನೆಲೆಯಲ್ಲಿ ಎರಡನೇ ಪ್ರಾಶಸ್ತö್ಯದ ಮತಗಳ ಮೊರೆ ಹೋಗಬೇಕಾಯಿತು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನೊಳ ಗೊಂಡ ಈ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಹೆಸರು ನೋಂದಾಯಿಸಿದ್ದ ೧,೪೧,೯೬೩ ಮತದಾರರಲ್ಲಿ ೯೯,೩೦೪ ಮತದಾರರು ಮತ ಚಲಾಯಿಸಿದ್ದರು. ಒಟ್ಟಾರೆ ಶೇ.೬೯.೯೫ರಷ್ಟು ಮತ ಚಲಾವಣೆಯಾಗಿತ್ತು. ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣ ವಾಣ ಜ್ಯ ಕಾಲೇಜಿನ ಎರಡು ಕೊಠಡಿಗಳಲ್ಲಿ ೨೮ ಟೇಬಲ್‌ಗಳಲ್ಲಿ ಮತ ಎಣ ಕಾ ಪ್ರಕ್ರಿಯೆ ಆರಂಭದಿAದಲೂ ಕುತೂಹಲ ಕೆರಳಿಸಿತ್ತು, ಕಾತರ ಹೆಚ್ಚಿಸುವಂತೆ ಮಾಡಿತು.

ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟಾçಂಗ್ ರೂಮ್ ಓಪನ್: ಜೂ.೧೩ರಂದು ಚುನಾವಣೆ ಬಳಿಕ ನಾಲ್ಕೂ ಜಿಲ್ಲೆಗಳಿಂದ ಮತಪೆಟ್ಟಿಗೆಯನ್ನು ಎಣ ಕಾ ಕೇಂದ್ರ ಮಹಾರಾಣ ವಾಣ ಜ್ಯ ಕಾಲೇಜಿನ ಸ್ಟಾçಂಗ್ ರೂಂನಲ್ಲಿ ಬಿಗಿ ಭದ್ರತೆಯಡಿ ಸುರಕ್ಷಿತವಾಗಿಡಲಾಗಿತ್ತು. ಇಂದು ಬೆಳಗ್ಗೆ ೭.೪೦ರಲ್ಲಿ ಚುನಾವಣಾ ವೀಕ್ಷಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಪೊನ್ನುರಾಜ್, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಸೇರಿದಂತೆ ನಾಲ್ಕು ಜಿಲ್ಲೆಗಳ ಅಧಿಕಾರಿಗಳು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟಾçಂಗ್ ರೂಮ್ ತೆರೆಯಲಾಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಆಯ್ದ ಏಜೆಂಟರಿAದ ಸಹಿ ಪಡೆಯಲಾಯಿತು.

ಮತಪತ್ರಗಳ ಮಿಶ್ರಣ: ಸ್ಟಾçಂಗ್ ರೂಂನಲ್ಲಿದ್ದ ಮತ ಪೆಟ್ಟಿಗೆಗಳನ್ನು ಎಣ ಕಾ ಕೊಠಡಿಗೆ ತಂದು ಮತಪತ್ರಗಳನ್ನು ನೆಲಕ್ಕೆ ಸುರಿದು ತಲಾ ೨೫ ಮತಪತ್ರದ ಕಟ್ಟುಗಳನ್ನು ಮಾಡುವ ಪ್ರಕ್ರಿಯೆ ಆರಂಭಿಸಲಾಯಿತು. ಬೆಳಗ್ಗೆ ೮ ಗಂಟೆಯಿAದ ಮಧ್ಯಾಹ್ನ ೧೨.೧೫ವರೆಗೆ ಬಂಡಲ್ ಮಾಡಲಾಯಿತು. ಇದರ ಜೊತೆ ಜೊತೆಗೆ ಕುಲಗೆಟ್ಟ ಮತ ಪತ್ರವನ್ನು ಬೇರ್ಪಡಿಸಲಾ ಯಿತು. ಚಲಾವಣೆಗೊಂಡಿದ್ದ ೯೯,೩೦೪ ಮತಗಳನ್ನು ತಲಾ ೨೫ ಮತಪತ್ರದ ಬಂಡಲ್ ಗಳಾಗಿ ಮಾರ್ಪಡಿಸಿದ ಬಳಿಕ ಮಧ್ಯಾಹ್ನ ೧೨.೩೦ರಿಂದ ಯಾವ ಯಾವ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತö್ಯದ ಮತ ಬಂದಿದೆ ಎಂದು ಮತಪತ್ರಗಳನ್ನು ಏಜೆಂಟರಿಗೆ ತೋರಿಸಿ, ಅಭ್ಯರ್ಥಿಗಳ ಹೆಸರಿನ ಟ್ರೇ ಗಳಿಗೆ ಇಡಲಾಯಿತು. ಈ ವೇಳೆ ಅಭ್ಯರ್ಥಿಗಳ ಏಜೆಂಟರು ಬರೆದುಕೊಂಡು ಮಾಹಿತಿಯಂತೆ ಮುನ್ನಡೆ ಇರುವ ಲೆಕ್ಕಾಚಾರದಲ್ಲಿ ನಿರತರಾದರು.

ಮಧ್ಯಾಹ್ನದವರೆಗೂ ಉತ್ಸಾಹವೇ ಇಲ್ಲ: ಮತ ಎಣ ಕಾ ಕೇಂದ್ರದಲ್ಲಿ ಮೂರೂ ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳಲ್ಲಿ ಮಧ್ಯಾಹ್ನ ೧೨ ಗಂಟೆವರೆಗೂ ಉತ್ಸಾಹವೇ ಇಲ್ಲ. ಮತಪತ್ರಗಳ ಜೋಡಣಾ ಕಾರ್ಯ ಪೂರ್ಣಗೊಂಡAತೆ ಎಣ ಕಾ ಟೇಬಲ್ ಬಳಿ ಹೋಗಿ ಎಣ ಕಾ ಕಾರ್ಯ ಆರಂಭದೊAದಿಗೆ ಕುತೂಹಲ ಮೂಡಿತು.

ಐಡೆಂಟಿಟಿ ನೋಡಿ ಒಳಗೆ ಬಿಟ್ಟ ಸಿಬ್ಬಂದಿ: ಅಭ್ಯರ್ಥಿಗಳ ಪರ ಏಜೆಂಟರನ್ನು ಎಣ ಕೆ ಪ್ರಕ್ರಿಯೆ ವೀಕ್ಷಣೆಗೆ ನಿಯೋಜಿಸಲಾಗಿತ್ತು. ಈ ವೇಳೆ ಏಜೆಂಟರಿಗಾಗಿ ನೀಡಿದ್ದ ಗುರುತಿನ ಚೀಟಿ ತಂದ ಏಜೆಂಟರನ್ನು ಪೊಲೀಸರು ಕೂಲಂಕುಶವಾಗಿ ಪರಿಶೀಲಿಸಿದರು. ಮಾಸ್ಕ್ ಧರಿಸಿ ಬಂದವರನ್ನು ಮಾಸ್ಕ್ ತೆಗೆಸಿ ಮುಖ ಚಹರೆ ಖಚಿತಪಡಿಸಿಕೊಂಡು ಎಣ ಕಾ ಕೇಂದ್ರದೊಳಗೆ ಬಿಡುತ್ತಿದ್ದರು. ಮತ ಎಣ ಕಾ ಕೇಂದ್ರಕ್ಕೆ ಅಭ್ಯರ್ಥಿಗಳೂ ಸೇರಿದಂತೆ ಏಜೆಂಟರು ಹಾಗೂ ಸಿಬ್ಬಂದಿಗಳು ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹೇರ ಲಾಗಿತ್ತು. ಕಟ್ಟಡದ ಮುಖ್ಯ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸುವುದರೊಂದಿಗೆ ಲೋಹ ಶೋಧಕ ಉಪಕರಣಗಳಿಂದ ಪ್ರತಿಯೊಬ್ಬರನ್ನು ತಪಾಸಣೆಗೊಳಪಡಿಸಲಾಗುತ್ತಿತ್ತು.

Translate »