ಚೀನಾದಿಂದ ಕಾಲ್ಕಿತ್ತಿರುವ ಬೃಹತ್ ಕೈಗಾರಿಕೆ ರಾಜ್ಯಕ್ಕೆ ಸೆಳೆಯಲು ಭಾರೀ ರಿಯಾಯಿತಿ ಪ್ರಕಟ
ಮೈಸೂರು

ಚೀನಾದಿಂದ ಕಾಲ್ಕಿತ್ತಿರುವ ಬೃಹತ್ ಕೈಗಾರಿಕೆ ರಾಜ್ಯಕ್ಕೆ ಸೆಳೆಯಲು ಭಾರೀ ರಿಯಾಯಿತಿ ಪ್ರಕಟ

July 24, 2020

ಬೆಂಗಳೂರು, ಜು.23(ಕೆಎಂಶಿ)- ಚೀನಾದಿಂದ ಗುಳೆ ಎದ್ದಿರುವ ಬೃಹತ್ ಕೈಗಾ ರಿಕೆಗಳಿಗೆ ರಾಜ್ಯದಲ್ಲಿ ಅವಕಾಶ ಮಾಡಿ ಕೊಡಲು ದೊಡ್ಡ ಪ್ರಮಾಣ ದಲ್ಲಿ ರಿಯಾಯಿತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, ಇದರಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ನೂತನ ಕೈಗಾರಿಕಾ ನೀತಿಗೆ ಸಂಪುಟ ಸಭೆಯಲ್ಲಿ ಅನುಮತಿ ಪಡೆದ ನಂತರ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಯನ್ನೂ ಜಾರಿಗೆ ತರಲಾಗಿದ್ದು, ಅದೇ ರೀತಿ ಕಾರ್ಮಿಕ ಕಾಯ್ದೆ ಯನ್ನು ಕೆಲ ಬದಲಾವಣೆ ಮಾಡಿ, ಇನ್ನು ಮುಂದೆ ಮಹಿಳಾ ಕಾರ್ಮಿಕರು ಹಗಲು ರಾತ್ರಿ ದುಡಿಯಲು ಅವಕಾಶ ಮಾಡಿ ಕೊಡಲಾಗಿದೆ. ಜೊತೆಗೆ ಕಾರ್ಮಿಕರು 8 ಗಂಟೆ ಬದಲು 10ರಿಂದ 12 ಗಂಟೆಗಳ ಕಾಲ ದುಡಿಯಲು ಅವಕಾಶ ಮಾಡಿ ಕೊಡಲಾಗಿದೆ ಎಂದರು.

ದೇಶದ ಕೈಗಾರಿಕಾ ವಲಯದಲ್ಲಿ 4ನೇ ಸ್ಥಾನದಲ್ಲಿರುವ ರಾಜ್ಯವನ್ನು 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಈ ಕೈಗಾರಿಕಾ ನೀತಿ ಅನುಕೂಲ ಆಗಲಿದೆ ಎಂದರು. ಕೈಗಾರಿಕಾ ಬೆಳವಣಿಗೆ ಪ್ರತಿವರ್ಷ ಶೇ.10ರಷ್ಟು ಮಾಡುವ ಉದ್ದೇಶ ಇದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಲು ಈ ನೀತಿಯಲ್ಲಿ ಅವಕಾಶ ಕೊಡಲಾಗಿದೆ. ಹಿಂದುಳಿದ ಪ್ರದೇಶ ಗಳಲ್ಲಿ ಹೂಡುವ ಬಂಡವಾಳಗಾರರಿಗೆ ರಿಯಾಯಿತಿ ನೀಡಲು ತೀರ್ಮಾ ನಿಸಲಾಗಿದೆ. ಆಟೋ ಮೊಬೈಲ್, ಡಿಫೆನ್ಸ್, ಎಲೆಕ್ಟ್ರಿಕ್ ವೆಹಿಕಲ್, ಮೆಡಿಕಲ್ ಡಿವೈಸಸ್, ರಿನಿವೆಬಲ್ ಎನರ್ಜಿ ಕ್ಷೇತ್ರದ ಕೈಗಾರಿಕೆಗಳಿಗೆ ಆದ್ಯತೆ ದೊರೆಯಲಿದೆ. ಎಂಎಸ್‍ಎಂಇಗಳ ಅಭಿವೃದ್ಧಿ ಮತ್ತು ಉತ್ತೇಜನ ಮಾಡಲು ತೀರ್ಮಾನ ಮಾಡಲಾಗಿದ್ದು, ಬಂಡವಾಳ ಹೂಡಿಕೆಗೆ ವಾರ್ಷಿಕ ಕ್ರಿಯಾ ಯೋಜನೆ ಮಾಡಲು ಉದ್ದೇಶಿಸಲಾಗಿದೆ. ಕೈಗಾರಿಕಾ ಉತ್ಪಾದನೆಗಾಗಿ ಜಮೀನು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

Translate »