ಕೊಡಗಲ್ಲಿ ವೀಕೆಂಡ್ ಕಫ್ರ್ಯೂ ತೆರವಿಗೆ ಒತ್ತಾಯ
ಕೊಡಗು

ಕೊಡಗಲ್ಲಿ ವೀಕೆಂಡ್ ಕಫ್ರ್ಯೂ ತೆರವಿಗೆ ಒತ್ತಾಯ

August 21, 2021

ಗೋಣಿಕೊಪ್ಪಲು, ಆ.20- ಕೋವಿಡ್ ವಿಚಾರದಲ್ಲಿ ಕೊಡಗಿನಲ್ಲಿ ವೀಕೆಂಡ್ ಕಫ್ರ್ಯೂ ತೆರವುಗೊಳಿಸುವ ಮೂಲಕ ಪ್ರವಾಸೋದ್ಯ ಮಕ್ಕೆ ಅವಕಾಶ ನೀಡಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಭಿತರ ಒಕ್ಕೂ ಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಗೋಣಿಕೊಪ್ಪಲುವಿನ ಖಾಸಗಿ ರೆಸಾರ್ಟ್ ನಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರ ಗಳನ್ನು ಮುಂದಿಟ್ಟುಕೊಂಡು ಪ್ರವಾಸೋ ದ್ಯಮಕ್ಕೆ ಕೊಡಗಿನಲ್ಲಿ ಅವಕಾಶ ನಿರಾಕರಿಸ ಲಾಗಿದೆ. ಇದರಿಂದಾಗಿ ಕೊಡಗಿನಲ್ಲಿರುವ 33 ಸಾವಿರ ಮಂದಿ ಉದ್ಯೋಗ ವಂಚಿತ ರಾಗಿದ್ದಾರೆ. ಕೊರೊನಾದೊಂದಿಗೆ ನಾವುಗಳು ಹೊಂದಾಣಿಕೆಯ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೊಂದೇ ನಮ್ಮ ಮುಂದಿರುವ ಮಾರ್ಗ ಎಂದರು.

ವೀಕೆಂಡ್ ಕಫ್ರ್ಯೂ ತೆರವುಗೊಳಿಸಿದಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ. ಇದರಿಂದಾಗಿ ಮತ್ತೆ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ. ನೋವಿನ ಲ್ಲಿರುವ ಕುಟುಂಬಕ್ಕೆ ಸರ್ಕಾರ ಸ್ಪಂದಿಸಿದಂ ತಾಗಲಿದೆ. ಸರ್ಕಾರ ನೀಡುವ ಮಾನದಂಡ ಗಳನ್ನು ಅನುಸರಿಸಿ ಪ್ರವಾಸೋದ್ಯಮ ಮುಂದುವರೆಸಲು ಅವಕಾಶ ಕಲ್ಪಿಸಿಕೊಡ ಬೇಕು. ವೀಕೆಂಡ್ ಕಫ್ರ್ಯೂ ಜಿಲ್ಲೆಯಲ್ಲಿ ತೆರವುಗೊಳಿಸಬೇಕು, ಕೇರಳ ಗಡಿ ಭಾಗದಲ್ಲಿ ಇನ್ನಷ್ಟು ಬಿಗಿ ಕಾರ್ಯ ನಡೆಸಲು ನಮ್ಮ ಅಭ್ಯಂ ತರವಿಲ್ಲ ಎಂದು ಮಂಜುನಾಥ್ ತಿಳಿಸಿದರು.

ಈಗಾಗಲೇ ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಂತಿಮವಾಗಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಆ.25 ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಪ್ರವಾಸೋದ್ಯಮ ನಂಬಿರುವ ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸ ಲಿದ್ದಾರೆ ಎಂದು ತಿಳಿಸಿದರು.

ಪ್ರವಾಸಿಗರು ಆಗಮಿಸುವ ಸಂದರ್ಭ ಜಿಲ್ಲಾಡಳಿತ ನೀಡುವ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಲಾಗುವುದು, ವಾರದ ಕೊನೆಯ ದಿನಗಳಲ್ಲಿ ಈ ರೀತಿಯ ಕಫ್ರ್ಯೂ ಜಾರಿ ಗೊಳಿಸಿರುವುದರಿಂದ ತೊಂದರೆ ಸಿಲುಕಿ ದ್ದೇವೆ. ಇದನ್ನೇ ನಂಬಿರುವ ಜನರು ತಮ್ಮ ಜೀವನ ನಿರ್ವಹಣೆಗೆ ಕಷ್ಟಪಡು ವಂತಾಗಿದೆ ಎಂದು ಸಭೆಗೆ ವಿವರಿಸಿದರು.

ದಕ್ಷಿಣ ಕೊಡಗಿನ ವಿವಿಧ ಭಾಗದಿಂದ ಆಗಮಿಸಿದ ರೆಸಾರ್ಟ್, ಹೋಂಸ್ಟೇ ಮಾಲೀಕರು ಧ್ವನಿಗೂಡಿಸಿ ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನ ಸೆಳೆಯುವ ಕಾರ್ಯಕ್ರಮ ನಡೆಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೊಡಗು ಪ್ರವಾಸೋದ್ಯಮ ಅವಲಂಭಿತರ ಒಕ್ಕೂಟದ ಉಪಾಧ್ಯಕ್ಷ ಕೆ.ವರದಾ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಪ್ರ.ಕಾರ್ಯದರ್ಶಿ ಕೆ.ಶಿವಕುಮಾರ್, ಜಂಟಿ ಕಾರ್ಯದರ್ಶಿ ಎಂ.ಬಿ.ಮಂಜುನಾಥ್, ಸದಸ್ಯರಾದ ನಿತಿನ್ ತಮ್ಮಯ್ಯ, ಧರ್ಮಜ, ದ. ಕೊಡಗಿನ ಕಾಟೀಮಾಡ ಶರೀನ್ ಮುತ್ತಣ್ಣ, ಪ್ರಮೋದ್ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ದಿನೇಶ್, ಜಮ್ಮಡ ಕರಣ್, ಪ್ರಸನ್ನ, ಲೋಕೇಶ್, ಅಂತೋಣಿ, ಶ್ರೀಮಂತ್, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

Translate »