ಶೈಕ್ಷಣಿಕ ನೆರವು ಸ್ಥಗಿತಕ್ಕೆ  ಪಾಪ್ಯುಲರ್ ಫ್ರಂಟ್ ವಿರೋಧ
ಮೈಸೂರು

ಶೈಕ್ಷಣಿಕ ನೆರವು ಸ್ಥಗಿತಕ್ಕೆ ಪಾಪ್ಯುಲರ್ ಫ್ರಂಟ್ ವಿರೋಧ

September 15, 2021

ಮೈಸೂರು, ಸೆ.14-ಅರಿವು ಶೈಕ್ಷಣಿಕ ಸಾಲ ನವೀಕರಣವನ್ನು ನಿಲ್ಲಿಸಿ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರಿ ನಿಗಮ ಕೆಎಂಡಿಸಿಯ ಕ್ರಮಕ್ಕೆ ಪಾಪ್ಯು ಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯ ದರ್ಶಿ ನಾಸಿರ್ ಪಾಶ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರವು ದುಬಾರಿಯಾಗಿ ಪರಿಣಮಿಸುತ್ತಿರುವ ಈ ಸನ್ನಿವೇಶದಲ್ಲಿ ಉನ್ನತ ಶಿಕ್ಷಣದ ಕನಸು ಹೊತ್ತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ನಿಗಮದಿಂದ ದೊರ ಕುತ್ತಿದ್ದ ಸಾಲ ಯೋಜನೆಯು ಬಹಳಷ್ಟು ನೆರವಾಗು ತ್ತಿತ್ತು. ಆದರೆ ಸರಕಾರವು ಅಲ್ಪಸಂಖ್ಯಾತರ ನಿಗಮದ ಮೂಲಕ ನೀಡುತ್ತಿದ್ದ ಇಂತಹ ಶೈಕ್ಷಣಿಕ ನೆರವಿನ ಅನುದಾನವನ್ನು ನಿಧಾನವಾಗಿ ಕಡಿತಗೊಳಿಸುತ್ತಾ ಬರುತ್ತಿದೆ. ಈ ಹಿಂದೆ ಪಿಎಚ್.ಡಿ ಮತ್ತು ಎಂ.ಫಿಲ್. ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿ ಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನೂ ಕೋವಿಡ್ ನೆಪವೊಡ್ಡಿ ಕಡಿತಗೊಳಿಸ ಲಾಗಿತ್ತು. ಇವೆಲ್ಲವೂ ಅಲ್ಪಸಂಖ್ಯಾತ ಸಮುದಾಯಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರವಾಗಿದೆ ಎಂದು ದೂರಿದ್ದಾರೆ.

ರಾಜ್ಯದ ಬಿಜೆಪಿ ಸರಕಾರವು ತಾಳುತ್ತಿರುವ ಈ ರೀತಿಯ ಅಲ್ಪಸಂಖ್ಯಾತ ವಿರೋಧಿ ಧೋರಣೆಯು ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಮಾರಕವಾಗಿದೆ. ಅರಿವು ಶೈಕ್ಷಣಿಕ ಸಾಲವನ್ನು ತಡೆ ಹಿಡಿಯುವುದರಿಂದ ಅಲ್ಪಸಂಖ್ಯಾತ ಸಮುದಾಯದ ಸಾವಿರಾರು ವಿದ್ಯಾರ್ಥಿ ಗಳ ಉನ್ನತ ಶಿಕ್ಷಣದ ಕನಸು ಕಮರಿ ಹೋಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತಾರತಮ್ಯ ನೀತಿಯನ್ನು ಕೈಬಿಟ್ಟು ಸಂವಿಧಾನದ ಆಶಯದಡಿಯಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಬೇಕು. ಅದೇ ರೀತಿ ವಿದ್ಯಾರ್ಥಿ ಸಮುದಾಯವೂ ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂದು ನಾಸಿರ್ ಪಾಶ ಕರೆ ನೀಡಿದ್ದಾರೆ.

Translate »