ವಾಯುಸೇನೆ ನೇಮಕಾತಿ ರ್ಯಾಲಿಯಲ್ಲಿ 1150 ಯುವಕರು ಹಾಜರು
ಮೈಸೂರು

ವಾಯುಸೇನೆ ನೇಮಕಾತಿ ರ್ಯಾಲಿಯಲ್ಲಿ 1150 ಯುವಕರು ಹಾಜರು

December 8, 2018

ಮೈಸೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2ನೇ ದಿನದ ಭಾರತೀಯ ವಾಯು ಸೇನೆಯ ನೇಮಕಾತಿ ರ್ಯಾಲಿಯಲ್ಲಿ ಮೈಸೂರು, ಬೆಂಗಳೂರು ಒಳಗೊಂಡಂತೆ 20 ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಯುವಕರು ಸಂದರ್ಶನದಲ್ಲಿ ಪಾಲ್ಗೊಂಡು ವಿವಿಧ ಪರೀಕ್ಷೆಗಳನ್ನು ಎದುರಿಸಿದರು.

ಬೆಂಗಳೂರಿನಲ್ಲಿರುವ 7ನೇ ಏರ್‍ಮನ್ ಸೆಲೆಕ್ಷನ್ ಸೆಂಟರ್ ವತಿಯಿಂದ ಮುಂಜಾನೆ 5.30ರಿಂದಲೇ ಭಾರತೀಯ ವಾಯುಸೇನೆಯ ಗ್ರೂಪ್ `ವೈ’ ಟ್ರೇಡ್ ನಲ್ಲಿ ಖಾಲಿಯಿರುವ `ಏರ್‍ಮನ್’ ಹುದ್ದೆಗಳಿಗೆ ನೇಮಕಾತಿ ಮಾಡಲು ಅಭ್ಯರ್ಥಿಗಳ ಸಂದರ್ಶನ ಆರಂಭಿಸಲಾ ಯಿತು. ಬೆಳಿಗ್ಗೆ 9ಗಂಟೆಯವರೆಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕಾ ಗಿತ್ತಾದರೂ ನಿರೀಕ್ಷಿಸಿದ ಸಂಖ್ಯೆಯಲ್ಲಿ ಯುವಕರು ಆಗಮಿ ಸದೆ ಇರುವುದನ್ನು ಗಮನಿಸಿದ ವಾಯುಸೇನೆಯ ಅಧಿಕಾರಿಗಳು ಹೆಚ್ಚುವರಿಯಾಗಿ 1 ಗಂಟೆ ಕಾಲ ಅವಧಿ ವಿಸ್ತರಿಸಿ, ಸೇನಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿದರು. ಇದರಿಂದ 9 ರಿಂದ 10 ಗಂಟೆಯವರೆಗೂ ನೀಡಿದ ಅವ ಕಾಶದಲ್ಲಿ ವಿವಿಧ ಜಿಲ್ಲೆಗಳ 200ಕ್ಕೂ ಹೆಚ್ಚು ಯುವಕರು ಸಂದರ್ಶನಕ್ಕೆ ಆಗಮಿಸಿದರು. ಇದರಿಂದ ಎರಡನೇ ದಿನದ ಸಂದರ್ಶನದಲ್ಲಿ 20 ಜಿಲ್ಲೆಗಳ 1150 ಯುವ ಕರು ಪಾಲ್ಗೊಂಡು ಪರೀಕ್ಷೆ ಒಳಗಾದರು.

ಏರ್‍ಮನ್ ನೇಮಕಾತಿ ರ್ಯಾಲಿಯಲ್ಲಿ 17ರಿಂದ 20 ವರ್ಷದೊಳಗಿನ ಯುವಕರು ಮಾತ್ರ ಪಾಲ್ಗೊಳ್ಳಬಹುದಾಗಿತ್ತು. 1998ರ ಜುಲೈ 14ರಿಂದ 2002ರ ಜೂನ್ 26ರವರೆಗೆ ಜನಿಸಿದವರು ಮಾತ್ರ ಸಂದರ್ಶನಕ್ಕೆ ಹಾಜ ರಾಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಮುಖ್ಯ ದ್ವಾರದ ಬಳಿಯೇ ಅಧಿಕಾರಿಗಳು ಅಭ್ಯರ್ಥಿಗಳ ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂಕಪಟ್ಟಿಯಲ್ಲಿ ನಮೂದಾಗಿ ರುವ ಜನ್ಮ ದಿನಾಂಕವನ್ನು ನೋಡಿ ಮುಂದಿನ ಸುತ್ತಿನ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು.

ಪಿಯುಸಿ ವಿದ್ಯಾರ್ಹತೆಯನ್ನು ಏರ್‍ಮನ್ ಹುದ್ದೆ ಗಳಿಗೆ ಪರಿಗಣಿಸಲಾಗಿತ್ತು. ಕನಿಷ್ಠ 152.5 ಸೆಂ. ಮೀಟರ್ ಎತ್ತರವುಳ್ಳ ಪಿಯುಸಿಯಲ್ಲಿ ಇಂಗ್ಲೀಷ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಶೇ.50ರಷ್ಟು ಅಂಕ ಪಡೆದು ಉತ್ತೀರ್ಣರಾಗಿರುವ ಯುವಕರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿತ್ತು. ಮೈಸೂರು, ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಡಿಕೇರಿ, ದಕ್ಷಿಣ ಕನ್ನಡ, ಮಂಗ ಳೂರು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣ ಗೆರೆ, ಶಿವಮೊಗ್ಗ ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇಂದು ವಿವಿಧ ಸುತ್ತಿನ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನಾಳೆ ದೇಹ ದಾಢ್ರ್ಯ ಹಾಗೂ ಲಿಖಿತ ಪರೀಕ್ಷೆ ನಡೆಯಲಿದೆ.

ವಾಯುಸೇನೆ ಸೇರಲು ಬಂದಿದ್ದ ಯುವಕರು 5.40 ನಿಮಿಷದಲ್ಲಿ 1.6 ಕಿ.ಮಿ ಓಡಬೇಕಾಗಿತ್ತು. ಡಿ.7ರಂದು ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಹಲ ವರು ನಿಗದಿತ ದೂರವನ್ನು ಕ್ರಮಿಸದೆ ಅರ್ಧಕ್ಕೆ ಓಟವನ್ನು ಮೊಟಕುಗೊಳಿಸಿದ್ದಂತೆ, ಎರಡನೇ ದಿನ ರ್ಯಾಲಿಯಲ್ಲಿಯೂ ಓಟದ ಪರೀಕ್ಷೆಯಲ್ಲಿ ಯುವಕರು ಮುಗ್ಗರಿಸಿದರು. ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು ಜಿಲ್ಲೆಗಳ ಯುವಕರು ಓಟದ ಪರೀಕ್ಷೆ ಯಲ್ಲಿ 600 ಮೀಟರ್ ಓಡುವಷ್ಟರಲ್ಲಿಯೇ ಬಳಲಿ ಟ್ರ್ಯಾಕ್‍ನಿಂದ ಹೊರ ಬಂದರು. ಉತ್ತರ ಕರ್ನಾಟದ ಕೆಲವು ಜಿಲ್ಲೆಗಳ ಯುವಕರು ಸವಾಲಾಗಿ ಸ್ವೀಕರಿಸಿ ನಿಗಧಿತ ಸಮಯದಲ್ಲಿ ಗುರಿ ತಲುಪಿದರೆ, ಕೆಲವರು ಐದರಿಂದ 10 ಸೆಕೆಂಡ್‍ಗಳ ವಿಳಂಬವಾಗಿ ಬಂದು ಅವಕಾಶ ಕಳೆದುಕೊಂಡರು.

ಓಟದ ಪರೀಕ್ಷೆಯಲ್ಲಿ ತೇರ್ಗಡೆಯಾದ ಯುವಕರಿಗೆ 8 ಪುಲ್‍ಅಪ್ಸ್, 20 ಪುಶ್‍ಅಪ್ ಹಾಗೂ 20 ಸೆಟಪ್ ಕಸರತ್ತನ್ನು ನಿಗಧಿ ಸಮಯದೊಳಗೆ ಮಾಡುವಂತೆ ಸೂಚಿಸಲಾಯಿತು. ನಂತರ ಅಂಕಪಟ್ಟಿ, ವಾಸದೃಡೀ ಕರಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿ, ಲಿಖಿತ ಪರೀಕ್ಷೆ ಸುತ್ತಿಗೆ ಆಯ್ಕೆ ಮಾಡಲಾಯಿತು. 50 ಅಂಕ ಗಳಿಗೆ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.

ಬೆಂಗಳೂರಿನಲ್ಲಿರುವ 7ನೇ ಏರ್‍ಮನ್ ಸೆಲೆಕ್ಷನ್ ಸೆಂಟರ್‍ನ ಕಮಾಂಡಿಂಗ್ ಆಫಿಸರ್ ವಿಂಗ್ ಕಮಾಂ ಡರ್ ಮಾಯಾಂಕ್ ಕನುಂಗೋ ಅವರ ನೇತೃತ್ವದಲ್ಲಿ ಭಾರತೀಯ ವಾಯುಸೇನೆಯ 75 ಅಧಿಕಾರಿಗಳು ಪಾಲ್ಗೊಂಡಿದ್ದರು. ಇವರೊಂದಿಗೆ ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರೆ, ನಜರ್‍ಬಾದ್ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಪಾಲಿಕೆ ಮತ್ತು ಮುಡಾ ವತಿಯಿಂದ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶಾಮಿಯಾನದ ವ್ಯವಸ್ಥೆ ಕಲ್ಪಿಸ ಲಾಗಿತ್ತು. ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಯುವಕರಿಗೆ ನಜರ್‍ಬಾದ್ ನಲ್ಲಿರುವ ಸರ್ಕಾರಿ ಬೇಸಿಕ್ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಸಚ್ಚಿದಾನಂದ ವಿದ್ಯಾಸಂಸ್ಥೆ, ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡ ಲಾಗಿತ್ತು. ನಾಳೆ 2 ದಿನಗಳ ರ್ಯಾಲಿಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಯುವಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಟ್ಯಾಟೂ ಹಾಕಿಸಿಕೊಂಡಿದ್ದ ಯುವಕ ರಿಗೆ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅವ ಕಾಶ ನಿರಾಕರಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಲವು ಯುವಕರು ಸಂದರ್ಶನಕ್ಕೆ ಹಾಜರಾಗದೆ ವಾಪಸ್ಸಾದರು.

Translate »