ದ್ವಿಪಕ್ಷೀಯ ಒಪ್ಪಂದ ಪಾಲಿಸಲು ಬಣ್ಣಾರಿ  ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ಸ್ಪಷ್ಪ ಸೂಚನೆ
ಮೈಸೂರು

ದ್ವಿಪಕ್ಷೀಯ ಒಪ್ಪಂದ ಪಾಲಿಸಲು ಬಣ್ಣಾರಿ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ಸ್ಪಷ್ಪ ಸೂಚನೆ

December 8, 2018

ಮೈಸೂರು: ಮೈಸೂರು ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮೈಸೂರು ಜಿಲ್ಲೆಯ ರೈತರಿಗೆ ಆದ್ಯತೆ ನೀಡುವಂತೆ ಶುಕ್ರವಾರ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಪ್ರಭಾರ ಜಿಲ್ಲಾಧಿಕಾರಿಯೂ ಆದ ಜಿಪಂ ಸಿಇಓ ಕೆ.ಜ್ಯೋತಿ ಅವರು, ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ಆಗಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರವೇ ನಡೆದುಕೊಳ್ಳುವಂತೆ ಸಭೆ ಯಲ್ಲಿದ್ದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ವೇಲುಸಾಮಿ ಅವರಿಗೆ ಸೂಚಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಸ್ಥಳೀಯ ಕಬ್ಬು ಬೆಳೆಗಾರರನ್ನು ಕಡೆಗಣಿಸಿ, ಹೊರ ಜಿಲ್ಲೆಯಿಂದ ಕಬ್ಬು ಖರೀದಿಸುತ್ತಿದ್ದು, ಇದ ರಿಂದ ಮೈಸೂರು ಜಿಲ್ಲೆಯ ಕಬ್ಬು ಬೆಳೆಗಾರ ರಿಗೆ ಅನ್ಯಾಯವಾಗುತ್ತಿದೆ. ಅಲ್ಲದೆ ಹೊರ ಜಿಲ್ಲೆಯ ರೈತರನ್ನೂ ವಂಚಿಸುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಮೈಸೂರು ಜಿಲ್ಲಾ ಧ್ಯಕ್ಷ ಪಿ.ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಇನ್ನಿತರರು ದೂರಿದರು.
ನಮ್ಮ ಜಿಲ್ಲೆಯ ರೈತರು ಬೆಳೆದ ಕಬ್ಬಿಗೆ 12 ತಿಂಗಳು ಕಳೆದರೂ ಸ್ವಿಕರಿಸದ ಕಾರ್ಖಾನೆ ಯವರು ಬೇರೆ ಜಿಲ್ಲೆಯ ರೈತರು ಬೆಳೆದ ಕಬ್ಬಿಗೆ 9-10 ತಿಂಗಳು ಇರುವಾಗಲೇ ಕಬ್ಬು ಅರೆಯಲು ತರಿಸಿಕೊಂಡು ನಮ್ಮ ರೈತರು ಬೆಳೆದ ಕಬ್ಬಿನೊಂದಿಗೆ ಸೇರಿಸಿಕೊಂಡು ಅರೆಯಲಾಗುತ್ತಿದೆ. ಇದರಿಂದ ಇಳುವರಿ ಕಡಿಮೆ ಎಂದು ಕಾರ್ಖಾನೆಯವರು ಸಬೂಬು ಹೇಳುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿ ರೈತ ರೊಂದಿಗೆ 2016-17ರಲ್ಲಿ ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದವನ್ನು ಪಾಲಿಸದೇ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸರಕಾರವೇ ಸೂಕ್ತ ಆದೇಶ ನೀಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.

ಕಬ್ಬನ್ನು ಕಾರ್ಖಾನೆಗೆ ಲಾರಿ ಮೂಲಕ ತಂದರೂ, ತೂಕ ಹಾಕಿ ತೆಗೆದುಕೊಳ್ಳಲು ಒಂದೆರಡು 3 ದಿನ ಕಾಯಿಸಲಾಗುತ್ತಿದೆ. ಇದ ರಿಂದ ಕಬ್ಬು ಒಣಗಿ, ತೂಕದಲ್ಲಿ ವ್ಯತ್ಯಾಸ ಉಂಟಾಗುವಂತೆ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಖಾನೆಯ ಜಿಎಂ ವೇಲುಸಾಮಿ, ಕಾರ್ಖಾನೆಯ ವೇ ಬ್ರಿಡ್ಜ್‍ನಲ್ಲಿ ದಿನನಿತ್ಯ 250ರಿಂದ 300 ಕಬ್ಬಿನ ಲಾರಿಗಳ ತೂಕದ ಅಳತೆ ಮಾಡುತ್ತಿದ್ದು, ತೂಕದಲ್ಲಿ ಯಾವುದೇ ಮೋಸ ಮಾಡ ಲಾಗುತ್ತಿಲ್ಲ ಎಂದು ಸ್ಪಷ್ಪಪಡಿಸಿದರು.
ಬಳಿಕ ಪ್ರಭಾರ ಜಿಲ್ಲಾಧಿಕಾರಿ ಕೆ. ಜ್ಯೋತಿ ಅವರು, ಕಾರ್ಖಾನೆಯಲ್ಲಿ ಸಾಕಷ್ಟು ಸ್ಥಳಾವ ಕಾಶವಿದ್ದು, ರೈತರ ಬೇಡಿಕೆಯಂತೆ ಹೆಚ್ಚು ವರಿ ವೇ ಬ್ರಿಡ್ಜ್‍ಗಳನ್ನು ಬಳಸಿಕೊಂಡು, ರೈತರಿಗೆ ಅನುಕೂಲ ಮಾಡಿಕೊಡುವುದನ್ನು ಬಿಟ್ಟು ಅನಗತ್ಯವಾಗಿ ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿದ್ದೀರಿ. ಆದಷ್ಟು ಬೇಗ ದ್ವಿಪಕ್ಷೀಯ ಒಪ್ಪಂದ ಪ್ರಕಾರವೇ ನಡೆದು ಕೊಳ್ಳಿ ಎಂದು ಕಾರ್ಖಾನೆಯ ಜಿಎಂ ವೇಲುಸಾಮಿ ಅವರನ್ನು ತರಾಟೆಗೆ ತೆಗೆದು ಕೊಂಡು ತಾಕೀತು ಮಾಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇ ಶಕ ಮಹಾಂತೇಶಪ್ಪ, ರೈತ ಮುಖಂಡ ರಾದ ಹಾಡ್ಯ ರವಿ, ಕಿರಗಸೂರು ಶಂಕರ್, ವರಕೊಡು ಕೃಷ್ಣೇಗೌಡ, ಕುರಬೂರು ಸಿz್ದÉೀಶ್, ಸಿ.ಕೆ.ರವೀಂದ್ರ, ಮಾರಪ್ಪ ಇನ್ನಿತ ರರು ಭಾಗವಹಿಸಿದ್ದರು

Translate »