ಗಮನ ಸೆಳೆಯುತ್ತಿದೆ ಹೊಸ ತಂತ್ರಜ್ಞಾನದ ಕಟ್ಟಡ ಸಾಮಗ್ರಿಯುಳ್ಳ `ಮೈಬಿಲ್ಡ್’ ವಸ್ತುಪ್ರದರ್ಶನ
ಮೈಸೂರು

ಗಮನ ಸೆಳೆಯುತ್ತಿದೆ ಹೊಸ ತಂತ್ರಜ್ಞಾನದ ಕಟ್ಟಡ ಸಾಮಗ್ರಿಯುಳ್ಳ `ಮೈಬಿಲ್ಡ್’ ವಸ್ತುಪ್ರದರ್ಶನ

December 8, 2018

ಮೈಸೂರು:  ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ `ಮೈಬಿಲ್ಡ್-2018’ ವಸ್ತು ಪ್ರದರ್ಶನದಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿ ತಯಾರಿಸಿರುವ ಕಟ್ಟಡ ಸಾಮಗ್ರಿಗಳನ್ನು ಪ್ರದರ್ಶಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ ಪ್ರತಿ ವರ್ಷ `ಮೈಬಿಲ್ಡ್’ ವಸ್ತು ಪ್ರದರ್ಶನ ಆಯೋಜಿಸಿ ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಕಟ್ಟಡ ಸಾಮಗ್ರಿಗಳ ಬಗ್ಗೆ ಪರಿಚಯ ಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.5ರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ ಈ ಸಾಲಿನ ವಸ್ತು ಪ್ರದರ್ಶನ ಡಿ.10ರವರೆಗೆ ನಡೆಯಲಿದ್ದು, 161 ಮಳಿಗೆ ಗಳನ್ನು 2 ಬ್ಲಾಕ್‍ಗಳಲ್ಲಿ ತೆರೆಯಲಾಗಿದೆ. ದಿನವೊಂದಕ್ಕೆ ನಾಲ್ಕರಿಂದ ಐದು ಸಾವಿರ ಜನರು ವಸ್ತು ಪ್ರದರ್ಶನವನ್ನು ವೀಕ್ಷಿಸು ತ್ತಿದ್ದು, ತಮಗೆ ಇಷ್ಟವಾದ ಸಾಮಗ್ರಿಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಈ ಕುರಿತು `ಮೈಸೂರು ಮಿತ್ರ’ನೊಂ ದಿಗೆ ಮೈಬಿಲ್ಡ್-2018 ಅಧ್ಯಕ್ಷ ಕೆ.ಎಂ. ರಘುನಾಥ್ ಮಾತನಾಡಿ, ಈ ಬಾರಿ ಹವಾ ನಿಯಂತ್ರಿತ ವ್ಯವಸ್ಥೆಯೊಂದಿಗೆ ಜರ್ಮನಿ ತಂತ್ರಜ್ಞಾನದ ಟೆಂಟ್‍ನಲ್ಲಿ ಮೈಬಿಲ್ಡ್ ವಸ್ತು ಪ್ರದರ್ಶನ ನಡೆಸಲಾಗುತ್ತಿದೆ. ಇದರಲ್ಲಿ ಎಂ-ಸ್ಯಾಂಡ್, ಕಬ್ಬಿಣ, ಸಿಮೆಂಟ್, ವುಡನ್ ಪ್ಲೋರ್, ಕಬೋರ್ಡ್‍ಗಳು, ಮರದ ಬಾಗಿಲು ಹಾಗೂ ಉಪಕರಣಗಳು, ಜಲ್ಲಿ, ಹೊಸ ತಂತ್ರಜ್ಞಾನದ ಪ್ಲಂಬಿಂಗ್ ಸಾಮಗ್ರಿ ಗಳು, ಟೈಲ್ಸ್, ಸಿಮೆಂಟ್ ಬ್ಲಾಕ್ಸ್, ಜನರೇ ಟರ್, ಸೋಲಾರ್, ವಾಟರ್ ಹೀಟರ್, ಗೀಜರ್, ಯು-ಪಿವಿಸಿ ಬಾಗಿಲು ಮತ್ತು ಕಿಟಕಿ ಗಳು, ಅಲಂಕಾರಿಕ ವಸ್ತುಗಳು, ಸ್ವಿಚ್‍ಗಳು, ಡೋರ್‍ಲಾಕ್‍ಗಳು, ಲೈಟ್‍ಗಳು ಸೇರಿ ದಂತೆ ಇನ್ನಿತರ ವಸ್ತುಗಳನ್ನು ಪ್ರದರ್ಶನ ಕ್ಕಿಡಲಾಗಿದೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೈಬಿಲ್ಡ್ ಪ್ರದರ್ಶನಕ್ಕೆ ಪ್ರತಿಕ್ರಿಯೆ ಉತ್ತಮವಾಗಿದೆ. ಕೆಲವು ಕಟ್ಟಡ ನಿರ್ಮಾಣ ಸಂಸ್ಥೆಗಳು ಪ್ರದರ್ಶನದಲ್ಲಿ ಮಳಿಗೆ ಪಡೆದಿದ್ದು, ಹೊಸ ಬಡಾವಣೆ, ವಸತಿ ಸಮುಚ್ಚಯ ಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಬಹುತೇಕ ಎಲ್ಲಾ ಮಳಿಗೆಗಳಿಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿದಿನ ಸಂಜೆ 1ರಿಂದ 15 ವರ್ಷದೊಳಗಿನ ಮಕ್ಕ ಳಿಂದ ಹಾಡುಗಾರಿಕೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ವಿತರಿಸಲಾಗುತ್ತದೆ. ಅಲ್ಲದೆ ಫುಡ್ ಜೋನ್‍ನಲ್ಲಿರುವ ಮಳಿಗೆಗಳಲ್ಲಿ ಗುಣಮಟ್ಟದ ತಿನಿಸುಗಳ ಲಭ್ಯವಿದ್ದು, ಗ್ರಾಹಕರ ನಾಲಿಗೆ ತಣಿಸುತ್ತಿದೆ ಎಂದು ಹೇಳಿದರು.

Translate »