ಸರ್ಕಾರದ ಆರೋಗ್ಯ ಯೋಜನೆ ಜನರಿಗೆ ಮನವರಿಕೆ ಮಾಡಿಕೊಡಿ
ಮೈಸೂರು

ಸರ್ಕಾರದ ಆರೋಗ್ಯ ಯೋಜನೆ ಜನರಿಗೆ ಮನವರಿಕೆ ಮಾಡಿಕೊಡಿ

December 8, 2018

ಮೈಸೂರು: ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಸಾರ್ವ ಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಚಿಕಿತ್ಸೆ ನೆಪದಲ್ಲಿ ಹಣ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು, ಜಿಲ್ಲಾ ಆರೋಗ್ಯಾಧಿಕಾರಿಗೆ ನಿರ್ದೇಶನ ನೀಡಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂ ಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇತ್ತೀಚೆಗಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ರೋಗಿಯೊಬ್ಬರ ಕುಟುಂಬ ದವರು ಆಸ್ಪತ್ರೆ ವಿರುದ್ಧ ನೀಡಿರುವ ದೂರನ್ನು ಓದುವ ಮೂಲಕ ಇಂತಹ ಆಸ್ಪತ್ರೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರು, ಬಡ ಕುಟುಂಬದವರಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಅನಾಹುತ ಸಂಭವಿಸು ತ್ತಿವೆ. ದುಡ್ಡು ಕೊಡದಿದ್ದರೆ ಹೆಣ ಎತ್ತಲು ಬಿಡುವುದಿಲ್ಲ. ಸಣ್ಣ ಕಾಯಿಲೆಗೆ ಲಕ್ಷಾಂತರ ರೂ. ಸುಲಿಗೆ ಮಾಡುತ್ತಾರೆಂಬ ದೂರು ಗಳು ಕೇಳಿಬರುತ್ತಿವೆ. ಇದಕ್ಕೆಲ್ಲಾ ಯಾರು ಹೊಣೆ?. ಸರ್ಕಾರದ ಆರೋಗ್ಯ ಯೋಜನೆ ಗಳ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಿ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಸರ್ಕಾರಿ ಸೌಲಭ್ಯಗಳು, ಯಾವ ಚಿಕಿತ್ಸೆಗೆ ಎಷ್ಟು ವೆಚ್ಚ? ಎಂಬ ಸಂಪೂರ್ಣ ವಿವರವನ್ನೊಳಗೊಂಡ ದೊಡ್ಡ ಫಲಕಗಳನ್ನು ಅಳವಡಿಸಲು ಸೂಚನೆ ನೀಡಿ. ಒಂದಿಲ್ಲೊಂದು ನೆಪದಲ್ಲಿ ರೋಗಿ ಗಳಿಂದ ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ಬಸವರಾಜು, ವಿಷಯ ತಿಳಿ ದಾಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದೇವೆ. ಆ ರೋಗಿಗೆ ಬಯಾಪ್ಸಿ ಮಾಡಿದ ನಂತರ ಕ್ಯಾನ್ಸರ್ ಇರುವುದು ಗೊತ್ತಾಯಿತು. ಅದನ್ನು ಅವರ ಕುಟುಂಬದವರಿಗೂ ತಿಳಿಸಲಾಗಿತ್ತೆಂದು ವೈದ್ಯರು ಹೇಳಿದ್ದಾರೆ. ಆದರೂ ಆಸ್ಪತ್ರೆಗೆ ನೋಟೀಸ್ ನೀಡಲಾ ಗಿದೆ. ವಿವರಣೆ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಕರ್ನಾ ಟಕ ಯೋಜನೆಯ ಹೆಲ್ತ್‍ಕಾರ್ಡ್ ವಿತ ರಣೆಯನ್ನು ತಿ.ನರಸೀಪುರದಲ್ಲಿ ಪ್ರಾಯೋ ಗಿಕವಾಗಿ ನಡೆಸಲಾಗುತ್ತಿದೆ. ಸದ್ಯ ಯೋಜ ನೆಯ ಪ್ರಯೋಜನ ಪಡೆಯಲು ಹೆಲ್ತ್ ಕಾರ್ಡ್ ಅಗತ್ಯವಿಲ್ಲ. ಆಧಾರ್ ಹಾಗೂ ಬಿಪಿಎಲ್ ಕಾರ್ಡ್ ಇದ್ದರೆ ಸಾಕು. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನೋಂದಣಿಯೇ ಆಗಿಲ್ಲ: ಸರ್ಕಾರದ ನಿರ್ದೇಶನದಂತೆ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ 12 ಕೇಂದ್ರಗಳನ್ನು ತೆರೆಯ ಲಾಗಿದೆ. ಆದರೆ ಈವರೆಗೂ ಓರ್ವ ರೈತರೂ ನೋಂದಣಿ ಮಾಡಿಸಿಲ್ಲ. ಆರೋಗ್ಯ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ ಅವರು ಇಲಾಖಾ ಪ್ರಗತಿ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಬೆಂಬಲ ಬೆಲೆಯಡಿ ಭತ್ತದ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಡಿ.5ರಿಂದ 15ರವರೆಗೆ ನೋಂದಣಿ ಕಾರ್ಯ ನಡೆಯಲಿದೆ. ಆದರೆ ವೆಬ್‍ಸೈಟ್ ಸಮಸ್ಯೆಯಿಂದ ಈವ ರೆಗೂ ನೋಂದಣಿಯಾಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಿಟಿಡಿ, ಆಹಾರ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು. ನೀವೊಂದು ಅವರೊಂದು ಹೇಳಿಕೆ ನೀಡಿದರೆ ರೈತರಿಗೆ ಗೊಂದಲ ವಾಗುತ್ತದೆ. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಬೆಲೆ ನೀಡಿ ಖಾಸಗಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಆ ಕಾರಣದಿಂದ ರೈತರು ನೋಂದಣಿ ಮಾಡಿ ಸಲು ಬರುತ್ತಿಲ್ಲ ಎಂಬ ಮಾತು ಕೇಳಿಬರು ತ್ತಿದೆ. ಯಾವುದು ನಿಜ ಹೇಳಿ ಎಂದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ರೈತರ ನೋಂದಣಿಗೆ ಮೊದಲ ಬಾರಿಗೆ ತೆರೆದಿರುವ ವೆಬ್‍ಸೈಟ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಮೊದಲೆರಡು ದಿನ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇಂದಿನಿಂದ ರಿಜಿಸ್ಟರ್‍ನಲ್ಲಿ ರೈತರ ಹೆಸರು ನೋಂದಾಯಿಸಲಾಗುತ್ತಿದ್ದು, ನಂತರದಲ್ಲಿ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗು ತ್ತದೆ ಎಂದು ತಿಳಿಸಿದರು.

ಹಿಂಗಾರು ಬರ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ, ಜಿಲ್ಲೆಯಲ್ಲಿ ಆರಂಭಿಸಿರುವ 12 ಕೇಂದ್ರಗಳಲ್ಲಿ ಡಿ.15ರವ ರೆಗೆ ನೋಂದಣಿ ಮಾಡಿಸಬಹುದು. ಡಿ. 16ರಿಂದ ಖರೀದಿ ಪ್ರಕ್ರಿಯೆ ಆರಂಭವಾಗ ಲಿದ್ದು, ನೋಂದಾಯಿತ ರೈತರು ಸೂಚಿತ ಅಕ್ಕಿ ಗಿರಣಿಗಳಿಗೆ ಭತ್ತವನ್ನು ನೀಡಿ, ಸ್ವೀಕೃತಿ ಪತ್ರ ಪಡೆಯಬೇಕು. ನಂತರ ಉಗ್ರಾಣ ನಿಗಮದಿಂದ ಹಣ ನೀಡಲಾಗುತ್ತದೆ. ಸಾಮಾನ್ಯ ಭತ್ತಕ್ಕೆ 1750 ರೂ. ಹಾಗೂ ಗ್ರೇಡ್-ಎ ಭತ್ತಕ್ಕೆ 1770 ರೂ. ನಿಗದಿ ಮಾಡಲಾಗಿದೆ. ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗ ಳಲ್ಲಿ ಮಳೆ ಕೊರತೆಯಿಂದ ಹಿಂಗಾರು ಬೆಳೆ ತೇವಾಂಶವಿಲ್ಲದೆ ಒಣಗಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಿಟಿಡಿ, ಹಾಗಾ ದರೆ ಹಿಂಗಾರು ಬರಗಾಲ ಉಂಟಾಗಿರುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತು ಕತೆ ನಡೆಸುವಂತೆ ಸೂಚಿಸಿದರು.

ಜನವರಿಯಲ್ಲಿ ಮನೆ ಹಂಚಿಕೆ: ನರ್ಮ್ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3904 ಮನೆ ನಿರ್ಮಾಣ ಮಾಡಲಾಗಿದ್ದು, 2962 ಮನೆಗಳನ್ನು ಹಂಚಿಕೆ ಮಾಡಲಾ ಗಿದೆ. ಉಳಿದವುಗಳನ್ನು ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾ ಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಂ. ಕಪನಿಗೌಡ ತಿಳಿಸಿದರು. ಈ ಸಂಬಂಧ ಪ್ರತಿ ಕ್ರಿಯಿಸಿದ ಸಚಿವರು, ಜನವರಿ ಮೊದಲ ವಾರದಲ್ಲಿ ಸ್ಥಳದಲ್ಲೇ ಫಲಾನುಭವಿಗಳಿಗೆ ಹಂಚಿಕೆ ಮಾಡೋಣ. ಅದಕ್ಕೂ ಮುನ್ನ ಅಧಿಕಾರಿಗಳು ಪುನರ್‍ಪರಿಶೀಲನೆ ನಡೆಸಿ, ವ್ಯತ್ಯಾಸಗಳಿದ್ದರೆ ಸರಿಪಡಿಸಿ. ಅಗತ್ಯ ದಾಖಲೆ ಯುಳ್ಳ ಬಡವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು. ಹಂಚಿಕೆಗೆ ಬಂದ ಸಂದರ್ಭದಲ್ಲಿ ಯಾವುದೇ ತಕರಾರು ಎದು ರಾಗಬಾರದು ಎಂದು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಯೋಗೀಶ್, ಜಿಪಂ ಸಿಇಓ ಕೆ.ಜ್ಯೋತಿ, ಸದಸ್ಯರಾದ ಮಾದೇ ಗೌಡ, ಸದಾನಂದ, ದಿನೇಶ್, ರೂಪಾ ಲೋಕೇಶ್, ಚಂದ್ರಿಕಾ ಸುರೇಶ್ ಮತ್ತಿತ ರರು ಸಭೆಯಲ್ಲಿದ್ದರು.

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ

ಮೈಸೂರು: ಓದು ಓದು ಎಂದು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಜೀವನ ಪಾಠ ಕಲಿಯದಿದ್ದರೆ ಪ್ರಯೋಜನವೇನು?. ಹಾಗಾಗಿ ಪಠ್ಯೇತರ ಚಟು ವಟಿಕೆಗಳಿಗೂ ಆದ್ಯತೆ ನೀಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸಿ ಎಂದು ಸಚಿವ ಜಿ.ಟಿ.ದೇವೇಗೌಡರು ಶಿಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಮಾತನಾಡಿದ ಅವರು, ಕೆಲವೆಡೆ ಪ್ರತಿ ಶನಿವಾರ ಶಾಲೆಗಳಲ್ಲಿ ಬ್ಯಾಗ್‍ಲೆಸ್ ಡೇ ಆಚರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಮಕ್ಕಳನ್ನು ಪಠ್ಯ ಕಲಿಕೆಗೆ ಮಾತ್ರ ಒಗ್ಗಿಸಬೇಡಿ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ವಿವಿಧ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿ. ಈ ಬಗ್ಗೆ ಮೊದಲು ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಜಾಗೃತಿ ಕಾರ್ಯಕ್ರಮ ನಡೆಸಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಇದಕ್ಕೂ ಮುನ್ನ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ರಾಜಶೇಖರ್, ಜಿಲ್ಲೆಯಲ್ಲಿ 511 ಶಾಲೆಗಳ ಕೊಠಡಿಗಳನ್ನು ನೆಲಸಮಗೊಳಿಸಿ, ಪುನರ್‍ನಿರ್ಮಿಸಬೇಕಿದೆ. 581 ಶಾಲೆಗಳಿಗೆ ಹೆಚ್ಚುವರಿ ಕೊಠಡಿ ಅಗತ್ಯವಿದೆ. 1966 ಶಾಲಾ ಕೊಠಡಿಗಳು ದುರಸ್ತಿ ಮಾಡಿಸಬೇಕಿದೆ. 998 ಶಾಲೆಗಳಿಗೆ ಶೌಚಾ ಲಯ ಹಾಗೂ 256 ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. 212 ಶಾಲಾ ಆವರಣದಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಬೇಡಿಕೆಯಿದ್ದು, ಈ ಎಲ್ಲಾ ಕಾರ್ಯಗಳಿಗೆ 202.65 ಕೋಟಿ ರೂ. ಬೇಡಿಕೆಯಿದೆ ಎಂದು ತಿಳಿಸಿದರು.

ಅಧಿವೇಶನದ ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಪ್ರವಾಸ ಅಷ್ಟರಲ್ಲಿ ಸಮಸ್ಯೆ ಪರಿಹಾರಕ್ಕೆ ಜಿಟಿಡಿ ಸೂಚನೆ

ಮೈಸೂರು: ಬೆಳಗಾವಿ ಅಧಿವೇಶನದ ನಂತರ ತವರು ಕ್ಷೇತ್ರವಾದ ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ 10 ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತೇನೆ. ಅಷ್ಟರಲ್ಲಿ ಸಾರ್ವಜನಿಕ ಸಮಸ್ಯೆ ಯನ್ನು ನಿವಾರಣೆ ಮಾಡಿರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಮೈಸೂರು ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಗಡುವು ನೀಡಿದ ಅವರು, ಸರ್ಕಾರ ರಚನೆಯಾಗಿ 6 ತಿಂಗಳಾ ಯಿತು. ಆದರೆ ಚುನಾವಣೆಗಳು, ದಸರಾ ಇನ್ನಿತರ ಕಾರ್ಯಕ್ರಮಗಳಿಂದಾಗಿ ನನ್ನ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗಿಲ್ಲ. ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುವುದಕ್ಕೂ ಸಾಧ್ಯವಾಗಿಲ್ಲ.

ಆದ್ದರಿಂದ ಬೆಳಗಾವಿ ಅಧಿವೇಶನದ ನಂತರ 10 ದಿನಗಳ ಕಾಲ ಕ್ಷೇತ್ರದಲ್ಲೇ ಇದ್ದು, ಪ್ರವಾಸ ನಡೆಸುತ್ತೇನೆ. ಅಷ್ಟರಲ್ಲಿ ಕುಡಿಯುವ ನೀರು, ವಿದ್ಯುಚ್ಛಕ್ತಿ, ಕಂದಾಯ, ಕೃಷಿ, ನೀರಾವರಿ, ಪಶು ಸಂಗೋ ಪನೆ ಹೀಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ನಿವಾ ರಣೆ ಮಾಡಿರಬೇಕು ಎಂದರು. ಇದಕ್ಕೂ ಮುನ್ನ ಮುಡಾ ಸಭಾಂಗಣದಲ್ಲಿ ಚಾಮುಂಡೇ ಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ, ಮುಡಾ ವ್ಯಾಪ್ತಿ ಯಲ್ಲಿರುವ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

Translate »