ಎಲ್ಲಾ ಬಣ ಒಂದಾಗಿಸಲು ದಲಿತ ಸಂಘರ್ಷ ಸಮಿತಿ ಒಕ್ಕೂಟ ರಚನೆ
ಮೈಸೂರು

ಎಲ್ಲಾ ಬಣ ಒಂದಾಗಿಸಲು ದಲಿತ ಸಂಘರ್ಷ ಸಮಿತಿ ಒಕ್ಕೂಟ ರಚನೆ

July 24, 2020

ಮೈಸೂರು, ಜು.23(ಪಿಎಂ)- ರಾಜ್ಯದ ದಲಿತ ಸಂಘರ್ಷ ಸಮಿತಿಯ ಎಲ್ಲಾ ಬಣ ಗಳನ್ನು ಒಂದೇ ವೇದಿಕೆಯಡಿ ತರುವ ಮೂಲಕ ಸಂಘಟನೆಗೆ ಹಿಂದೆ ಇದ್ದ ಬಲ ನೀಡುವ ಉದ್ದೇಶದಿಂದ `ದಲಿತ ಸಂಘರ್ಷ ಸಮಿತಿ ಒಕ್ಕೂಟ’ ರಚನೆ ಮಾಡಲಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಕಾರ್ಯ ಕಾರಿ ಸಮಿತಿ ಸದಸ್ಯ ಬಸವರಾಜ ದೇವ ನೂರು, 4 ದಶಕಗಳಿಗೂ ಹೆಚ್ಚು ಕಾಲ ನಾಡಿನ ದಿಕ್ಕು-ದೆಸೆಯಂತಿದ್ದ `ದಲಿತ ಸಂಘರ್ಷ ಸಮಿತಿ’ (ದಸಂಸ) ಈಗ ಮತ್ತೆ ಧ್ವನಿ ಎತ್ತಬೇ ಕಿದೆ. ರಚನಾತ್ಮಕ ಕಾರ್ಯಗಳ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಯಸಿದ ಪ್ರಜಾಪ್ರಭುತ್ವ ಸಮಾಜವನ್ನು ಕಟ್ಟಬೇಕಿದೆ ಎಂದರು.

ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ದಸಂಸ ಬಣಗಳನ್ನು ಒಂದೇ ವೇದಿಕೆಗೆ ತಂದು ಒಗ್ಗೂಡಿಸಲು ಮೈಸೂರು ಜಿಲ್ಲೆಯಲ್ಲಿ ಪ್ರಯತ್ನಕ್ಕೆ ಮುಂದಾಗಲಾಗಿದೆ. `ದಲಿತ ಸಂಘರ್ಷ ಸಮಿತಿ ಒಕ್ಕೂಟ’ ರಚಿಸಲಾ ಗಿದೆ. ಈ ಒಕ್ಕೂಟವು ಮೈಸೂರು ಜಿಲ್ಲೆ ಯಲ್ಲಿ ಪ್ರಾಯೋಗಿಕವಾಗಿ ಕೆಲವೊಂದು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಿದೆ. ಆ ಮೂಲಕ ಒಕ್ಕೂಟದಡಿ ಎಲ್ಲಾ ಬಣಗಳು ಸಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ಒಕ್ಕೂಟದ ಸಂಚಾಲಕರಾಗಿ ಹಿರಿಯ ಹೋರಾಟಗಾರ ಬೆಟ್ಟಯ್ಯ ಕೋಟೆ, ಸಂಘಟನಾ ಸಂಚಾಲಕ ರಾಗಿ ಸಾಂಸ್ಕೃತಿಕ ವಿಭಾಗಕ್ಕೆ ಚುಂಚನ ಹಳ್ಳಿ ಮಲ್ಲೇಶ್, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ವಿಭಾಗಕ್ಕೆ ರಾಜಶೇಖರ ಕೋಟೆ, ಆಂತರಿಕ ಶಿಸ್ತು ಮತ್ತು ಸಂಘಟನೆ ವಿಭಾಗಕ್ಕೆ ಆಲಗೂಡು ಶಿವಕುಮಾರ್, ಅಸಂಘಟಿತ ಕಾರ್ಮಿಕರು ಮತ್ತು ಪೌರ ಕಾರ್ಮಿಕರ ವಿಭಾಗಕ್ಕೆ ಕಾರ್ಯ ಬಸವಣ್ಣ, ಖಜಾಂಚಿಯಾಗಿ ಆರ್.ಎಸ್.ದೊಡ್ಡಣ್ಣ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದರು. ಒಕ್ಕೂಟದ ಕಾರ್ಯಕಾರಿ ಸಮಿತಿಯಲ್ಲಿ ವರದಯ್ಯ, ಕುಮಾರಸ್ವಾಮಿ ಕೂಡ್ಲಾಪುರ, ಬಸವರಾಜ ದೇವನೂರು, ಪಿ.ಸಂಬಯ್ಯ, ಡಿ.ಮಹದೇವಯ್ಯ, ಲಕ್ಷ್ಮಣ ಹೊಸಕೋಟೆ, ಹೆಚ್.ಜನಾರ್ಧನ್ (ಜನ್ನಿ), ಮಹದೇವ ನೆಲಮಾಕನಹಳ್ಳಿ, ಹೆಚ್.ಎಂ. ಪುಟ್ಟಮಾದಯ್ಯ, ಕೆ.ಎನ್.ಶಿವಲಿಂಗಯ್ಯ (ಗಜೇಂದ್ರ) ಅವರಿದ್ದಾರೆ ಎಂದರು.

ಒಕ್ಕೂಟದ ಸಂಚಾಲಕ ಬೆಟ್ಟಯ್ಯ ಕೋಟೆ, ಖಜಾಂಚಿ ಆರ್.ಎಸ್.ದೊಡ್ಡಣ್ಣ, ಪದಾಧಿಕಾರಿ ಗಳಾದ ಚುಂಚನಹಳ್ಳಿ ಮಲ್ಲೇಶ್, ರಾಜ ಶೇಖರ ಕೋಟೆ, ಕಾರ್ಯ ಬಸವಣ್ಣ, ಆಲಗೂಡು ಶಿವಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »